Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

---Advertisement---

ನಮ್ಮ ಊರು ನಮ್ಮ ಹೆಮ್ಮೆ | ಚಿತ್ರದುರ್ಗದ ನೆಲ್ಲಿಕಾಯಿ ಸಿದ್ಧಪ್ಪನ ಬೆಟ್ಟ

---Advertisement---

ವಿಶೇಷ ಲೇಖನ :
ಡಾ.ಕೆ.ವಿ. ಸಂತೋಷ್
ಹೊಳಲ್ಕೆರೆ
ಚಿತ್ರದುರ್ಗ ಜಿಲ್ಲೆ.
ಮೊ : 93424 66936

 

ಸುದ್ದಿಒನ್

ಚಿತ್ರದುರ್ಗದ ಕೋಟೆಯ ಅತ್ಯಂತ ಎತ್ತರದ ಬತೇರಿ ಇರುವ ಬೆಟ್ಟವೇ ನೆಲ್ಲಿಕಾಯಿ ಸಿದ್ಧಪ್ಪನ ಬೆಟ್ಟ. ಕೋಟೆಯ ದಕ್ಷಿಣ ದಿಕ್ಕಿನಲ್ಲಿರುವ ಈ ಬೆಟ್ಟಕ್ಕೆ ಕರುವರ್ತಿ ಈಶ್ವರ ಮಂದಿರದಿಂದ ದಾಟಿ ಮುಂದಕ್ಕೆ ಶ್ರೀರಾಮದೇವರ ಒಡ್ಡಿನ ಪಶ್ಚಿಮದ ಮೇಲ್ಭಾಗದ ಕೋಟೆ ಹತ್ತಿ ಸಿಗುವ ಸಣ್ಣ ಅಗಸೆ ಬಾಗಿಲಿನಿಂದ ಇಲ್ಲಿಗೆ ತಲುಪಬಹುದು/ಅಥವಾ ಕೋಟೆಯ ಒಳಭಾಗದ ಸಂಪಿಗೆ ಸಿದ್ದೇಶ್ವರನ ದೇವಾಲಯದ ಪಕ್ಕದ ದಾರಿಯಿಂದ ಅರಮನೆ ಸಂಕೀರ್ಣವನ್ನು ದಾಟಿ ಮುಂದಕ್ಕೆ ಚಿನ್ನದ ಮನೆ ಎನ್ನುವ ಕಟ್ಟಡದಿಂದ ಮುಂದಕ್ಕೆ ಸಾಗಿ ದಕ್ಷಿಣಕ್ಕೆ ಕಾಲುದಾರಿಯಲ್ಲಿ ಇಲ್ಲಿಗೆ ತಲುಪಬಹುದು.

 

