Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ದಾವಣಗೆರೆ ಮುಸ್ಲಿಮರಲ್ಲಿ ಅಸಮಾಧಾನ ಇದ್ದಿದ್ದು ನಿಜ : ಜಮೀರ್ ಅಹ್ಮದ್

---Advertisement---

ಬೆಂಗಳೂರು: ಇಂದು ಅಂಬೇಡ್ಕರ್ ಅವರ ಜಯಂತಿ ಪ್ರಯುಕ್ತ ಅಂಬೇಡ್ಕರ್ ಅವರ ಪ್ರತಿಮೆಗೆ ಮಾಲಾರ್ಪಣೆ‌ ಮಾಡಿದ ಸಚಿವ ಜಮೀರ್ ಅಹ್ಮದ್, ಅಂಬೇಡ್ಕರ್ ಜಯಂತಿಯ ಶುಭಾಶಯಗಳನ್ನ ಕೋರೋದಕ್ಕೆ ಬಯಸುತ್ತೇನೆ. ಇಡೀ ದೇಶದಲ್ಲಿ ಅಂಬೇಡ್ಕರ್ ಜಯಂತಿಯನ್ನ ಅದ್ದೂರಿಯಾಗಿ ಆಚರಿಸ್ತಾರೆ. ನಾಡಹಬ್ಬ ಇದ್ದಂತೆ. ಎಲ್ಲರಿಗೂ ಅಂಬೇಡ್ಕರ್ ಜಯಂತಿಯ ಶುಭಾಶಯಗಳು ಎಂದಿದ್ದಾರೆ.

ಇದೇ ವೇಳೆ ದಾವಣಗೆರೆ ದಕ್ಷಿಣ ಕ್ಷೇತ್ರದ ಉಪಚುನಾವಣೆಯ ಬಗ್ಗೆ ಮಾತನ್ನಾಡಿ, ಜಬ್ಬಾರ್ ಅವರು ರಾಜೀನಾಮೆ ಕೊಟ್ಟಿರೋದು ಗೊತ್ತಾಯ್ತು. ಆದರೆ ಅಲ್ಲಿ ನಾನು ಇರಲಿಲ್ಲ. ನಜೀರ್ ಅವರಿಗೆ ತೆಗೀತೀವಿ ಅಂತ ಹೇಳಿದ್ದಾರೆ. ಯಾವ ಕಾರಣಕ್ಕೆ ಅನ್ನೋದನ್ನ ಕೇಳಿ ನೋಡ್ತೇನೆ. ಸಿಎಂ ಅವರೇನೋ ಅವರಿಗೆ ದಾವಣಗೆರೆಗೆ ಹೋಗೋದಕ್ಕೆ ಹೇಳಿದ್ದರಂತೆ. ಆದರೆ ದಾವಣಗೆರೆಗೆ ಹೋಗಿಲ್ಲ ಎಂಬ ಕಾರಣಕ್ಕೆ ತೀರ್ಮಾನ ತೆಗೆದುಕೊಂಡಿದ್ದಾರೆ ಅನ್ನೋದು ಗೊತ್ತಾಯ್ತು. ಈಗ ಸಿಎಂ ಮನೆಗೆ ಹೋಗ್ತಾ ಇದ್ದೀನಿ ಆ ಬಗ್ಗೆ ಚರ್ಚೆ ಮಾಡ್ತೀನಿ ಎಂದಿದ್ದಾರೆ.

