Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ಅವರು ಬಚಾವ್ ಆಗೋದಕ್ಕೆ ನನ್ನ ಉಚ್ಛಾಟನೆ ಮಾಡವ್ರೆ : ವಚನಾನಂದ ಸ್ವಾಮೀಜಿ ರಿಯಾಕ್ಷನ್

---Advertisement---

ದಾವಣಗೆರೆ: ಅದೊಂದು ಹಾಸ್ಯಾಸ್ಪದ. ಅವರು ಬಚಾವ್ ಆಗೋದಕ್ಕೆ, ಅವರಿಗೆ ಲೆಕ್ಕ ಕೊಡಿ ಅಂತ ಹೇಳಿ ಭಕ್ತರು ಕೇಳ್ತಾ ಇದ್ದರು. ಅವರು ಏನು ಮಾಡಿದರು ನಮ್ಮನ್ನ ಟಾರ್ಗೆಟ್ ಮಾಡಿದರು. ಸ್ವಾಮಿಗಳೇ ಹೋಗಿ ಬಿಟ್ಟರೆ ಪ್ರಶ್ನೆ ಕೇಳೋದು ಯಾರು..? ಪೀಠ ಅಂದರೆ ಸೆಂಟರ್. ಇವರು ಸಾಕಷ್ಟು ಏನೇನೋ ಮಾಡಿದ್ದಾರೆ. ಈಗ ಭಕ್ತರು ಲೆಕ್ಕ ಕೊಡಿ ಅಂತ ಕೇಳಿದಾಗ ಕೊಡೋದಕ್ಕೆ ರೆಡಿ ಇಲ್ಲ ಅಂತ ಆಡಳಿತ ಮಂಡಳಿ ವಿರುದ್ಧವೇ ವಚನಾನಂದ ಶ್ರೀಗಳು ಆಕ್ರೋಶ ಹೊರ ಹಾಕಿದ್ದಾರೆ.

ಹಿಂಗೆನೆ ಹಿಂದೊಬ್ಬ ಸ್ವಾಮೀಜಿ ಮಾಡಿದ್ದರು. ವ್ಯವಸ್ಥಿತವಾಗಿ ಷಡ್ಯಂತ್ರ ಮಾಡ್ತಾ ಇದ್ದಾರೆ. ಸ್ವಾಮಿಗಳಿಗೆ ಬಹಳ ಮುಖ್ಯ ಅಂದ್ರೆ ಕೈ ಬಹಳ ಅಚ್ಚುಕಟ್ಟಾಗಿ‌ ಇರಬೇಕು. ಅದಕ್ಕಿಂತ ರೀತಿ ನೀತಿ ಬೇರೆ ಯಾವ್ದು ಇಲ್ಲ. ಯಾರಾದ್ರೂ ದಾನಿಗಳು ಹಣ ಕೊಟ್ಟರು ಅಲ್ಲಿನೆ ದಾನ ಮಾಡಿ ಬರ್ತೇನೆ. ಹೋಗಿ ಬೇಕಾದ್ರೆ ಚೆಕ್ ಮಾಡಿಕೊಳ್ಳಿ. ಆ 12 ಜನಗಳು ಟ್ರಸ್ಟಿಗಳಲ್ಲ. ಕಾನೂನುಬಾಹಿರ ಅವರು ಮಾಡಿದ್ದಾರೆ.

ನಮಗೊಂದು ನೋಟೀಸ್ ಕೊಡಬೇಕು ಅಲ್ವಾ. ಸಂಸ್ಥಾಪಕ ಧರ್ಮದರ್ಶಿ ಅವರೇ ಎಷ್ಟು ಅವ್ಯವಹಾರ ಮಾಡಿದ್ದಾರೆ ಅನ್ನೋದನ್ನ ಹೇಳಿದ್ದಾರೆ. ಪ್ರಧಾನ ಧರ್ಮದರ್ಶಿ, ಇನ್ನೊಬ್ಬ ಧರ್ಮದರ್ಶಿನೆ ಅನ್ಯಾಯ ಮಾಡಿರೋದು ಎಂಬುದನ್ನ ಹೇಳಿದ್ದಾರೆ. 2008 ನೇ ಇಸವಿಯಲ್ಲಿ 8 ಕೋಟಿ ರೂಪಾಯಿ ಹಣ ಬಂತು. ಅದರಲ್ಲಿ ಎರಡೂವರೆ ಕೋಟಿ ಖರ್ಚಾಯ್ತು, ಐದು ಕೋಟಿ ರೂಪಾತಿ ತಿಂದ್ರು ಅಂತ ಹೇಳಿದ್ದಾರೆ. ಅದಕ್ಕೆ ಲೆಕ್ಕ ಕೇಳಿದ್ದಕ್ಕೆ ಪ್ರಧಾನ ಕಾರ್ಯದರ್ಶಿ ನಮ್ಮ ಜೊತೆಗೆ ಮಾತಾಡ್ಲಿಲ್ಲ ಅಂತ ಹೇಳಿದ್ದಾರೆ. ಫೋರ್ಜರಿ ಮಾಡಿದ್ದಾರೆ ಅಂತ ಅವರೇ ಹೇಳಿದ್ದಾರೆ ಎಂದು ತಿಳಿಸಿದ್ದಾರೆ.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now
🏫 ಅಡ್ಮಿಷನ್ ಓಪನ್
🔒

ಇಂಡಿಯನ್ ಇಂಟರ್ ನ್ಯಾಷನಲ್ ಸ್ಕೂಲ್

ಸ್ವಾಗತ...