ಕುರುಚಲು ಗಿಡಗಳ ಮಧ್ಯದ ಕಾಲುದಾರಿಯಿಂದ ಮೇಲ್ಭಾಗದವರೆಗೆ ಮೆಟ್ಟಿಲು, ಕಾಲುದಾರಿಯಿದೆ.ಎಲ್ಲಿಯೂ ದಾರಿ ತಪ್ಪುವ ಸಾಧ್ಯತೆ ಇಲ್ಲ.
ನೆಲ್ಲಿಕಾಯಿ ಬೆಟ್ಟದ ಮೇಲಿರುವ ಸಣ್ಣ ಗುಡಿಯಲ್ಲಿ ಪುಟ್ಟ ಈಶ್ವರ ಲಿಂಗವಿದ್ದು,ಇದರಿಂದ ಸಿದ್ಧಪ್ಪನ ಬೆಟ್ಟ ಎಂಬ ಹೆಸರು ಬಂದಿದೆ.
ಕಾಲುದಾರಿಯಿಂದ ಮಾತ್ರವೇ ಇಲ್ಲಿಗೆ ತಲುಪಬೇಕು.ಈ ಗುಡಿಯ ಮೇಲ್ಭಾಗದಲ್ಲಿ ಬತೇರಿ ಇದೆ.ಇದನ್ನು ನೆಲ್ಲಿಕಾಯಿ ಸಿದ್ಧಪ್ಪನ ಬತೇರಿ ಎನ್ನುತ್ತಾರೆ.ಇಲ್ಲಿಂದ ಸುತ್ತಮುತ್ತಲಿನ ಚಿತ್ರದುರ್ಗ ನಗರ, ಗುಡ್ಡದ ರಂಗವ್ವನ ಗುಡ್ಡ, ಚಳ್ಳಕೆರೆ ರಸ್ತೆ, ಕೋಟೆಯ ಒಳ ಆವರಣ,ಹಿಂದಿನ ಅರಮನೆಯ ಪಾಳು ಬಿದ್ದ ನಿವೇಶನ, ತುಪ್ಪದ ಕೊಳ,ಜೋಗಿಮಟ್ಟಿ, ಆಡುಮಲ್ಲೇಶ್ವರ ನೋಡಬಹುದು. ಮೇಲಿನಿಂದ ಕಾಣುವ ಸುಂದರ ವಾತಾವರಣ ಕಣ್ಣಿಗೆ ಖುಷಿ, ಮನಸ್ಸಿಗೆ ಆನಂದ ತರುತ್ತದೆ. ಹತ್ತಿ ಬಂದ ಆಯಾಸ ಬೀಸುವ ತಂಪಾದ ಗಾಳಿಗೆ ಮರೆತು ಹೋಗುತ್ತದೆ.ಜೊತೆಗೆ ಹತ್ತಾರು ವಿವಿಧ ಜಾತಿಯ ಪಕ್ಷಿಗಳು, ಮೊಲ, ಕಾಡು ಕೋಳಿ, ನವಿಲು,ಮುಂಗುಸಿ, ಉಡ….ಚಾರಣ ಮಾಡುವಾಗ/ ಹತ್ತುವಾಗ ನೋಡಬಹುದು. ಇದಕ್ಕಾಗಿ ಬೆಳಗಿನ ಹೊತ್ತು ಹೋಗಬೇಕು. ಚಾರಣಕ್ಕೆ 3-4 ಜನರು ಹೋದರೆ ಅನುಕೂಲ. ಇಂತಹ ಸೂಕ್ಷ್ಮ /ಎತ್ತರದ ಜಾಗದಲ್ಲಿ ಬತೇರಿ ಮಾಡಿರುವುದು ವಿಸ್ಮಯವಾಗಿವೆ,ಆಶ್ಚರ್ಯ ತರಿಸುತ್ತದೆ.

 

ಹೊಸದಾಗಿ ಹೋಗುವವರು ಈ ಹಿಂದೆ ಹೋದವರ ಜೊತೆಗೆ ಹೋದರೆ ಒಳಿತು. ಕಾರಣ ಇಲ್ಲಿ ಇರುವ ದೊಡ್ಡ ದೊಡ್ಡ ಬಂಡೆ ಕಲ್ಲುಗಳ ನಡುವೆ ದಾರಿ ಗೊತ್ತಾಗದೆ ದಾರಿ ತಪ್ಪುವ ಹಾಗೂ ಇರುವ ಜಾಗದಲ್ಲಿಯೇ ಓಡಾಡುವ ಸಾಧ್ಯತೆ ಇರುತ್ತದೆ. ಮೆಟ್ಟಿಲುಗಳು ಇದ್ದರೂ ಕೂಡ ಸಣ್ಣ ಗಾತ್ರದ ಮೆಟ್ಟಿಲುಗಳಾಗಿದ್ದು ಇವು ಕೇವಲ ಕಾಲು ಊರಲು ಅಥವಾ ನಿಲ್ಲಲು ಮಾತ್ರ ಇರುವ ಸಣ್ಣ ಜಾಗಗಳಾಗಿವೆ, ಅದರಲ್ಲೂ ಮಳೆಗಾಲದಲ್ಲಿ ಗಿಡ ಗಂಟೆಗಳು ಬೆಳೆದು ದಾರಿಯೇ ಕಾಣದೆ ಸಮಸ್ಯೆಯಾಗುವ ಸಾಧ್ಯತೆ ಹೆಚ್ಚಾಗಿರುತ್ತದೆ.
ಮಳೆಗಾಲದಲ್ಲಿ ಜೋಗು ಹಾಗೂ ಪಾಚಿ ಕಾರಣಕ್ಕೆ ಕಲ್ಲುಗಳ ಮೇಲೆ ನಿಲ್ಲಲು ಸಾಧ್ಯವಾಗದೆ ಅಥವಾ ಈ ಜಾಗದಲ್ಲಿ ಕಾಲುಗಳು ಸಂಪೂರ್ಣ ಜಾರುವ ಸಾಧ್ಯತೆ ಇರುತ್ತದೆ. ಸದಾಕಾಲ ಈ ದೇವಾಲಯವು ತೆರೆದಿದ್ದು ಚಾರಣಿಗರು ಮಾತ್ರ ಇಲ್ಲಿಗೆ ತಲುಪಬಹುದು. ಅತ್ಯಂತ ಕಷ್ಟಕರ ಹಾದಿ ಇದಾಗಿದ್ದು ಕೋಟೆಯಲ್ಲಿಯೇ ಅತ್ಯಂತ ಹೆಚ್ಚು ಎತ್ತರದ ಗಿರಿ ಶಿಖರ ಇದಾಗಿದೆ. ತಲುಪಿದ ನಂತರ ಮನಮೋಹಕ ದೃಶ್ಯಾವಳಿಗಳಿಂದ ಹತ್ತಿ ಬಂದ ಆಯಾಸವೆಲ್ಲ ಕ್ಷಣಮಾತ್ರದಲ್ಲಿ ಮರೆತು ಬಿಡುತ್ತೇವೆ.

