Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

war Effect: ನಂದಿನಿ ಉತ್ಪನ್ನಗಳ ಬೆಲೆ ಏರಿಕೆ ಸುಳಿವು ಕೊಟ್ಟ ಡಿಕೆಸು

---Advertisement---

ಬೆಂಗಳೂರು : ಇರಾನ್ – ಇಸ್ರೇಲ್ ವಾರ್ ನಿಂದಾಗಿ ಹಲವು ದೇಶಗಳು ಸಮಸ್ಯೆಯನ್ನ ಎದುರಿಸುತ್ತಿವೆ. ಅದರಲ್ಲಿ ಭಾರತವೂ ಕೂಡ ಒಂದು. ಅದರಲ್ಲೂ ರಾಜ್ಯದಲ್ಲೂ ಯುದ್ಧದ ಬಿಸಿ ತಟ್ಟಿದೆ. ಗ್ಯಾಸ್ ಸಮಸ್ಯೆಗಂತು ಮುಕ್ತಿ ಸಿಕ್ಕಿಲ್ಲ. ಪೆಟ್ರೋಲ್ ಡಿಸೇಲ್ ಬೆಲೆ ಏರಿಕೆಯ ನಡುವೆ, ಅಡುಗೆ ಎಣ್ಣೆಗೂ ಸಮಸ್ಯೆಯಾಗುವ ಸಾಧ್ಯತೆ ಕಾಣಿಸ್ತಾ ಇದೆ. ಇದೀಗ ನಂದಿನಿ ಉತ್ಪನ್ನಗಳಲ್ಲೂ ಏರಿಕೆಯಾಗುವ ಸಾಧ್ಯತೆ ಇದೆ. ಈ ಬಗ್ಗೆ ಬಮುಲ್ ಅಧ್ಯಕ್ಷ ಡಿಕೆ ಸುರೇಶ್ ಪ್ರತಿಕ್ರಿಯೆ ನೀಡಿದ್ದಾರೆ.

ಏನು ಸಮಸ್ಯೆ ಆಗ್ತಾ ಇದೆ, ಏನು ಸಮಸ್ಯೆ ಆಗ್ತಾ ಇಲ್ಲ ಅನ್ನೋದು ಕೇಂದ್ರ ಸರ್ಕಾರಕ್ಕೆ ಗೊತ್ತು. ಒಟ್ಟಾರೆಯಾಗಿ ಇದೇ ರೀತಿಯ ಪರಿಸ್ಥಿತಿ ಮುಂದುವರೆಯಿತು ಅಂದ್ರೆ ಬಹಳ ದೊಡ್ಡ ಪರಿಣಾಮವನ್ನ ನಾವೂ ಎದುರಿಸಬೇಕಾಗುತ್ತದೆ. ಜೊತೆಗೆ ಬೆಲೆ ಏರಿಕೆಯ ಬಿಸಿ ಇಡೀ ಭಾರತ ದೇಶಕ್ಕೆ ತಟ್ಟುತ್ತದೆ. ಈಗಾಗಲೇ ತಟ್ಟಿದೆ ಕೂಡ. ಎಲ್ಲಾ ಪ್ರಾಡಕ್ಟ್ ಗಳ ಮೇಲೂ ಕೂಡ ಹೆಚ್ಚಳವಾಗಿದೆ. ಇನ್ನು ಕೆಲವರು ಇದನ್ನೇ ಬಂಡವಾಳ ಮಾಡಿಕೊಂಡು ಬೆಲೆ ಏರಿಕೆ ಮಾಡುತ್ತಿದ್ದಾರೆ.

ಹೊಟೇಲ್ ಗಳಲ್ಲೂ ಹಾಗೇ ಆಗಿದೆಯಲ್ಲ. ನಾವೂ ಇಂಪೋರ್ಟ್ ಮಾಡ್ತಾ ಇರುವಂತ ವಸ್ತುಗಳ ಮೇಲೆ ಪರಿಣಾಮ ಬೀರಿದೆ. ನಮ್ಮ ಹಾಲು ಒಕ್ಕೂಟಕ್ಕೂ ಸಂದೇಶವನ್ನ ಕೊಟ್ಟಿದ್ದಾರೆ. ಗ್ಯಾಸ್ ಬಳಕೆ ಮಾಡ್ತಾ ಇದ್ದೀರಾ ಅದರಲ್ಲಿ 55% ಉಪಯೋಗಿಸಿ. ಒಂದ್ವೇಳೆ 100% ಬೇಕು ಅಂದ್ರೆ 30% ಅಡಿಷನಲ್ ಕಾಸು ನೀಡಿ ಅಂತ. ಅದರ ಅರ್ಥ ಬೆಲೆ ಏರಿಕೆಗೆ ನಾಂದಿ ಹಾಡಿದಂತೆಯೇ ಸರಿ. ಸದ್ಯಕ್ಕೆ ಯಾವುದೇ ಸಮಸ್ಯೆ ಇಲ್ಲ. ಆದರೆ ದರ ಏರಿಕೆಯದ್ದೆ ಚಿಂತೆ ಎಂದು ಹೇಳುವ ಮೂಲಕ ಮುಂದಿನ ದಿನಗಳಲ್ಲಿ ನಂದಿನಿ ಉತ್ಪನ್ನಗಳ ಮೇಲೂ ದರ ಏರಿಕೆಯ ಸುಳಿವು ಕೊಟ್ಟಿದ್ದಾರೆ.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now
🏫 ಅಡ್ಮಿಷನ್ ಓಪನ್
🔒

ಇಂಡಿಯನ್ ಇಂಟರ್ ನ್ಯಾಷನಲ್ ಸ್ಕೂಲ್

ಸ್ವಾಗತ...