Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ನಮ್ಮದು ಮಹಾತ್ಮ ಗಾಂಧಿಯವರ ಹಿಂದೂತ್ವ – ಬಿಜೆಪಿಯವರದ್ದು ಗೋಡ್ಸೆಯ ಹಿಂದೂತ್ವ : ಸಿ.ಎಂ.ಸಿದ್ದರಾಮಯ್ಯ

---Advertisement---

ಸುದ್ದಿಒನ್, ದಾವಣಗೆರೆ.  ಏ.02: ಕಾಂಗ್ರೆಸ್ ಪಕ್ಷ ಸರ್ವ ಧರ್ಮ, ಸಕಲ ಜಾತಿಯವರನ್ನೂ ಜೊತೆಗೆ ಕರೆದುಕೊಂಡು ಹೋಗುವ ಪಕ್ಷವಾಗಿದ್ದು ಮಹಾತ್ಮ ಗಾಂಧಿ ಹೇಳುವ ಹಿಂದೂತ್ವವನ್ನು, ಅಧ್ಯಾತ್ಮವನ್ನು ಪಾಲಿಸುವ ಪಕ್ಷ. ಬಿಜೆಪಿ ನಾಥೂರಾಮ್ ಗೋಡ್ಸೆಯ ಹಿಂದೂತ್ವದಲ್ಲಿ ನಂಬಿಕೆ ಇರಿಸಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಟೀಕಿಸಿದರು.

ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆ ಪ್ರಚಾರ ಸಂಬಂಧ ಕ್ಷೇತ್ರದಲ್ಲಿ ರೋಡ್ ಶೋ ನಡೆಸಿ ಮಾತನಾಡಿದರು.

ನನ್ನ ಹೆಸರಲ್ಲೇ ಶಿವ, ರಾಮ ಇದ್ದಾರೆ. ನಾನು ಹಿಂದೂ ಅಲ್ಲವಾ ? ನಮ್ಮ ಜೊತೆಗಿರುವ ಈ ಶ್ವರ್ ಖಂಡ್ರೆಯವರು ಹಿಂದೂ ಅಲ್ವಾ? ಎಂ.ಸಿ.ಸುಧಾಕರ್ ಅವರು ಹಿಂದೂ ಅಲ್ವಾ ಎಂದು ಪ್ರಶ್ನಿಸಿದರು.

ಗೋಡ್ಸೆಯ ಹಿಂದೂತ್ವ ಹೇಳಿಕೊಂಡು ಅಧಿಕಾರಕ್ಕೆ ಬರುವುದು, ಆಮೇಲೆ ಜನರನ್ನು ಮರೆತು , ಅಭಿವೃದ್ಧಿ ಮರೆತು ಹಣ ಲೂಟಿ ಹೊಡೆಯುತ್ತಾ ಕೂತರು. ಇದಕ್ಕೆ ಹಿಂದೂತ್ವವನ್ನು ಬಳಸಿಕೊಳ್ಳುವುದು ಬಿಜೆಪಿಗೆ ರೂಢಿ ಆಗಿದೆ ಎಂದು ಟೀಕಿಸಿದರು.

ನಾವು ಮೊದಲ ಬಾರಿ ಮುಖ್ಯಮಂತ್ರಿ ಆಗಿದ್ದಾಗ ರೈತರು ಸೇರಿ ಎಲ್ಲಾ ಶ್ರಮಿಕ ವರ್ಗಗಳ ಸಾಲ ಮನ್ನಾ ಮಾಡಿ ಜನರಿಗೆ ನೆರವಾದೆವು. ಆದರೆ, ಯಡಿಯೂರಪ್ಪ ಅವರಿಗೆ ಸಾಲ ಮನ್ನಾ ಮಾಡಿ ಎಂದರೆ, “ನಮ್ಮಲ್ಲಿ ಹಣ ಮುದ್ರಿಸುವ ಮೆಷಿನ್ ಇಲ್ಲ” ಎಂದು ಉಡಾಫೆಯಿಂದ ಅಧಿಕಾರ ಮುಗಿಸಿದರು. ಬೊಮ್ಮಾಯಿ ಅವರು ಮುಖ್ಯಮಂತ್ರಿ ಆಗಿದ್ದಾಗಲೂ 29000 ಕೋಟಿ ಗುತ್ತಿಗೆದಾರರ ಹಣ ಬಾಕಿ ಉಳಿಸಿ ಹೋದರು. ಇದರಲ್ಲಿ 23 ಸಾವಿರ ಕೋಟಿ ತೀರಿಸಿದ್ದೀವಿ. ಉಳಿದದ್ದನ್ನೂ ತೀರಿಸ್ತೀವಿ ಎಂದರು.