 

ಹತ್ತಲು ಸಾಕಷ್ಟು ಶ್ರಮ ಪಡಬೇಕಾದ ಈ ಜಾಗಕ್ಕೆ ತಲುಪುವುದೇ ಅತ್ಯಂತ ಕಷ್ಟಕರ ಆದರೂ ಹಿಂದಿನ ಕಾಲದಲ್ಲಿ ಈ ಸ್ಥಳಕ್ಕೆ ದೊಡ್ಡ ದೊಡ್ಡ ಬಂಡೆಗಳನ್ನು ಸೇರಿಸಿ ಕಾವಲು ಗೋಪುರ ಸೈನಿಕರ ವಿಶ್ರಾಂತಿ ಸ್ಥಳ ದೇವಾಲಯ ನಿರ್ಮಿಸಿರುವುದು ಆಶ್ಚರ್ಯವನ್ನು ಉಂಟುಮಾಡುತ್ತದೆ ಅದರಲ್ಲೂ ಸೈನಿಕರು ಪ್ರತಿದಿನ ಈ ಸ್ಥಳಕ್ಕೆ ಕೇವಲ ಕಾಲುನಡಿಗೆಯಲ್ಲಿಯೇ ನೆಲಮಟ್ಟದಿಂದ ಇಲ್ಲಿಗೆ ತಲುಪಬೇಕಾಗಿತ್ತು. ಹಾಗೂ ಹಗಲು ರಾತ್ರಿ ಇಲ್ಲಿ ಕಾವಲು ಕಾಯಬೇಕಾಗಿತ್ತು.
ಮೇಲೆ ಹೋಗಿ ಕೆಳಗೆ ಇಳಿದು ಬರಲು 2-3 ಗಂಟೆಯ ಅವಧಿ ಸಮಯ ಹಿಡಿಯುತ್ತದೆ. ಆಹಾರ ನೀರು ಮೇಲಕ್ಕೆ ತೆಗೆದುಕೊಂಡು ಹೋಗುವುದು ಉತ್ತಮ. ಬಂದ ಪ್ರವಾಸಿಗರು ಇಲ್ಲಿ ನೀರಿನ ಬಾಟಲಿ,ಆಹಾರ ಪೊಟ್ಟಣ, ಪ್ಲಾಸ್ಟಿಕ್ ಕವರ್ ಗಳನ್ನು ಎಸೆಯದಂತೆ ಸ್ವಚ್ಛತೆ ಕಾಪಾಡಬೇಕಾಗಿದೆ.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now
🏫 ಅಡ್ಮಿಷನ್ ಓಪನ್
🔒

ಇಂಡಿಯನ್ ಇಂಟರ್ ನ್ಯಾಷನಲ್ ಸ್ಕೂಲ್

ಸ್ವಾಗತ...