ದಾವಣಗೆರೆ: ದಕ್ಷಿಣ ಕ್ಚೇತ್ರದ ಉಪಚುನಾವಣೆಯ ಪ್ರಚಾರ ಕಾರ್ಯದಲ್ಲಿ ಬಿವೈ ವಿಜಯೇಂದ್ರ ಅವರು ಭಾಗಿಯಾಗಿದ್ದು, ಈ ವೇಳೆ ಕಾಂಗ್ರೆಸ್ ಅಭ್ಯರ್ಥಿಯ ಕುಟುಂಬದ ನಡೆ ಬಗ್ಗೆ ಆಕ್ರೋಶ ಹೊರ ಹಾಕಿದ್ದಾರೆ. ದಾವಣಗೆರೆಯಲ್ಲಿ ಭಾಷಣ ಮಾಡುತ್ತಾ, ನಾವು ಇವತ್ತು ಯಾರನ್ನ ಅಭ್ಯರ್ಥಿಯನ್ನಾಗಿ ಮಾಡಿದ್ದೇವೆ. ಒಬ್ಬ ಸಾಮಾನ್ಯರಲ್ಲಿ ಸಾಮಾನ್ಯರಾದ, ಬಡ ಕುಟುಂಬದಿಂದ ಬಂದಂತ ಶ್ರೀನಿವಾಸ್ ದಾಸರಿಕರಿಯಪ್ಪ ಅವರನ್ನ ಮಾಡಿದ್ದೇವೆ.
ನಮ್ಮ ಜನ ಇಂದು ಏನು ಯೋಚನೆ ಮಾಡಬೇಕು ಅಂದ್ರೆ, ನಾವೀವತ್ತು ಗೆಲ್ಲಿಸುವ ಶಾಸಕರು, ನಮಗೆ ಸಮಸ್ಯೆ ಅಂತ ಬಂದಾಗ ಮನೆ ಬಳಿ ಹೋದಾಗ, ಗೇಟ್ ಹಾಕಿಕೊಂಡು ಮನೆಯವ ಹೊರಗೆ ನಿಲ್ಲಿಸುವ ಶಾಸಕರು ಬೇಡ. ನಮಗೆ ಸಮಸ್ಯೆ ಬಂದಾಗ, ದಾವಣಗೆರೆಯ ದಕ್ಷಿಣ ಕ್ಷೇತ್ರ ಅಭಿವೃದ್ಧಿ ಆಗಬೇಕು ಅಂತಾದ್ರೆ, ನೇಕಾರರ ಅಭಿವೃದ್ಧಿ ಆಗಬೇಕು ಅಂತಾದ್ರೆ,ಈ ಉಪಚುನಾವಣೆಯಲ್ಲಿ ಗೆಲ್ಲುವ ಶಾಸಕರು ನನ್ನ ಬಡವರ ಮನೆ ಬಾಗಿಲಿಗೆ ಬರಬೇಕು. ಅಂಥ ವ್ಯಕ್ತಿ ಗೆದ್ದರೆ ದಾವಣಗೆರೆ ದಕ್ಷಿಣ ಕ್ಷೇತ್ರಕ್ಕೂ ಒಳ್ಳೆಯದ್ದೇ ಆಗುತ್ತೆ.
ನಾನು ಯಾರ ಮೇಲೂ ದ್ವೇಷ ಸಾಧಿಸುವುದಕ್ಕೆ ಬಂದಿಲ್ಲ. ಕಾಂಗ್ರೆಸ್ ನವರ ಕುಟುಂಬವಾಗಿದೆ. ಆ ಕುಟುಂಬದಲ್ಲಿ ಸಚಿವರಿದ್ದಾರೆ, ಸಂಸದರಿದ್ದಾರೆ, ಇನ್ನು ಎಷ್ಟು ಬೇಕು ಸ್ವಾಮಿ ಹಾಗಾದ್ರೆ. ಸಚಿವರಿದ್ದರು, ಸಂಸದರಿದ್ದರು ದಾವಣಗೆರೆ ದಕ್ಷಿಣ ಕ್ಷೇತ್ರದ ಸಮಸ್ಯೆಗೆ ಪರಿಹಾರ ಕೊಡುವುದಕ್ಕೆ ಸಾಧ್ಯ ಆಯ್ತಾ. ಈ ಕ್ಷೇತ್ರದ ಸಮಸ್ಯೆಯನ್ನ ಬಗೆಹರಿಸಿದ್ದಾರಾ ಎಂದು ಕಾಂಗ್ರೆಸ್ ಅಭ್ಯರ್ಥಿಯ ಮನೆಯಲ್ಲಿರುವ ಸಚಿವರು, ಸಂಸದರಿಗೆ ವಿಜಯೇಂದ್ರ ಅವರು ಪ್ರಶ್ನೆ ಮಾಡಿದ್ದಾರೆ. ಇಂದು ತಮ್ಮ ಬಿಜೆಪಿ ಅಭ್ಯರ್ಥಿ ಪರ ಬಿ ವೈ ವಿಜಯೇಂದ್ರ ಅವರು ಮತಯಾಚನೆಗೆ ದಾವಣಗೆರೆಗೆ ಹೋಗಿದ್ದರು.

ಸಾರ್ವಜನಿಕ ಕುಂದುಕೊರತೆ ವಿಭಾಗ : ನಿಮ್ಮ ಧ್ವನಿ - ನಮ್ಮ ವೇದಿಕೆ
ನಿಮ್ಮ ಊರಿನ ಸಮಸ್ಯೆಗಳು ಇನ್ನು ಮುಂದೆ ಕೇವಲ ಚರ್ಚೆಯಾಗಬಾರದು, ಅವುಗಳಿಗೆ ಪರಿಹಾರ ಸಿಗಬೇಕು.
ವರದಿ ಮಾಡುವುದು ಹೇಗೆ?
- ನಿಮ್ಮ ಸುತ್ತಮುತ್ತಲಿನ ರಸ್ತೆ, ನೀರು, ವಿದ್ಯುತ್ ಸಮಸ್ಯೆಗಳ ಫೋಟೋ, ವಿಡಿಯೋ ಅಥವಾ ಮಾಹಿತಿ ನಮಗೆ ಕಳುಹಿಸಿ.
ನಾವು ಏನು ಮಾಡುತ್ತೇವೆ?
- ನೀವು ಕಳುಹಿಸಿದ ವರದಿಗಳನ್ನು suddione.com ನಲ್ಲಿ ಪ್ರಕಟಿಸುತ್ತೇವೆ.
- ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದು ಪರಿಹಾರಕ್ಕಾಗಿ ಒತ್ತಾಯಿಸುತ್ತೇವೆ.
- ನಿಮ್ಮೂರಿನ ಅಭಿವೃದ್ಧಿಗೆ ನಿಮ್ಮೊಂದಿಗೆ ಧ್ವನಿಗೂಡಿಸುತ್ತೇವೆ.









