Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ಮನೆಗೆ ಹೋದ ಮುಸ್ಲಿಮರಿಗೆ ಅವಮಾನ ಮಾಡಿದ್ರು ಮಲ್ಲಿಕಾರ್ಜುನ್ : ಇಬ್ರಾಹಿಂ ಗಂಭೀರ ಆರೋಪ

---Advertisement---

ದಾವಣಗೆರೆ: ಜಿಲ್ಲೆಯಲ್ಲಿ ಉಪಚುನಾವಣೆಯ ಅಬ್ಬರ ಜೋರಾಗಿದೆ. ಮೊದಲೇ ಕಾಂಗ್ರೆಸ್ ನಿಂದ ಟಿಕೆಟ್ ಸಿಕ್ಕಿಲ್ಲ ಅಂತ ಮುಸ್ಲಿಮರು ರೊಚ್ಚಿಗೆದ್ದಿದ್ದಾರೆ. ಹೀಗಿರುವಾಗ ಎಸ್ ಎಸ್ ಮಲ್ಲಿಕಾರ್ಜುನ ವಿರುದ್ಧ ಸಿ.ಎಂ.ಇಬ್ರಾಹಿಂ ಗಂಭೀರ ಆರೋಪ ಮಾಡಿದ್ದಾರೆ. ನಾವೂ ಇವತ್ತು ದಾವಣಗೆರೆಯಲ್ಲಿ ಎಲ್ಲಾ ಸಮಾಜದ ಸಹಕಾರ ತೆಗೆದುಕೊಂಡು, ಹಿಂದುಳಿದವರು, ದಲಿತರು, ರೈತ ಸಂಘದವರು ಸೇರಿ ಎಲ್ಲರ ಸಹಕಾರ ತೆಗೆದುಕೊಂಡು ಯುವಕ ಆದಿಲ್ ಪಾಷಾನ ಗೆಲ್ಲಿಸಬೇಕು ಎಂದಿದ್ದಾರೆ.

ಆದಿಲ್ ಪಾಷಾಗೆ ಇನ್ನು 32 ವರ್ಷ. ಅನುಭವವೂ ಇದೆ. ತಂದೆಯೂ ಕೂಡ ರಾಜಕಾರಣದಲ್ಲಿ, ಶಿವಶಂಕರಪ್ಪ ಅವರನ್ನ ಗೆಲ್ಲಿಸಿದವರು. ಮೂರು ಎಲೆಕ್ಷನ್ ನಲ್ಲಿ ನಾನೇ ಬಂದಿದ್ದೆ. ನಮ್ಮ ವೋಟ್ ತೆಗೆದುಕೊಳ್ಳೋರು ಎಂಎಲ್ಎ ಆಗೋರು. ಈ ಸಲ ಅವರು ದೊಡ್ಡ ಮನಸ್ಸು ಮಾಡಿ, ಬೇಡ ತಗೊಳಿ, ಬಿಟ್ಟು ಕೊಡ್ತೀವಿ. ನೀವೂ ಯಾರಿಗಾದ್ರೂ ಕೊಡಿ ಅಂತ ಹೇಳೋದನ್ನ ಬಿಟ್ಟು, ಅವರ ಮನೆಗೆ ಹೋದಾಗ ಮುಸ್ಲಿಂ ಸಮಾಜದ ಮುಖಂಡರನ್ನ ಅವಮಾನ ಮಾಡಿ ಕಳುಹಿಸಿದ್ದಾರೆ. ಮುಸ್ಲಿಂ ಸಮುದಾಯದ ಗುರುಗಳನ್ನು ಅವಮಾನ ಮಾಡಿ ಕಳುಹಿಸಿದ್ದಾರೆ.

ಬಿಜೆಪಿ – ಕಾಂಗ್ರೆಸ್ ಹಂಚಿಕೊಂಡಿದೆ. ಐದು ವರ್ಷ ನೀವೂ ಐದು ವರ್ಷ ನಾವೂ ಅಂತ. ಎರಡು ಭ್ರಷ್ಟಾಚಾರ. ಇಬ್ಬರ ವಿರುದ್ಧ ಎದ್ದು ನಿಂತಿದ್ದೀವಿ. ನಮ್ಮತ್ರ ದುಡ್ಡಿಲ್ಲ, ಕಾಸಿಲ್ಲ ನಾವೆಲ್ಲಾ ಹೋರಾಟದಿಂದ ಬಂದಂತವರು. ದಾವಣಗೆರೆಯಲ್ಲಿ ಕಳೆದ 40 ವರ್ಷದಿಂದ ಒಂದೇ ಮನೆಯವರು, ಅದರಲ್ಲೂ 86 ಸಾವಿರ ಮುಸಲ್ಮಾನರು ಇರುವಂತ ಜಾಗದಲ್ಲಿ, ಮುಸ್ಲಿಮರ ಹೋಗಿ ಬೇಡಿಕೊಂಡರು, ಸಿಎಂ ಹತ್ರ ಒಂದೇ ಕುಟುಂಬಕ್ಕೆ ಕೊಟ್ಟಿದ್ದೀರಿ. ಇನ್ನು 22 ವರ್ಷ ಆಗಿಲ್ಲ. ಅವ್ನಿಗೆ ಎಷ್ಟು ವರ್ಷ ಇದೆ ಅಂತ ಗೊತ್ತಿಲ್ಲ. ಅವನನ್ನ ಕರ್ಕೊಂಡ್ ಬಂದು ನಿಲ್ಲಿಸ್ತೀರಿ ಅಂದ್ರೆ ಇದು ಪ್ರಜಾ ಪ್ರಭುತ್ವನಾ..? ಅಲ್ಪಸಂಖ್ಯಾತರಿಗೆ ಕೇಳುವ ಹಕ್ಕಿಲ್ವಾ ಎಂದು ಪ್ರಶ್ನಿಸಿದ್ದಾರೆ.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now
🏫 ಅಡ್ಮಿಷನ್ ಓಪನ್
🔒

ಇಂಡಿಯನ್ ಇಂಟರ್ ನ್ಯಾಷನಲ್ ಸ್ಕೂಲ್

ಸ್ವಾಗತ...