ವರದಿ ಮತ್ತು ಫೋಟೋ ಕೃಪೆ
ಸುರೇಶ್ ಬೆಳಗೆರೆ, ಚಳ್ಳಕೆರೆ
ಮೊ : 8431413188
ಸುದ್ದಿಒನ್, ಚಳ್ಳಕೆರೆ, ಏಪ್ರಿಲ್. 03 : ತಾಲೂಕಿನ ಬೆಳಗೆರೆ ಕೆರೆ ಏರಿ ಸಮೀಪ ನೆಲೆಸಿ ಭಕ್ತರನ್ನು ಕಾಪಾಡುತ್ತಿರುವ ಶ್ರೀ ಲಕ್ಷ್ಮಿ ರಂಗನಾಥ ಸ್ವಾಮಿ ಜಾತ್ರೆ ಮಾರ್ಚ್ 29 ರಂದು ಆರಂಭವಾಗಿ ಏಪ್ರಿಲ್ 03 ನೇ ತಾರೀಖಿನವರೆಗೆ ಅದ್ದೂರಿಯಾಗಿ ಜರುಗಿತು.
ಮಾ.29 ರಂದು ಬೆಳಗ್ಗೆ ಲಕ್ಷ್ಮಿರಂಗನಾಥ ಸ್ವಾಮಿಗೆ ವೇದಾವತಿ ನದಿಯಲ್ಲಿ ಗಂಗಾಪೂಜೆ ನೆರವೇರಿಸಲಯಿತು. ನಾರಾಯಣಪುರಕ್ಕೆ ತೆರಳಿ ಗೊಂಚಕಾರ ಮನೆಯಲ್ಲಿ ವಿಶೇಷ ಪೂಜೆ ಮತ್ತು ಅನ್ನದಾಸೋಹ ಏರ್ಪಡಿಸಲಾಗಿತ್ತು.
ದಿನಾಂಕ 30 ರಂದು ನಾರಾಯಣಪುರದಿಂದ ಬೆಳಗೆರೆಗೆ ಪ್ರಯಾಣ ಬೆಳಸಿದ ರಂಗನಾಥ ಸ್ವಾಮಿ ಗ್ರಾಮದಲ್ಲಿ ಗ್ರಾಮಸ್ಥರು ಪೂಜೆ ಸಲ್ಲಿಸಿದರು.
31 ರಂದು ಪ್ರಧಾನ ದೇವಸ್ಥಾನದಲ್ಲಿ ಪುರೋಹಿತರಾದ ಯಾದಾಟು ವಂಶಸ್ಥರಾದ ಬಿಎಂ.ಮುರಳಿಧರ ಶಾಸ್ತ್ರಿ ಅವರು ಪೌರಹಿತ್ಯದಲ್ಲಿ ಹೋಮ ಹವನ ವಿಶೇಷ ಪೂಜೆ ಮತ್ತು ಶ್ರೀ ಲಕ್ಷ್ಮಿ ರಂಗನಾಥ ಸ್ವಾಮಿ ಪಾಣಿ ಗ್ರಹಣ ನಡೆಯಿತು. ಅಲಂಕೃತ ಗೊಂಡ ಟ್ರ್ಯಾಕ್ಟರ್ ನಲ್ಲಿ ಸ್ವಾಮಿಯನ್ನ ಪ್ರತಿಷ್ಠಾಪಿಸಿ ಪಾದಗಟ್ಟೆಯರೆಗೂ ಉರುಮೆ ವಾದ್ಯ ಹಾಗೂ ಡೊಳ್ಳು ವಾದ್ಯಗಳೊಂದಿಗೆ ಮೆರವಣಿಗೆ ನಡೆಸಲಾಯಿತು. ನಂತರ ಮಹಿಳೆಯರು ಹಿಟ್ಟಿನ ಆರತಿ ಬೆಳಗಿದರು.
