ತುಮಕೂರು: ರಾಜ್ಯ ಕಾಂಗ್ರೆಸ್ ನಲ್ಲಿ ಮತ್ತೊಂದು ಚರ್ಚೆ ಶುರಿವಾಗಿದೆ. ಅದುವೆ ಸಿದ್ದರಾಮಯ್ಯ ಅವರ ಬೆಂಬಲಿಗರೇ ಟಾರ್ಗೆಟ್ ಆಗಿದ್ದು ಯಾಕೆ ಅನ್ನೋದು. ಸದ್ಯದ ಬೆಳವಣಿಗೆಯನ್ನ ಗಮನಿಸಿದರೆ ಸಿದ್ದರಾಮಯ್ಯ ಅವರ ಆಪ್ತರೇ ಕಿಕ್ ಔಟ್ ಆಗಿರೋದು. ರಾಜಣ್ಣ ಆಯ್ತು, ಈಗ ನಜೀರ್, ಜಬ್ಬರ್ ಕೂಡ ತಲೆದಂಡವಾಯ್ತು. ಇದರ ನಡುವೆ ಕೆಎನ್ ರಾಜಣ್ಣ ಅವರು ಪ್ರತಿಕ್ರಿಯೆ ನೀಡಿದ್ದಾರೆ. ಕೆಪಿಸಿಸಿ ಅಧ್ಯಕ್ಷ ಡಿಕೆಶಿ ಹಾಗೂ ಸದ್ಗುರು ಭೇಟಿ ಬಗ್ಗೆಯೂ ಮಾತನ್ನಾಡಿದ್ದಾರೆ.
ಕಾಂಗ್ರೆಸ್ ಪಕ್ಷ ಅಂದ್ರೆ ಶಿಸ್ತು ಪಕ್ಷ. ಶಿಸ್ತು ಜಾರಿ ಮಾಡುವಾಗ, ಸದ್ಗುರು, ರಾಹುಲ್ ಗಾಂಧಿ ಅವರ ಬಗ್ಗೆ ಮಾತನ್ನಾಡಿದ್ದರು. ರಾಹುಲ್ ಗಾಂಧಿ ಅಂದ್ರೆ ನಂಗೊತ್ತಿಲ್ಲ ಅಂದ್ರು. ಅವರ ಜೊತೆಯಲ್ಲಿಯೇ ಹೋಗಿ, ಕೂತ್ಕೊಂಡ್ರೆ ಶಿಸ್ತು ಮೀರಿದಂಗೆ ಆಗಲ್ವಾ. ದೊರೆ ಮಾಡಿದ್ದಕ್ಕೆ ದಂಡ ಇಲ್ಲ ಎಂಬ ಮಾತು ಇದೆ. ವೇದಗಳು ಸುಳ್ಳಾದರೂ ಗಾದೆಗಳು ಸುಳ್ಳಾಗುವುದಿಲ್ಲ. ಈಗ ಅದೇ ರೀತಿ ನಡೀತಾ ಇದೆ, ನಡೀಲಿ ಮುಂದೆ ನೋಡೋಣಾ ಎಂದಿದ್ದಾರೆ.
ವೋಟ್ ಚೋರಿ ವಿಚಾರದಲ್ಲಿ ನಮ್ಮವರದ್ದೇ ತಪ್ಪಿದೆ ಎಂಬ ಮಾತನ್ನ ಹೇಳಿದ್ದಂತ ರಾಜಣ್ಣ ಅವರನ್ನ ಸಂಪುಟದಿಂದಾನೇ ವಜಾಮಾಡಿದ್ದರು. ಅದರಿಂದ ನೊಂದಿರುವಂತ ರಾಜಣ್ಣ ಅವರು ಈ ಸಂಬಂಧ ಪ್ರಶ್ನೆಯನ್ನ ಕೇಳ್ತಿದ್ದಾರೆ. ಸದ್ಗುರು ಅವರು ರಾಹುಲ್ ಗಾಂಧಿ ಅವರ ಬಗ್ಗೆ ಮಾತನ್ನಾಡಿದ್ದವರು ಅಂಥವರ ಜೊತೆಗೆ ವೇದಿಕೆ ಹಂಚಿಕೊಳ್ಳಬಹುದಾ..? ಆರ್ ಎಸ್ ಎಸ್ ಗೀತೆಯನ್ನ ಹಾಡಿದ್ದರು. ಅವರ ವಿರುದ್ಧ ಯಾಕೆ ಯಾವುದೇ ಕ್ರಮ ಆಗಿಲ್ಲ ಎಂಬ ಪ್ರಶ್ನೆ ಅವರದ್ದು. ದೊರೆಗಳು ಏನೇ ಮಾಡಿದರು ನಡೆಯುತ್ತೆ ಎಂದು ಹೇಳುವ ಮೂಲಕ ಡಿಕೆಶಿಗೆ ತಿರುಗೇಟು ನೀಡಿದ್ದಾರೆ.
ಸಾರ್ವಜನಿಕ ಕುಂದುಕೊರತೆ ವಿಭಾಗ : ನಿಮ್ಮ ಧ್ವನಿ - ನಮ್ಮ ವೇದಿಕೆ
ನಿಮ್ಮ ಊರಿನ ಸಮಸ್ಯೆಗಳು ಇನ್ನು ಮುಂದೆ ಕೇವಲ ಚರ್ಚೆಯಾಗಬಾರದು, ಅವುಗಳಿಗೆ ಪರಿಹಾರ ಸಿಗಬೇಕು.
ವರದಿ ಮಾಡುವುದು ಹೇಗೆ?
- ನಿಮ್ಮ ಸುತ್ತಮುತ್ತಲಿನ ರಸ್ತೆ, ನೀರು, ವಿದ್ಯುತ್ ಸಮಸ್ಯೆಗಳ ಫೋಟೋ, ವಿಡಿಯೋ ಅಥವಾ ಮಾಹಿತಿ ನಮಗೆ ಕಳುಹಿಸಿ.
ನಾವು ಏನು ಮಾಡುತ್ತೇವೆ?
- ನೀವು ಕಳುಹಿಸಿದ ವರದಿಗಳನ್ನು suddione.com ನಲ್ಲಿ ಪ್ರಕಟಿಸುತ್ತೇವೆ.
- ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದು ಪರಿಹಾರಕ್ಕಾಗಿ ಒತ್ತಾಯಿಸುತ್ತೇವೆ.
- ನಿಮ್ಮೂರಿನ ಅಭಿವೃದ್ಧಿಗೆ ನಿಮ್ಮೊಂದಿಗೆ ಧ್ವನಿಗೂಡಿಸುತ್ತೇವೆ.












