
ವರದಿ ಮತ್ತು ಫೋಟೋ ಕೃಪೆ
ಕೆ.ಎಂ.ಮುತ್ತುಸ್ವಾಮಿ ಕಣ್ಣನ್,
ಮೊ : 78998 64552
ಸುದ್ದಿಒನ್, ಚಿತ್ರದುರ್ಗ, ಏಪ್ರಿಲ್. 10 : ಭೂಮಿ ಮತ್ತು ವಸತಿ ಹಕ್ಕು ವಂಚಿತರ ಹೋರಾಟ ಸಮಿತಿಯ ಸಂಸ್ಥಾಪಕ ಸ್ವಾತಂತ್ರ್ಯ ಹೋರಾಟಗಾರ ಎಚ್.ಎಚ್.ದೊರೆಸ್ವಾಮಿರವರ 109 ನೇ ಹುಟ್ಟುಹಬ್ಬವನ್ನು ಪ್ರವಾಸಿ ಮಂದಿರದಲ್ಲಿ ಶುಕ್ರವಾರ ಆಚರಿಲಾಯಿತು.
ಭೂಮಿ ಮತ್ತು ವಸತಿ ಹಕ್ಕು ವಂಚಿತರ ಹೋರಾಟ ಸಮಿತಿ ರಾಜ್ಯ ಖಚಾಂಚಿ ಶ್ರೀರಂಗಾಚಾರಿ ಎಚ್.ಎಸ್.ದೊರೆಸ್ವಾಮಿರವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿದರು. ಸಮಿತಿಯ ಜಿಲ್ಲಾಧ್ಯಕ್ಷ ಸತ್ಯಪ್ಪ ಮಲ್ಲಾಪುರ, ಕಾರ್ಯದರ್ಶಿ ಹನುಮಂತಪ್ಪ ಗೋನೂರು, ಎದ್ದೇಳು ಕರ್ನಾಟಕ ಜಿಲ್ಲಾ ಮುಖಂಡ ಶಿವಕುಮಾರ್, ರಾಜಣ್ಣ ಲಕ್ಷ್ಮಿಸಾಗರ, ಸಣ್ಣವೀರಪ್ಪ, ಹೆಚ್.ವೆಂಕಟೇಶ್, ಅಂಜಿನಪ್ಪ ಇನ್ನು ಅನೇಕರು ಹುಟ್ಟುಹಬ್ಬ ಆಚರಣೆಯಲ್ಲಿ ಭಾಗವಹಿಸಿದ್ದರು.












