Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ವಚನಾನಂದ ಸ್ವಾಮೀಜಿಗಳ ಉಚ್ಛಾಟನೆ : ಯತ್ನಾಳ್ ರಿಯಾಕ್ಷನ್ ಏನು..?

---Advertisement---

ಬೆಳಗಾವಿ: ಲೆಕ್ಕಕೊಡಿ ಅಭಿಯಾನ ದೊಡ್ಡ ಮಟ್ಟದಲ್ಲಿ ಶುರುವಾದ ಬೆನ್ನಲ್ಲೇ ಮಠದ ಟ್ರಸ್ಟ್ ಗಳು ಎಲ್ಲರು ಸೇರಿ, ವಚನಾನಂದ ಸ್ವಾಮಿಗಳನ್ನ ಉಚ್ಛಾಟನೆ ಮಾಡಿದರು. ಈ ಬಗ್ಗೆ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಪ್ರತಿಕ್ರಿಯೆ ನೀಡಿದ್ದಾರೆ. ಆ ಎರಡು ಟ್ರಸ್ಟ್ ಗಳು ಹಾಗೆ ಇದಾವೆ. ಎರಡು ಟ್ರಸ್ಟ್ ಒಳಗೂ ಹಗರಣ ಇದಾವೆ‌ ಎಂದಿದ್ದಾರೆ.

ಬೆಳಗಾವಿಯಲ್ಲಿ ಮಾತನಾಡಿದ ಅವರು, ಆ ಟ್ರಸ್ಟ್ ಗಳು ಏನ್ ಮಾಡಿದಾವೆ, ಸ್ವಂತ ಆಸ್ತಿ ಅಂದ್ರೆ ಖಾಸಗಿ ಆಸ್ತಿ ಮಾಡಿಕೊಂಡಿದ್ದಾವೆ. ಅದು ಸಮಾಜದ ಆಸ್ತಿ‌ ಇಲ್ಲ. ಹೀಗಾಗಿ ಜನರಿಗೆ ಅದರ ಮೇಲೆ ಏನು ವಿಶ್ವಾಸ ಉಳಿಸಿಕೊಂಡಿಲ್ಲ ಎಂಬ ಮಾತನ್ನ ಹೇಳಿದ್ದಾರೆ.

ಇದೇ ವೇಳೆ ರಮೇಶದ ಜಾರಕಿಹೊಳಿ ಅವರು ಜೆಡಿಎಸ್ ಪಕ್ಷ ಸೇರ್ತಾರಾ ಎಂಬ ಮಾತಿಗೆ, ಅದೆಲ್ಲಾ ಊಹಾಪೋಹದ ಮಾತು. ಅವರ್ಯಾಕೆ ಜೆಡಿಎಸ್ ಹೋಗ್ತಾರೆ. ಸುಮ್ನೆ (ಲಕ್ಷ್ಮಣ್ ಸವದಿ) ಅವರಿಗೆ ಇವರು ಹೇಳ್ತಾರೆ, ಇವರುಗೆ ಅವರು ಹೇಳ್ತಾರೆ. ರಮೇಶ್ ಜಾರಕಿಹೊಳಿ ಅವರು ನಾವೆಲ್ಲಾ ಒಂದೇ ಕಡೆ ಇರ್ತೀವಿ. ಯಾರೂ ಜೆಡಿಎಸ್ ಗೂ ಹೋಗೋದಿಲ್ಲ, ಕಾಂಗ್ರೆಸ್ ಗೂ ಹೋಗೋದಿಲ್ಲ. ಮುಂದೆ ಏನಾಗುತ್ತೆ ಅನ್ನೋದನ್ನ ನೋಡೋಣಾ ಎಂಬ ಮಾತನ್ನ ಹೇಳಿದ್ದಾರೆ.

ಸದ್ಯ ಬಿಜೆಪಿ ಪಕ್ಷದಿಂದ ಉಚ್ಛಾಟನೆಯಾಗಿರುವ ಶಾಸಕ ಯತ್ನಾಳ್ ಅವರಿಗೆ ಬಾಗಲಕೋಟರ ಉಪಚುನಾವಣೆಯಲ್ಲಿ ಬಿಜೆಪಿ ರಾಜ್ಯಾಧ್ಯಕ್ಷರಾದ ಬಿವೈ ವಿಜಯೇಂದ್ರ ಅವರೇ ಆಫರ್ ನೀಡಿದ್ದರು. ನಮ್ಮ ಪಕ್ಷದ ಪರ ಪ್ರಚಾರ ಮಾಡುವುದಕ್ಕೆ ಯಾವುದೇ ಬೇಸರ ಇಲ್ಲ ಎಂದಿದ್ದರು. ಇದರ ನಡುವೆ ಯತ್ನಾಳ್ ಅವರು ಕೂಡ ನಾನು ಹೊಸ ಪಕ್ಷ ಕಟ್ಟುತ್ತೇನೆ ಎಂಬ ಮಾತನ್ನು ಸಹ ಹೇಳಿದ್ದರು.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now
🏫 ಅಡ್ಮಿಷನ್ ಓಪನ್
🔒

ಇಂಡಿಯನ್ ಇಂಟರ್ ನ್ಯಾಷನಲ್ ಸ್ಕೂಲ್

ಸ್ವಾಗತ...