ಚಿತ್ರದುರ್ಗ. ಏ.9: 2025-26 ನೇ ಸಾಲಿನ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯಲ್ಲಿ ತುರುವನೂರು ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ 74 ವಿದ್ಯಾರ್ಥಿಗಳಲ್ಲಿ 69 ವಿದ್ಯಾರ್ಥಿಗಳು ಉತ್ತೀರ್ಣರಾಗಿ ಶೇಕಡ ಶೇ.93.24 ಫಲಿತಾಂಶ ದಾಖಲಿಸಿದೆ.
ಕಲಾ ವಿಭಾಗದಲ್ಲಿ ಪಿ.ವಾಣಿ 578 ಅಂಕಗಳೊಂದಿಗೆ ಶೇ. 96.33, ವಿಜ್ಞಾನ ವಿಭಾಗದಲ್ಲಿ ಟಿ.ಲಾವಣ್ಯ 571 ಅಂಕಗಳೊಂದಿಗೆ ಶೇ.95.16, ಸಿ.ಡಿ. ಲಕ್ಷ್ಮೀ 569 ಅಂಕಗಳೊಂದಿಗೆ ಶೇ. 94.83 ಗಳನ್ನು ಗಳಿಸಿರುತ್ತಾರೆ. ಇದರೊಂದಿಗೆ ಒಟ್ಟು 15 ಅತ್ಯುನ್ನತ ಶ್ರೇಣಿ, 51 ಉನ್ನತ ಶ್ರೇಣಿ 5 ದ್ವಿತೀಯ ಶ್ರೇಣಿಯಲ್ಲಿ ಉತ್ತೀರ್ಣರಾಗಿ ಕಾಲೇಜಿಗೆ ಕೀರ್ತಿ ತಂದಿದ್ದಾರೆ.
ಸಮಯೋಚಿತ ವಾರ್ಷಿಕ ಕ್ರಿಯಾಯೋಜನೆ, ನಿರಂತರ ಮಾರ್ಗದರ್ಶನ, ಫೋಷಕರ ಸಂಪರ್ಕ, ಪೋಷಕರ ಸಭೆಗಳು ಉಪನ್ಯಾಸಕರೊಂದಿಗೆ ಪ್ರತಿ ವಿದ್ಯಾರ್ಥಿಗಳ ಮನೆ-ಮನೆಗೆ ಭೇಟಿ ನೀಡಿ, ವಿದ್ಯಾರ್ಥಿಗಳ ವೈಯಕ್ತಿಕ ಅಧ್ಯಯನ, ಘಟಕ ಪರೀಕ್ಷೆ ಮತ್ತು ಕಿರು ಪರೀಕ್ಷೆಗಳಲ್ಲಿ, ವಿದ್ಯಾರ್ಥಿಗಳು ಮಾಡುವಂತ ತಪ್ಪುಗಳನ್ನು ನಿರಂತರವಾಗಿ ತಿದ್ದುತ್ತಾ ಮಾರ್ಗದರ್ಶನ ನೀಡಿದರು. ಇಲಾಖೆಯು ನಡೆಸಿದ ಎರಡು ಪೂರ್ವಸಿದ್ದತಾ ಪರೀಕ್ಷೆಯ ಜೊತೆಗೆ ಕಾಲೇಜಿನ ಹಂತದಲ್ಲಿ ಎರಡು ಪೂರ್ವಸಿದ್ದತಾ ಪರೀಕ್ಷೆಗಳನ್ನು ನಡೆಸಲಾಯಿತು, ಪ್ರಯುಕ್ತ ಈ ಒಂದು ಫಲಿತಾಂಶಕ್ಕೆ ಬರಲು ಸಾಧ್ಯವಾಯಿತು ಎಂದು ಕಾಲೇಜಿನ ಪ್ರಾಚಾರ್ಯ ಡಾ.ಬಿ.ಕೃಷ್ಣಪ್ಪ ತಿಳಿಸಿದ್ದಾರೆ.