ಸಂಜೆ ಬೆಳಗೆರೆ ಗ್ರಾಮದಿಂದ ಪ್ರಧಾನ ದೇವಸ್ಥಾನಕ್ಕೆ ಅರಿವೆ ಅನ್ನ ಹಾಗೂ ವಿಶೇಷ ಕೈ ಕಾರ್ಯಗಳು ಜರುಗಿದವು. ಗುರವಾರ ಸಂಜೆ ವಿವಿಧ ಹೂಗಳಿಂದ ಅಲಂಕೃತ ಗೊಂಡ ಬ್ರಹ್ಮರಥೋತ್ಸವದಲ್ಲಿ ದೇವಸ್ಥಾನದಿಂದ ರಥದ ಬೀದಿಯವರೆಗೆ ಸ್ವಾಮಿಯನ್ನು ಮೆರವಣಿಗೆ ಮೂಲಕ ಕರೆತಂದು ಬ್ರಹ್ಮರಥೋತ್ಸವದಲ್ಲಿ ಪ್ರತಿಷ್ಠಾಪಿಸಿ ಹುರುಮೆ ಹಾಗೂ ಡೊಳ್ಳು ವಾದ್ಯಗಳೊಂದಿಗೆ ಭಕ್ತರ ಕೆಕೆಯೊಂದಿಗೆ ರಥದ ಹಗ್ಗವನ್ನು ಹಿಡಿದು ಭಕ್ತರು ರಥವನ್ನ ಪಾದಕಟ್ಟೆವರೆಗೂ ಎಳೆದು ತಂದು ಪಾದಕಟ್ಟೆಯ ಮುಂದೆ ವಿಶೇಷ ಪೂಜೆ ಸಲ್ಲಿಸಿ ನಂತರ ರಥ ನಿಲ್ಲುವ ಸ್ಥಳಕ್ಕೆ ಎಳೆದು ತಂದು ನಿಲ್ಲಿಸಿದರು. ರಥದ ಗಾಲಿಗಳಿಗೆ ತೆಂಗಿನಕಾಯಿ ಹೊಡೆದು ಹರಕೆ ತೀರಿಸಿಕೊಂಡರು. ನಂತರ ಮತ್ತು ಪಾರಿವಾಟ ಕಾರ್ಯಕ್ರಮ ನಡೆಯುತು.
ಶಾಸಕ ಟಿ. ರಘುಮೂರ್ತಿ ರಥವನ್ನ ಎಳೆಯುವ ಮೂಲಕ ಜಾತ್ರೆಯಲ್ಲಿ ಭಾಗಿಯಾದರು. ರಂಗನಾಥ ಸ್ವಾಮಿಯ 9 ಅವತಾರವನ್ನ ತೋರಿಸುವ ಜಾನಪದ ಶೈಲಿಯ ಮಾತುಗಾರಿಕೆ ಮನರಂಜನೆ ಕಾರ್ಯಕ್ರಮ ವಿಶೇಷವಾಗಿ ನಡೆಯಿತು. ಶ್ರೀ ಲಕ್ಷ್ಮಿ ರಂಗನಾಥ ಸ್ವಾಮಿ ಜಾತ್ರೆಗೆ ಆಂಧ್ರಪ್ರದೇಶ ತೆಲಂಗಾಣ ತುಮಕೂರು ದಾವಣಗೆರೆ ಬಳ್ಳಾರಿ ಸೇರಿದಂತೆ ವಿವಿಧ ರಾಜ್ಯಗಳಿಂದ ಸಾವಿರಾರು ಭಕ್ತರು ಆಗಮಿಸಿದರು. ನೀನಾಸಂ ಕಲಾವಿದ ಉಪನ್ಯಾಸಕ
ಸಾಹಿತಿ ಬೆಳಗೆರೆ ಕೆ. ವೆಂಕಟರಮಣ ಇವರ ವಿರುಚಿತ ಕಾಳಿಂಗನ ಗರ್ವಭಂಗ ಅರ್ಥಾತ್ ಸುಕನ್ಯಾಳ ಚೆಲ್ಲಾಟ ಎಂಬ ಸುಂದರ ಸಾಮಾಜಿಕ ನಾಟಕವನ್ನು ಗೆಳೆಯರ ಬಳಗದಿಂದ ಬೆಳಗೆರೆ ಗ್ರಾಮದಲ್ಲಿ ( ಪ್ರಥಮ ಪ್ರಯೋಗ) ಅಭಿನಯಿಸ ಲಾಯಿತು.
