Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ಬೆಂದು ಹೋಗಿದ್ದ ಸಿಲಿಕಾನ್ ಸಿಟಿಗೆ ತಂಪೆರೆದ ಮಳೆರಾಯ : ಬೆಂಗಳೂರಿನಲ್ಲಿ ದಿಢೀರ್ ಮಳೆ..!

---Advertisement---

ಬೆಂಗಳೂರು: ಬೇಸಿಗೆ ಶುರುವಾಗಿ ಬಹಳ ದಿನಗಳೇ ಆಗಿವೆ. ಆಗಲೇ ಭೂಮಿ ಮೇಲೆ ಕಾಲಿಟ್ಟರೆ ಬೆಂದು ಹೋಗುವ ಅನುಭವ, ಹೊರಗೆ ಬಂದರೆ ನೆತ್ತಿ ಮೇಲೆ ಸುಡುವ ಸೂರ್ಯ. ಇದರಿಂದ ಅಂತು ಜನ ಸಾಕಷ್ಟು ಬೆಂದಿದ್ದರು. ಜನರ ಬಿಸಿಲಿನ ಬೇಗೆಯ ತಾಪವನ್ನ ಕಂಡ ವರುಣ ರಾಯ ಕೊಂಚ ಸಮಾಧಾನ ಮಾಡೋಣಾ‌ ಅಂತ ಸಿಲಿಕಾನ್ ಸಿಟಿಗೆ ದರ್ಶನ ಕೊಟ್ಟಿದ್ದಾನೆ. ಸಂಜೆ ವೇಳೆಗೆ ಸಿಲಿಕಾನ್ ಸಿಟಿಯಲ್ಲಿ ಸಣ್ಣಗೆ‌ಮಳೆ ಬಂದಿದೆ.

ಮೆಜೆಸ್ಟಿಕ್, ಜೆಸಿ ರೋಡ್, ಕಾರ್ಪೋರೇಷನ್, ಕೆ ಆರ್ ಮಾರ್ಕೆಟ್, ಶಾಂತಿ ನಗರ, ಚಾಮರಾಜಪೇಟೆ ಸುತ್ತ ಮುತ್ತ ಮಳೆರಾಯ ತಂಪೆರೆದಿದ್ದಾನೆ. ಈ ಸಮಯಕ್ಕೊಮ್ಮೆ ಮಳೆ ಬರಬೇಕಿತ್ತು. ಮಳೆಯನ್ನ ಕಂಡು ಹಲವರು ನೆಮ್ಮದಿಯ ಉಸಿರು ಬಿಟ್ಟಿದ್ದಾರೆ. ಯುಗಾದಿ ಹಿಂದೆ ಮುಂದೆ ಮಳೆ ಸುರಿಯುವ ವಾಡಿಕೆ ಇದೆ. ಯುಗಾದಿಗೂ ಮುನ್ನ ಕರಗದಂತ ಆಲಿಕಲ್ಲು ಮಳೆಯೇ ಬಂದಿತ್ತು. ಇದೀಗ ತಣ್ಣನೆಯ ಮಳೆ ಸುರಿದಿದೆ.

ಭೂಮಿ ಮೇಲಿನ ಉಷ್ಣಾಂಶ ದಿನೇ ದಿನೇ ಹೆಚ್ಚಾಗ್ತಾ ಇತ್ತು. ಇದರಿಂದ ಜನರ ಆರೋಗ್ಯದ ಮೇಲೂ ಪರಿಣಾಮ ಬೀರುತ್ತಿತ್ತು. ಡಿಹೈಡ್ರೇಷನ್ ಸಮಸ್ಯೆಯಿಂದ ಜನ ಬಳಲುವಂತಾಗುತ್ತಿತ್ತು. ಅದೆಷ್ಟೋ ಜನ ಅನಾರೋಗ್ಯಕ್ಕೆ ಈಡಾಗಿದ್ದರು. ಸದ್ಯ‌ ಮಳೆಯಿಂದ ವಾತಾವರಣ ಕೊಂಚ ತಂಪು ಎನಿಸಿದೆ.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now
🏫 ಅಡ್ಮಿಷನ್ ಓಪನ್
🔒

ಇಂಡಿಯನ್ ಇಂಟರ್ ನ್ಯಾಷನಲ್ ಸ್ಕೂಲ್

ಸ್ವಾಗತ...