Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ತೆಂಗು ಬೆಳೆಗಾರರಿಗೆ ಭರ್ಜರಿ ಗುಡ್ ನ್ಯೂಸ್ : ಕ್ವಿಂಟಾಲ್ ಕೊಬ್ಬರಿ ಎಷ್ಟಿದೆ ಗೊತ್ತಾ..?

---Advertisement---

ಕೃಷಿ ಮಾಡೋರಿಗೆ ಒಂದೆರಡು ಸಮಸ್ಯೆ ಅಲ್ಲ. ಬೆಳೆ ರೋಗದ ಸಮಸ್ಯೆಗಳ ನಡುವೆಯೂ ಉತ್ತಮ ಫಸಲಿಗೆ ರೈತ ಹೋರಾಟ ಮಾಡ್ತಾ ಇರ್ತಾನೆ. ಅಷ್ಟು ಕಷ್ಟ ಪಟ್ಟು ಬೆಳೆದ ಬೆಳೆಗೆ ಒಳ್ಳೆ ಬೆಲೆ ಸಿಕ್ಕಿದರೆ ಅದಕ್ಕಿಂತ ಖುಷಿ ಮತ್ತೆಲ್ಲಿರುತ್ತೆ ರೈತನಿಗೆ. ಹೌದು, ಇಂದು ತೆಂಗು ಬೆಳೆಗಾರರಿಗೆ ಖುಷಿ ಸುದ್ದಿಯೊಂದು ಸಿಕ್ಕಿದೆ. ಕೊಬ್ಬರಿ ಬೆಲೆ ದಾಖಲೆಯ ಮಟ್ಟಕ್ಕೆ ಏರಿಕೆಯಾಗಿದೆ.

1 ಕ್ವಿಂಟಾಲ್ ಕೊಬ್ಬರಿ 32 ಸಾವಿರ ರೂಪಾಯಿಗೆ ಏರಿಕೆಯಾಗಿದೆ. ತಿಂಗಳಿಗೆ ಕೊಬ್ಬರಿ ಬೆಲೆ ಕ್ವಿಂಟಾಲ್ ಗೆ 8-10 ಸಾವಿರ ಏರಿಕೆಯಾಗಿದೆ. ನುಸಿಪೀಡೆ,ಬೀಳೆ ತಲೆ ಹುಳು ಬಾಧೆಗೆ ರೈತರು ಕಂಗೆಟ್ಟು ಹೋಗಿದ್ದರು. ತೆಂಗಿನ ಮರಗಳನ್ನ ಆರೋಗ್ಯಯುತವಾಗಿ ಕಾಪಾಡಿಕೊಳ್ಳುವುದೇ ದೊಡ್ಡ ಮಟ್ಟದ ಸಾಹಸ. ಆದರೆ ಈ ಬೆಲೆ ಏರಿಕೆಯ ಸಮಯದಲ್ಲಿ ಅದೆಷ್ಟೋ ರೈತರ ಬಳಿ ಕೊಬ್ಬರಿಯೇ ಇಲ್ಲದಂತಾಗಿದೆ. ಬಹಳ ಸಣ್ಣ ರೈತರೆಲ್ಲ ಈ ಕೊಬ್ಬರಿಯನ್ನ ಮಾರಿಕೊಂಡು ಬಿಟ್ಟಿದ್ದಾರೆ.

ಇಳುವರಿ ಇಳಿಕೆಯಿಂದಾನೂ ಬೆಲೆ ಜಾಸ್ತಿಯಾಗಿದೆ. ಕೆಲವೇ ಕೆಲ ರೈತರು ಮಾತ್ರ ಬೆಲೆ ಜಾಸ್ತಿ ಆಗುವ ವೇಳೆಗೆ ಸ್ಟಾಕ್ ಗಳನ್ನ ಇಟ್ಟುಕೊಂಡಿರೋದು. ಸಣ್ಣ ಸಣ್ಣ ರೈತರು ಆಗಿಂದಾಗ್ಗೆ ಮಾರಿಕೊಂಡಿರುವ ಕಾರಣ ಬೆಲೆ ಏರಿಕೆಯ ಸಂದರ್ಭದಲ್ಲಿ ಯಾವುದೇ ರೀತಿಯ ಲಾಭವಾಗಿಲ್ಲ. ಆದರೆ ಈಗ ಕೊಬ್ಬರಿ ಸ್ಟಾಕ್ ಇಟ್ಟುಕೊಂಡಿರುವ ರೈತರಿಗಂತು ಬಂಪರ್ ಲಾಟರಿ ಹೊಡೆದಂತೆ ಆಗಿದೆ. ಒಳ್ಳೆ ಬೆಲೆ ಏರಿಕೆ ಆಗಿರೋ ಕಾರಣ ರೈತರು ತಮಗಾಗುವ ನಷ್ಟವನ್ನು ತಪ್ಪಿಸಿಕೊಂಡಂತೆ ಆಗಿದೆ. ಸದ್ಯ ಮಾರುಕಟ್ಟೆಯಲ್ಲಿ ಒಂದು ಕ್ವಿಂಟಾಲ್ ಕೊಬ್ಬರಿಗೆ 32 ಸಾವಿರ ಏರಿಕೆಯಾಗಿದೆ.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now
🏫 ಅಡ್ಮಿಷನ್ ಓಪನ್
🔒

ಇಂಡಿಯನ್ ಇಂಟರ್ ನ್ಯಾಷನಲ್ ಸ್ಕೂಲ್

ಸ್ವಾಗತ...