ಬೆಂಗಳೂರು: ಬಿಜೆಪಿ ಮುಖಂಡ ಯೋಗೀಶ್ ಗೌಡ ಕೊಲೆ ಕೇಸಿನ ಸಂಬಂಧ ಬಹಳ ವರ್ಷಗಳಿಂದಾನೂ ವಿಚಾರಣೆ ನಡೆಯುತ್ತಲೆ ಇದೆ. ಇಂದು ತೀರ್ಪು ಪ್ರಕಟವಾಗುವ ಎಲ್ಲಾ ಸಾಧ್ಯತೆಯೂ ಇತ್ತು. ಇದೀಗ ಕೋರ್ಟ್ ಅಂತಿಮ ಆದೇಶವನ್ನು ಮುಂದೂಡಿಕೆ ಮಾಡಿದೆ. ಏಪ್ರಿಲ್ 15ಕ್ಕೆ ತೀರ್ಪು ಆದೇಶವನ್ನ ನೀಡಲಿದೆ. ತೀರ್ಪಿನ ಹಿನ್ನಲೆಯಲ್ಲಿ ಇಂದು ವಿನಯ್ ಕುಲಕರ್ಣಿ ಸೇರಿ 21 ಆರೋಪಿಗಳು ಕೋರ್ಟ್ ಮುಂದೆ ಹಾಜರಾಗಿದ್ದರು. ಆದರೆ ಪ್ರಕರಣದಲ್ಲಿ ವಿನಯ್ ಕುಲಕರ್ಣಿ ದೋಷಿನಾ ನಿರ್ದೂಷಿನಾ ಎನ್ನುವಂತಹ ಪ್ರಶ್ನೆಗೆ ಉತ್ತರ ಸಿಕ್ಕೆ ಇಲ್ಲ. ಎಲ್ಲಾ ಅಂದುಕೊಂಡಂತೆ ಆಗಿದ್ದಿದ್ದರೆ ಇಂದು ತೀರ್ಪು ಬರ್ತಾ ಇತ್ತು. ಆದರೆ ಜನಪ್ರತಿನಿಧಿಗಳ ಕೋರ್ಟ್ ಆದೇಶವನ್ನ ಮುಂದೂಡಿದೆ.
ಯೋಗೀಶ್ ಗೌಡ ಕೊಲೆ ಪ್ರಕರಣ ರಾಜ್ಯಾದ್ಯಂತ ಸಂಚಲನ ಸೃಷ್ಟಿ ಮಾಡಿತ್ತು. ಈ ಕೊಲೆ ಕೇಸಲ್ಲಿ ಎ1 ಆರೋಪಿಯಾಗಿ ಬಸವರಾಜ್ ಮುತ್ತಗಿ, ಎ2 ಆರೋಪಿ ವಿಕ್ರಂ, ಎ3 ಕೀರ್ತಿಕುಮಾರ್, ಎ4 ಸಂದೀಪ್, ಎ5 ವಿನಾಯಕ, ಎ6 ಮಹಾಬಲೇಶ್ವರ, ಎ7 ಸಂತೋಷ, ಎ8 ದಿನೇಶ್, ಎ9 ಅಶ್ವತ್ಥ್, ಎ10 ಸುನೀಲ್, ಎ11 ನಜೀರ್ ಅಹ್ಮದ್, ಎ12 ಶಹನವಾಜ್, ಎ13 ನೂತನ್, ಎ14 ಹರ್ಷಿತ್, ಎ15 ವಿನಯ್ ಕುಲಕರ್ಣಿ, ಎ16 ಚಂದ್ರಶೇಖರ್ ಇಂಡಿ, ಎ17 ಶಿವಾನಂದ ಬಿರಾದರ್, ಎ18 ವಿಕಾಸ್ ಕಲಬುರಗಿ, ಎ19 ಚನ್ನಕೇಶವ ಟಿಂಗರಿಕರ್, ಎ20 ವಾಸುದೇವ್ ನಿಲೇಕಣಿ, ಎ21 ಸೋಮಶೇಖರ್ ನ್ಯಾಮನಗೌಡ ಆರೋಪಿ ಸ್ಥಾನದಲ್ಲಿದ್ದಾರೆ. ಇವರೆಲ್ಲರೂ ಇಂದು ಜನಪ್ರತಿನಿಧಿಗಳ ನ್ಯಾಯಾಲಯಕ್ಕೆ ಹಾಜರಾಗಿದ್ದರು. ಆದರೆ ಕೋರ್ಟ್ ಅಂತಿಮ ತೀರ್ಪನ್ನ ಮುಂದೂಡಿಕೆ ಮಾಡಿದೆ. ಹೀಗಾಗಿ ಆರೋಪಿಗಳ ಎದೆಯಲ್ಲಿ ಢವ ಢವ ಶುರುವಾಗಿದೆ.



















