Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ಯೋಗೀಶ್ ಗೌಡ ಕೊ** ಪ್ರಕರಣ : ವಿನಯ್ ಕುಲಕರ್ಣಿ ಅಪರಾಧಿ ಎಂದು ಘೋಷಣೆ..!

---Advertisement---

ಇಂದು ಎಲ್ಲರ ಚಿತ್ತ ವಿನಯ್ ಕುಲಕರ್ಣಿ ಅವರ ಕೇಸ್ ನತ್ತ ನೆಟ್ಟಿತ್ತು. ಯೋಗೀಶ್ ಗೌಡ ಕೊ** ಕೇಸಲ್ಲಿ ತೀರ್ಪು ಏನಾಗಬಹುದು ಎಂಬ ಕುತೂಹಲ ಸಹಜವಾಗಿಯೇ ಇತ್ತು. ಇದೀಗ ಜನಪ್ರತಿನಿಧಿಗಳ ನ್ಯಾಯಾಲಯ ತೀರ್ಪನ್ನ ನೀಡಿದ್ದು, 19 ಆರೋಪಿಗಳು ದೋಷಿ ಎಂದು ಆದೇಶ ಹೊರ ಬಿದ್ದಿದೆ. ವಿನಯ್ ಕುಲಕರ್ಣಿ ಅವರು ಅಪರಾಧಿ ಎಂದು ತೀರ್ಪು ನೀಡಿದೆ.

ನ್ಯಾಯಾಧೀಶರಾದ ಸಂತೋಷ್ ಗಜಾನನ ಭಟ್ ಅವರು ಈ ತೀರ್ಪನ್ನ ಪ್ರಕಟಿಸಿದ್ದಾರೆ‌. 21 ಆರೋಪಿಗಳು ಇಂದು ಕೋರ್ಟ್ ಗೆ ಹಾಜರಾಗಿದ್ದರು. ಅದರಲ್ಲಿ ಇಬ್ಬರು ಸಾಕ್ಷಿಗಳಾಗಿದ್ದಾರೆ. ಈ ಸಂಬಂಧ ವಿನಯ್ ಕುಲಕರ್ಣಿ ಅವರಿಗೆ ಜೈಲು ಫಿಕ್ಸ್ ಆಗಿದೆ. ಹೊರಗಿದ್ದುಕೊಂಡೆ ವಿನಯ್ ಕುಲಕರ್ಣಿ ಜನರ ಮನಸ್ಸನ್ನ ಗೆದ್ದಿದ್ದರು, ಶಾಸಕರಾಗಿ ಆಯ್ಕೆ ಕೂಡ ಆಗಿದ್ದರು. ಈಗ ಅಪರಾಧಿ ಎಂದು ಸಾಬೀತಾಗಿದ್ದು, ಶಿಕ್ಷೆಗೂ ಗುರಿಯಾಗಿದ್ದಾರೆ. ಶಾಸಕ ಸ್ಥಾನದಿಂದಾನೂ ಅಮಾನತಾಗಬೇಕಾಗುತ್ತದೆ. ಕೇಸಲ್ಲಿ ಎಷ್ಟು ವರ್ಷ ಶಿಕ್ಷೆ ಎಂಬುದನ್ನ ನೋಡಬೇಕಿದೆ. ಎರಡು ವರ್ಷಕ್ಕೂ ಹೆಚ್ಚಿನ ಪ್ರಮಾಣದಲ್ಲಿ ಶಿಕ್ಷೆಯಾದರೆ ಶಾಸಕ ಸ್ಥಾನವೂ ಹೋಗಲಿದೆ.

ವಿನಯ್ ಕುಲಕರ್ಣಿ ಕಳೆದ ಫೆಬ್ರವರಿಯಲ್ಲಷ್ಟೇ ಸುಪ್ರೀಂ ಕೋರ್ಟ್ ನಿಂದ ಜಾಮೀನು ಪಡೆದು ಹೊರಗೆ ಬಂದಿದ್ದರು. ಈಗ ಮತ್ತೆ ಜೈಲು ಪಾಲಾಗಿದ್ದಾರೆ. ನಾಳೆಯೂ ಈ ಕೇಸ್ ಸಂಬಂಧ ವಾದ ಪ್ರತಿವಾದ ನಡೆಸಲಿದೆ. ಶಿಕ್ಷೆಯ ಪ್ರಮಾಣದ ಬಗ್ಗೆ ವಾದ ಮಂಡನೆಯನ್ನು ಮಾಡಲಿದ್ದಾರೆ. 2016ರಲ್ಲಿ ನಡೆದ ಕೊಲೆ ಪ್ರಕರಣ ಇದಾಗಿತ್ತು. ಇಂದು ಆರೋಪಿಗಳನ್ನ ದೋಷಿ ಎಂದು ಕೋರ್ಟ್ ಸೂಚಿಸಿದೆ. ವಿನಯ್ ಕುಲಕರ್ಣಿ ಅವರಿಗೆ ಬಹಳಷ್ಟು ಆತ್ಮವಿಶ್ವಾಸವಿತ್ತು. ಇದರಿಂದ ಬಚಾವ್ ಆಗ್ತೇನೆ ಎಂಬ ಬಗ್ಗೆ ಮಾತನ್ನಾಡಿದ್ದರು. ಆದರೆ ಕೋರ್ಟ್ ದೋಷಿ ಎಂದು ತೀರ್ಪು ನೀಡಿದೆ.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now