Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ಅನೈತಿಕ ಸಂಬಂಧ ವಿಚಾರಕ್ಕೆ ವಿದ್ಯಾರ್ಥಿನಿ ಸಾವು ಕೇಸ್ : ಚಿತ್ರದುರ್ಗದ ಎಸ್ಪಿ ಹೇಳಿದ್ದೇನು..?

---Advertisement---

ಚಿತ್ರದುರ್ಗ: ಅಂತಿಮ ವರ್ಷದ ಡಿಗ್ರಿ ಮಾಡ್ತಾ ಇದ್ದಂತ ನಿಖಿತಾ, ಕಾಲೇಜಿನಲ್ಲಿ ಹರಡಿದ್ದ ಅನೈತಿಕ ಸಂಬಂಧದ ವಿಚಾರ ಹಾಗೂ ಪ್ರೊಫೇಸರ್ ರಾಜು ಅವರ ಹೆಂಡತಿಯ ಬೈಗುಳದಿಂದ ನೊಂದು ಸಾವನ್ನಪ್ಪಿದ್ದಳು. ಈ ಸಂಬಂಧ ಚಿತ್ತದುರ್ಗದ ಎಸ್ಪಿ ಮಾಹಿತಿ ನೀಡಿದ್ದಾರೆ.

 

ನಿನ್ನೆ ಹೊಳಲ್ಕೆರೆ ತಾಲ್ಲೂಕು ಮಲ್ಲಾಡಿಹಳ್ಳಿ ಗ್ರಾಮದಲ್ಲಿರುವ ರಾಘವೇಂದ್ರ ಬಿ.ಎ.ಎಂ.ಎಸ್ ಕಾಲೇಜಿನಲ್ಲಿ ಅಂತಿಮ ವರ್ಷದ ವಿದ್ಯಾರ್ಥಿನಿಯಾದ ನಿಖಿತಾ ಎಂ.ಯು ಇವರು ತಮ್ಮ ಕಾಲೇಜಿನ ಉಪನ್ಯಾಸಕರೊಂದಿಗೆ ಉತ್ತಮ ಬಾಂಧವ್ಯ ಹೊಂದಿದ್ದರು. ಅವರಿಂದ ಇಂಟರ್‌ಶಿಪ್ ಅವಧಿಯಲ್ಲಿ ರೋಗಿಗಳಿಗೆ ಚಿಕಿತ್ಸೆ ನೀಡುವ ವಿಚಾರಕ್ಕೆ ಸಲಹೆ ಸೂಚನೆಗಳನ್ನು ಪಡೆದುಕೊಂಡು ವಿದ್ಯಾಭ್ಯಾಸ ಮಾಡುತ್ತಿದ್ದರು. ಈಗಿರುವಾಗ್ಗೆ ನಿಖಿತಾಳ ಸಹಪಾಠಿಗಳು ಉಪನ್ಯಾಸಕರೊಂದಿಗೆ ಅನೈತಿಕ ಸಂಬಂಧ ಇಟ್ಟುಕೊಂಡಿರುತ್ತಾಳೆ ಎಂದು ನಿಖಿತಾಳನ್ನು ಅವಮಾನಿಸಿದ್ದಲ್ಲದೇ ಕಾಲೇಜಿನ ಇತರೆ ಸ್ನೇಹಿತರಿಗೆ ಹಾಗೂ ಬೇರೆಯವರಿಗೆ ಅಪಪ್ರಚಾರ ಮಾಡಿ ಚಾರಿತ್ರಿಕ ವಧೆ ಮಾಡಿರುತ್ತಾರೆ.

 

ಉಪನ್ಯಾಸಕನ ಹೆಂಡತಿಯು ಸಹ ನಿಖಿತಾಳ ಮೇಲೆ ಅನುಮಾನಪಟ್ಟಿರುತ್ತಾರೆ. ಇದರಿಂದ ಮನನೊಂದು ನಿಖಿತಾ ನಿನ್ನೆ ಅಂದ್ರೆ 01.04.2026 ರಂದು ಬೆಳಿಗ್ಗೆ 10.00 ಗಂಟೆಯಿಂದ ಮಧ್ಯಾಹ್ನ 1.00 ಗಂಟೆ ಮಧ್ಯೆ ಅವಧಿಯಲ್ಲಿ ತನ್ನ ರೂಮಿನಲ್ಲಿ ನೇಣು ಹಾಕಿಕೊಂಡು ಮೃತಪಟ್ಟಿದ್ದು, ಈ ಬಗ್ಗೆ ಮೃತಳ ತಂದೆಯಾದ ಉಮಾಶಂಕರ್‌ರವರು ತನ್ನ ಮಗಳ ಸಾವಿಗೆ ಸಹಪಾಠಿಗಳು ಮತ್ತು ಉಪನ್ಯಾಸಕನ ಹೆಂಡತಿಯವರೇ ಕಾರಣರಾಗಿರುತ್ತಾರೆ. ಅವರ ಮೇಲೆ ಕಾನೂನು ಕ್ರಮ ಜರುಗಿಸುವಂತೆ ದೂರು ನೀಡಿದ್ದಾರೆ. ದೂರಿನ ಆಧಾರದ ಮೇಲೆ ಹೊಳಲ್ಕೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಕೈಗೊಂಡಿದ್ದೇವೆ. ಮೃತಳ ಬಳಿ ಡೆತ್‌ನೋಟ್ ದೊರೆತ್ತಿದ್ದು, ಈ ಬಗ್ಗೆ ತನಿಖೆ ಮುಂದುವರೆದಿರುತ್ತದೆ ಎಂದು ಪೊಲೀಸ್ ಅಧೀಕ್ಷಕರು ತಿಳಿಸಿದ್ದಾರೆ.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now
🏫 ಅಡ್ಮಿಷನ್ ಓಪನ್
🔒

ಇಂಡಿಯನ್ ಇಂಟರ್ ನ್ಯಾಷನಲ್ ಸ್ಕೂಲ್

ಸ್ವಾಗತ...