ಈ ಜಾತ್ರೆಯಲ್ಲಿ ಬೆಳಗೆರೆ ರಂಗನಾಥ ಸ್ವಾಮಿ ದೇವಸ್ಥಾನ ಜೀರ್ಣೋದ್ಧಾರ ಸೇವಾ ಸಮಿತಿ ಟ್ರಸ್ಟ್, ಬೆಳಗೆರೆ ನಾರಾಯಣಪುರ ರಂಗನಾಥಪುರ ಗ್ರಾಮದ ಗ್ರಾಮಸ್ಥರು ಹಾಗೂ ದೇವಸ್ಥಾನದ ಬುಡಕಟ್ಟಿಗೆ ಸೇರಿದ ಅಣ್ಣ-ತಮ್ಮಂದಿರರು ನೆಂಟರು ಭಕ್ತರು. ಪೂಜಾರಿಗಳು ಕೈವಾಡಸ್ತರು, ಬೆಳಗೆರೆ ಗ್ರಾಮ ಪಂಚಾಯತಿ ಮಾಜಿ ಅಧ್ಯಕ್ಷರು ಮಾಜಿ ಉಪಾಧ್ಯಕ್ಷರು ಸದಸ್ಯರು ಹಾಗೂ ಸಿಬ್ಬಂದಿ ವರ್ಗದವರು ದೇವಸ್ಥಾನ ಅರ್ಚಕರು ಹಾಗೂ ಅಣ್ಣತಮ್ಮಂದಿರರು ಹಾಗೂ ಬೆಳಗೆರೆ ನಾರಾಯಣಪುರ ಗ್ರಾಮದ ಮುಖಂಡರು ಗ್ರಾಮಸ್ಥರು ಈ ಜಾತ್ರೆಯನ್ನು ಅದ್ದೂರಿಯಾಗಿ ಆಚರಣೆ ಮಾಡಿದರು.
ಸಾರ್ವಜನಿಕ ಕುಂದುಕೊರತೆ ವಿಭಾಗ : ನಿಮ್ಮ ಧ್ವನಿ - ನಮ್ಮ ವೇದಿಕೆ
ನಿಮ್ಮ ಊರಿನ ಸಮಸ್ಯೆಗಳು ಇನ್ನು ಮುಂದೆ ಕೇವಲ ಚರ್ಚೆಯಾಗಬಾರದು, ಅವುಗಳಿಗೆ ಪರಿಹಾರ ಸಿಗಬೇಕು.
ವರದಿ ಮಾಡುವುದು ಹೇಗೆ?
- ನಿಮ್ಮ ಸುತ್ತಮುತ್ತಲಿನ ರಸ್ತೆ, ನೀರು, ವಿದ್ಯುತ್ ಸಮಸ್ಯೆಗಳ ಫೋಟೋ, ವಿಡಿಯೋ ಅಥವಾ ಮಾಹಿತಿ ನಮಗೆ ಕಳುಹಿಸಿ.
ನಾವು ಏನು ಮಾಡುತ್ತೇವೆ?
- ನೀವು ಕಳುಹಿಸಿದ ವರದಿಗಳನ್ನು suddione.com ನಲ್ಲಿ ಪ್ರಕಟಿಸುತ್ತೇವೆ.
- ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದು ಪರಿಹಾರಕ್ಕಾಗಿ ಒತ್ತಾಯಿಸುತ್ತೇವೆ.
- ನಿಮ್ಮೂರಿನ ಅಭಿವೃದ್ಧಿಗೆ ನಿಮ್ಮೊಂದಿಗೆ ಧ್ವನಿಗೂಡಿಸುತ್ತೇವೆ.



















