ಧಾರವಾಡ: ಜನಪ್ರತಿನಿಧಿಗಳ ನ್ಯಾಯಾಲಯದಲ್ಲಿ ಇಂದು ಯೋಗೀಶ್ ಗೌಡ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ತೀರ್ಪು ಹೊರ ಬೀಳಲಿದೆ. ಮಧ್ಯಾಹ್ನದ ವೇಳೆಗೆ ಅಂತಿಮ ತೀರ್ಪು ಬರಲಿದೆ. 2016ರಲ್ಲಿ ನಡೆದಿದ್ದ ಧಾರವಾಡ ಜಿಲ್ಲಾ ಪಂಚಾಯತ್ ಸದಸ್ಯ ಯೋಗೀಶ್ ಗೌಡ ಕೊಲೆ ಪ್ರಕರಣದ ಅಂತಿಮ ತೀರ್ಪು ಇವತ್ತು ನೀಡ್ತಾ ಇದೆ. ಕಾಂಗ್ರೆಸ್ ಶಾಸಕ ವಿನಯ್ ಕುಲಕರ್ಣಿ ಸೇರಿದಂತೆ ಒಟ್ಟು 21 ಜನರ ಭವಿಷ್ಯ ಇಂದು ತೀರ್ಮಾನವಾಗಲಿದೆ.

ಈ ತೀರ್ಪು ಏಪ್ರಿಲ್ 9ಕ್ಕೆ ಬರಬೇಕಿತ್ತು. ಆದರೆ ತಾಂತ್ರಿಕ ಸಮಸ್ಯೆಯಿದ್ದ ಕಾರಣಕ್ಕೆ ತೀರ್ಪನ್ನ ನ್ಯಾಯಾಲಯ ಮುಂದೂಡಿತ್ತು. ಶಿಕ್ಷೆನಾ, ಖುಲಾಸೆನಾ ಎಂಬ ಬಗ್ಗೆ ಸಾಕಷ್ಟು ಕುತೂಹಲ ಮನೆ ಮಾಡಿದೆ. ಇಬ್ಬರು ಪುತ್ರಿಯರ ಜೊತೆಗೆ ವಿನಯ್ ಕುಲಕರ್ಣಿ ಅವರು ಕೋರ್ಟ್ ಕಡೆ ತೆರಳಿದ್ದಾರೆ. ಕೋರ್ಟ್ ನಲ್ಲಿ ನ್ಯಾಯ ಸಿಗುವ ಆತ್ಮವಿಶ್ವಾಸದಲ್ಲಿಯೇ ವಿನಯ್ ಕುಲಕರ್ಣಿ ಇದ್ದಾರೆ. ಅಂದು ಕೂಡ ಅದೇ ವಿಶ್ವಾಸದಲ್ಲಿದ್ದರು, ಇಂದು ಕೂಡ ಅದೇ ವಿಶ್ವಾಸದಲ್ಲಿದ್ದಾರೆ.

ನ್ಯಾಯಾಂಗದ ವ್ಯವಸ್ಥೆಯೊಳಗೆ ಯಾವುದೇ ತೀರ್ಪನ್ನು ಕೊಟ್ಟರು ಅದಕ್ಕೆ ತಲೆಬಾಗಬೇಕಾಗುತ್ತದೆ. ಆದರೆ ನ್ಯಾಯಾಂಗದ ಮೇಲೆ ನನಗೆ ವಿಶ್ವಾಸವಿದೆ., ಗೌರವವಿದೆ. ನೋಡೋಣಾ ಇಂದು ಏನಾಗುತ್ತೆ ಅದನ್ನ ನೋಡೋಣಾ. ಕೇಸ್ ನ್ಯಾಯಾಲಯದಲ್ಲಿರುವಾಗ ಆ ಸಂಬಂಧ ಏನನ್ನು ಮಾತನ್ನಾಡಬಾರದು. ನೋಡೋಣಾ ತೀರ್ಪು ಬರಲಿ ಎಂದೇ ಹೇಳಿದ್ದಾರೆ.
ಈ ಕೇಸ್ ಗೆ ಸಂಬಂಧಿಸಿದಂತೆ ಈಗಾಗಲೇ ಕೋರ್ಟ್ ನಲ್ಲಿ ವಾದ ಪ್ರತಿವಾದ ನಡೆದಿದೆ. ಎಲ್ಲಾ ಅಂಶಗಳನ್ನು ಗಮನದಲ್ಲಿಟ್ಟುಕೊಂಡು ಕೋರ್ಟ್ ತೀರ್ಪು ನೀಡಲಿದೆ. ಏನೇ ಆತ್ಮವಿಶ್ವಾಸ ಇದ್ದರು ಕೂಡ ಆರೋಪಿಗಳಿಗೆ ಆತಂಕ ಎಂಬುದು ಕಾಡುತ್ತಿದೆ. ತೀರ್ಪು ಬರುವ ತನಕ ಯಾವುದೇ ತೀರ್ಮಾನಕ್ಕೆ ಅವರಿಗೂ ಬರುವುದಕ್ಕೆ ಆಗ್ತಿಲ್ಲ.