ನಾವು ನುಡಿದಂತೆ ನಡೆದು ಐದಕ್ಕೆ ಐದೂ ಗ್ಯಾರಂಟಿಗಳನ್ನೂ ಜಾರಿ ಮಾಡಿದ್ದೇವೆ. ನರೇಂದ್ರ ಮೋದಿಯವರು ಪ್ರಧಾನಿಯಾಗಿ ಹನ್ನೆರಡು ವರ್ಷದಲ್ಲಿ ತಾವೇ ಹೇಳಿದ್ದರಲ್ಲಿ ಒಂದನ್ನೂ ಜಾರಿ ಮಾಡಲಿಲ್ಲ. ಕೇವಲ ಅದಾನಿ ಮತ್ತು ಅಂಬಾನಿ ಇಬ್ಬರಿಗೆ ಮಾತ್ರ ಲಾಭ ಮಾಡಿಕೊಟ್ಟಿದ್ದನ್ನು ವಿವರಿಸಿದರು.

ಹೀಗಾಗಿ ಕಾಂಗ್ರೆಸ್ಸಿನ ಅಭಿವೃದ್ಧಿ ಕಾರ್ಯಗಳು, ಶಾಮನೂರು ಶಿವಶಂಕರಪ್ಪ ಅವರ ಅಭಿವೃದ್ಧಿ ಕಾರ್ಯಗಳನ್ನು ಮುಂದುವರೆಸಲು ಸಮರ್ಥ್ ಶಾಮನೂರು ಅವರನ್ನು ಗೆಲ್ಲಿಸಿ ಎಂದು ಮನವಿ ಮಾಡಿದರು.

ಸಾರ್ವಜನಿಕ ಕುಂದುಕೊರತೆ ವಿಭಾಗ : ನಿಮ್ಮ ಧ್ವನಿ - ನಮ್ಮ ವೇದಿಕೆ

ನಿಮ್ಮ ಊರಿನ ಸಮಸ್ಯೆಗಳು ಇನ್ನು ಮುಂದೆ ಕೇವಲ ಚರ್ಚೆಯಾಗಬಾರದು, ಅವುಗಳಿಗೆ ಪರಿಹಾರ ಸಿಗಬೇಕು.

ವರದಿ ಮಾಡುವುದು ಹೇಗೆ?

  • ನಿಮ್ಮ ಸುತ್ತಮುತ್ತಲಿನ ರಸ್ತೆ, ನೀರು, ವಿದ್ಯುತ್ ಸಮಸ್ಯೆಗಳ ಫೋಟೋ, ವಿಡಿಯೋ ಅಥವಾ ಮಾಹಿತಿ ನಮಗೆ ಕಳುಹಿಸಿ.
ವಾಟ್ಸಪ್ ಮಾಡಿ: 90369 74702

ನಾವು ಏನು ಮಾಡುತ್ತೇವೆ?

  • ನೀವು ಕಳುಹಿಸಿದ ವರದಿಗಳನ್ನು suddione.com ನಲ್ಲಿ ಪ್ರಕಟಿಸುತ್ತೇವೆ.
  • ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದು ಪರಿಹಾರಕ್ಕಾಗಿ ಒತ್ತಾಯಿಸುತ್ತೇವೆ.
  • ನಿಮ್ಮೂರಿನ ಅಭಿವೃದ್ಧಿಗೆ ನಿಮ್ಮೊಂದಿಗೆ ಧ್ವನಿಗೂಡಿಸುತ್ತೇವೆ.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now