ಮಂಡ್ಯ: ಜಿಲ್ಲೆಯ ನಾಗಮಂಗಲ ತಾಲೂಕಿನ ಆದಿ ಚುಂಚನಗಿರಿಯಲ್ಲಿ ನಿರ್ಮಿಸಲಾಗಿರುವ ಬಾಲಗಂಗಾಧರನಾಥ ಶ್ರೀಗಳ ಗುರು ಭೈರವೈಕ್ಯ ಮಂದಿರ, ಲೋಕಾರ್ಪಣೆಗೆ ಸಜ್ಜಾಗಿದೆ. ಇದರ ಉದ್ಘಾಟನೆಗೆ ಪ್ರಧಾನಮಂತ್ರಿ ನರೇಂದ್ರ ಮೋದಿಗಳೇ ಜಿಲ್ಲೆಗೆ ಬರ್ತಾ ಇದ್ದಾರೆ. ನಾಳೆ ಮಠಕ್ಕೆ ಪಿಎಂ ಮೋದಿ ಅವರು ಬರ್ತಿದ್ದಾರೆ. ಸಿದ್ಧತೆಗಳು ಕೂಡ ಜೋರಾಗಿ ನಡೆದಿವೆ.
80 ಕೋಟಿಗೂ ಅಧಿಕ ವೆಚ್ಚದಲ್ಲಿ ಭೈರವೈಕ್ಯ ಮಂಟಪವನ್ನ ಕಟ್ಟಲಾಗಿದೆ. ಇದು ಒಡಿಶಾದ ಸೂರ್ಯ ದೇಗುಲದ ಕಲೆಯ ರೀತಿಯಲ್ಲಿಯೇ ಕಟ್ಟಲಾಗಿದೆ. ಹೊಯ್ಸಳ, ಚೋಳ, ಚಾಲುಕ್ಯ ಹಾಗೂ ಗಂಗರ ವಾಸ್ತು ಶಿಲ್ಪ ಕೂಡ ಇದರಲ್ಲಿ ಬೆರೆತಿದೆ. ಇದನ್ನ ಉದ್ಘಾಟನೆ ಮಾಡೋದಕ್ಕೆ ಪ್ರಧಾನಿ ಮೋದಿ ಅವರು ಬರ್ತಿದ್ದಾರೆ.
ನಾಳೆ ಬೆಂಗಳೂರಿನ ಹೆಚ್ಎಎಲ್ ಏರ್ಪೋರ್ಟಿನಿಂದ ಹೆಲಿಕಾಪ್ಟರ್ ಮೂಲಕ ಆದಿಚುಂಚನಗಿರಿ ತಪೋವನಕ್ಕೆ ಮೋದಿ ಅವರು ಬಂದು ಇಳಿಯಲಿದ್ದಾರೆ. ಅಲ್ಲಿಂದ ಕಾಲಭೈರವನ ದೇಗುಲಕ್ಕೆ ಬಂದು ದರ್ಶನ ಪಡೆಯಲಿದ್ದಾರೆ. ನಂತರ ಭೈರವೈಕ್ಯ ಮಂದಿರವನ್ನ ಲೋಕಾರ್ಪಣೆ ಮಾಡುತ್ತಾರೆ. ಬಳಿಕ ಮಂದಿರದ ಗರ್ಭಗುಡಿಯ ಪಕ್ಕದಲ್ಲಿ ಇರುವ ಬಾಲಗಂಗಾಧರನಾಥ ಸ್ವಾಮೀಜಿಯವರ ಗದ್ದುಗೆಯ ದರ್ಶನ ಮಾಡಲಿದ್ದಾರೆ. ಬಳಿಕ ಆದಿಚುಂಚನಗಿರಿ ಕ್ರೀಡಾಂಗಣದಲ್ಲಿ ನಡೆಯುವ ವೇದಿಕೆ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಾರೆ. ಅದೇ ಕಾರ್ಯಕ್ರಮದಲ್ಲಿ ಗೋ ರಕ್ಷಕನಾಥ ಸಿದ್ಧ ಸಿದ್ಧ ಸಿದ್ಧಾಂತ ಎಂಬ ಗ್ರಂಥವನ್ನ ಬಿಡುಗಡೆ ಕೂಡ ಮಾಡಲಿದ್ದಾರೆ. ಕಾರ್ಯಕ್ರಮವನ್ನೆಲ್ಲ ಮುಗಿಸಿ, ವಾಪಾಸ್ ದೆಹಲಿಗೆ ಹೊರಡಲಿದ್ದಾರೆ. ಆದಿಚುಂಚನಗಿರಿಮಠದ ಭಕ್ತರು ಇದನ್ನ ವೀಕ್ಷಿಸಲು ಕಾತುರದಿಂದ ಕಾಯುತ್ತಿದ್ದಾರೆ. ಪ್ರಧಾನಿ ಮೋದಿ ಅವರು ಲೋಕಾರ್ಪಣೆ ಮಾಡಿದ ಬಳಿಕ ಭಕ್ತರು ಕೂಡ ನೋಡುವುದಕ್ಕೆ ಅವಕಾಶವನ್ನ ನೀಡಲಾಗುತ್ತದೆ. ಭಕ್ತರು ಕೂಡ ಶ್ರೀ ಗುರು ಭೈರವೈಕ್ಯ ಮಂಟಪವನ್ನ ಕಣ್ತುಂಬಿಕೊಳ್ಳಬಹುದು.
ಸಾರ್ವಜನಿಕ ಕುಂದುಕೊರತೆ ವಿಭಾಗ : ನಿಮ್ಮ ಧ್ವನಿ - ನಮ್ಮ ವೇದಿಕೆ
ನಿಮ್ಮ ಊರಿನ ಸಮಸ್ಯೆಗಳು ಇನ್ನು ಮುಂದೆ ಕೇವಲ ಚರ್ಚೆಯಾಗಬಾರದು, ಅವುಗಳಿಗೆ ಪರಿಹಾರ ಸಿಗಬೇಕು.
ವರದಿ ಮಾಡುವುದು ಹೇಗೆ?
- ನಿಮ್ಮ ಸುತ್ತಮುತ್ತಲಿನ ರಸ್ತೆ, ನೀರು, ವಿದ್ಯುತ್ ಸಮಸ್ಯೆಗಳ ಫೋಟೋ, ವಿಡಿಯೋ ಅಥವಾ ಮಾಹಿತಿ ನಮಗೆ ಕಳುಹಿಸಿ.
ನಾವು ಏನು ಮಾಡುತ್ತೇವೆ?
- ನೀವು ಕಳುಹಿಸಿದ ವರದಿಗಳನ್ನು suddione.com ನಲ್ಲಿ ಪ್ರಕಟಿಸುತ್ತೇವೆ.
- ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದು ಪರಿಹಾರಕ್ಕಾಗಿ ಒತ್ತಾಯಿಸುತ್ತೇವೆ.
- ನಿಮ್ಮೂರಿನ ಅಭಿವೃದ್ಧಿಗೆ ನಿಮ್ಮೊಂದಿಗೆ ಧ್ವನಿಗೂಡಿಸುತ್ತೇವೆ.