ಇನ್ನು ದಾವಣಗೆರೆಯ ಅಲ್ಪಸಂಖ್ಯಾರ ಒಗ್ಗಟ್ಟಿನ ಬಗ್ಗೆ ಮಾತನ್ನಾಡಿ, ಎಲ್ಲರೂ ಒಗ್ಗಟ್ಟಾಗಿಯೇ ಇರೋದು. ಮುಸಲ್ಮಾನರ ಅಸಮಾಧಾನ ಇದ್ದದ್ದು ನಿಜ. ಅದು ಸ್ಥಳೀಯವಾಗಿ. ಮತದಾರರಲ್ಲಿ ಇದ್ದದ್ದು. ದಾವಣಗೆರೆ ದಕ್ಷಿಣದಲ್ಲಿ ಅಸಮಾಧಾನ ಇತ್ತು. ಟಿಕೆಟ್ ಕೊಟ್ಟಿಲ್ಲ ಎಂಬ ಕಾರಣಕ್ಕೆ. ಆಮೇಲೆ ಸರಿ ಹೋಗಿದ್ದಾರೆ. ನಮ್ಮ ಪಕ್ಷದ ಅಭ್ಯರ್ಥಿಗೆನೆ ಮತ ಕೊಟ್ಟಿದ್ದಾರೆ. ಒಳ್ಳೆ ಲೀಡ್ ನಲ್ಲಿಯೇ ದಾವಣಗೆರೆಯನ್ನ ಗೆಲ್ಲುತ್ತೇವೆ‌ ಎಂಬ ಆತ್ಮವಿಶ್ವಾಸವನ್ನ ವ್ಯಕ್ತಪಡಿಸಿದ್ದಾರೆ. ಆದರೆ ಅಲ್ಪಸಂಖ್ಯಾತರ ಅಸಮಾಧಾನ ಹೊಗೆ ಜೋರಾಗಿ ಆಡಿದೆ. ಇದರಿಂದ ಕಾಂಗ್ರೆಸ್ ಅಭ್ಯರ್ಥಿ ಮೇಲೆ ಪರಿಣಾಮ ಬೀರಬಹುದು ಎಂಬ ಮಾತುಗಳು ಕೇಳಿ ಬರ್ತಿವೆ. ಫಲಿತಾಂಶ ಬರೋದಕ್ಕೆ ಇನ್ನು ಇಪ್ಪತ್ತು ದಿನಗಳು ಇರುವ ಕಾರಣ ತಾಳ್ಮೆಯಿಂದ ಕಾಯಲೇಬೇಕಾಗಿದೆ.

ಸಾರ್ವಜನಿಕ ಕುಂದುಕೊರತೆ ವಿಭಾಗ : ನಿಮ್ಮ ಧ್ವನಿ - ನಮ್ಮ ವೇದಿಕೆ

ನಿಮ್ಮ ಊರಿನ ಸಮಸ್ಯೆಗಳು ಇನ್ನು ಮುಂದೆ ಕೇವಲ ಚರ್ಚೆಯಾಗಬಾರದು, ಅವುಗಳಿಗೆ ಪರಿಹಾರ ಸಿಗಬೇಕು.

ವರದಿ ಮಾಡುವುದು ಹೇಗೆ?

  • ನಿಮ್ಮ ಸುತ್ತಮುತ್ತಲಿನ ರಸ್ತೆ, ನೀರು, ವಿದ್ಯುತ್ ಸಮಸ್ಯೆಗಳ ಫೋಟೋ, ವಿಡಿಯೋ ಅಥವಾ ಮಾಹಿತಿ ನಮಗೆ ಕಳುಹಿಸಿ.
ವಾಟ್ಸಪ್ ಮಾಡಿ: 90369 74702

ನಾವು ಏನು ಮಾಡುತ್ತೇವೆ?

  • ನೀವು ಕಳುಹಿಸಿದ ವರದಿಗಳನ್ನು suddione.com ನಲ್ಲಿ ಪ್ರಕಟಿಸುತ್ತೇವೆ.
  • ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದು ಪರಿಹಾರಕ್ಕಾಗಿ ಒತ್ತಾಯಿಸುತ್ತೇವೆ.
  • ನಿಮ್ಮೂರಿನ ಅಭಿವೃದ್ಧಿಗೆ ನಿಮ್ಮೊಂದಿಗೆ ಧ್ವನಿಗೂಡಿಸುತ್ತೇವೆ.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now