ಬೆಂಗಳೂರು: ಶಾಸಕ ವಿನಯ್ ಕುಲಕರ್ಣಿ ವಿರುದ್ಧ ಅತ್ಯಾಚಾರ ಆರೋಪ ಸಂಬಂಧ ನ್ಯಾಯಾಲಯಕ್ಕೆ ಬಿ ರಿಪೋರ್ಟ್ ಸಲ್ಲಿಕೆ ಮಾಡಲಾಗಿದೆ. ಸಿಐಡಿ ಪೊಲೀಸರು ಈ ರಿಪೋರ್ಟ್ ಸಲ್ಲಿಕೆ ಮಾಡಿದ್ದಾರೆ. ದೂರುದಾರೆ ಮಂಜುಳ ಪೂಜಾರ್ ಗೆ ಒಂದು ಲಕ್ಷ ರೂಪಾಯಿ ದಂಡವನ್ನು ವಿಧಿಸಲಾಗಿದೆ. ದುರುದ್ದೇಶದ ಆರೋಪದ ಹಿನ್ನಲೆಯಲ್ಲಿ ದಂಡವನ್ನ ವಿಧಿಸಲಾಗಿದೆ.
ಈ ಕೇಸ್ ಹಿಂದೆ ದುರುದ್ದೇಶ ಇರುವ ಕಾರಣ ನೀಡಿ ದಂಡ ವಿಧಿಸಲಾಗಿದೆ. ಬೆಂಗಳೂರಿನ ಜನಪ್ರತಿನಿಧಿಗಳ ನ್ಯಾಯಾಲಯ ಈ ಆದೇಶ ಹೊರಡಿಸಿದೆ. ಈ ಸಂಬಂಧ ಗುತ್ತಿಗೆದಾರ ಅರ್ಜುನ್ ಗುಡ್ಡದ್ ಮಾತನ್ನಾಡಿ, ನಮ್ಮ ಮೇಲೆ ಹಾಗೂ ವಿನಯ್ ಕುಲಕರ್ಣಿ ಅವರ ಮೇಲೆ ಮಂಜುಳಾ ಅನ್ನೋರು ಆರೋಪ ಮಾಡಿದ್ದರು. ಆ ಸಂಬಂದ ಎಫ್ಐಆರ್ ದಾಖಲಾಗಿತ್ತು. ಸಂಜಯ್ ನಗರ ಪೊಲೀಸ್ ಠಾಣೆಯಲ್ಲಿ ವಿಚಾರಣೆ ಕೂಡ ಆಗಿತ್ತು. ಸಿಐಡಿ ತನಿಖೆ ನಡೆಸಿ, ಬಿ ರಿಪೋರ್ಟ್ ಹಾಕಿತ್ತು. ಬಿ ರಿಪೋರ್ಟ್ ಬಳಿಕ ಅದನ್ನ ಚಾಲೆಂಜ್ ಕೂಡ ಮಾಡ್ಲಿಲ್ಲ. ಅದಕ್ಕೆ ಸಂಬಂಧಪಟ್ಟಂತೆ ಹೆಣ್ಣು ಮಗಳದ್ದು ತಪ್ಪಿದೆ ಅಂತ ಕೋರ್ಟ್, ವಾಪಾಸ್ ಆಕೆಗೆ ದಂಡ ವಿಧಿಸಿದೆ. ನಮ್ಗೂ ಪೇಪರ್ ನೋಡಿನೆ ಗೊತ್ತಾಗಿದ್ದು. ಆರ್ಡರ್ ಕಾಪಿ ಇನ್ನು ಸಿಕ್ಕಿಲ್ಲ. ವಿನಯ್ ಕುಲಕರ್ಣಿ ಅವರ ಮೇಲೆ ಅತ್ಯಾ**ರ ಕೇಸ್ ಹಾಕಿದ್ದರು. ನಮ್ಮ ಮೇಲೆ ಧಮ್ಕಿ ಆರೋಪ ಮಾಡಿದ್ದರು ಎಂದಿದ್ದಾರೆ.
ಮಂಜುಳಾ ಪೂಜಾರ್ ರೈತ ಹೋರಾಟಗಾರ್ತಿ ಎಂಬ ಹೆಸರನ್ನ ಪಡೆದಿದ್ದರು. 2024 ಅಕ್ಟೋಬರ್ ತಿಂಗಳಲ್ಲಿ ವಿನಯ್ ಕುಲಕರ್ಣಿ ವಿರುದ್ಧ ಅತ್ಯಾ*** ಮಾಡಿದ್ದಾರೆ ಎಂದು ಆರೋಪ ಮಾಡಿದ್ದರು. ಆದರೆ ಅದಕ್ಕೆ ಪೂರಕವಾದಂತ ಯಾವುದೇ ಸಾಕ್ಷಿಗಳನ್ನು ನೀಡಿರಲಿಲ್ಲ. ಇದೀಗ ಜನಪ್ರತಿನಿಧಿಗಳ ಕೋರ್ಟ್ ಮಂಜುಳಾಗೆ ದಂಡ ವಿಧಿಸಿದೆ.




















