ದಾವಣಗೆರೆ : ಉಪಚುನಾವಣೆಯ ಕಣ ಸ್ವಲ್ಪ ಜೋರಾಗಿಯೇ ಇದೆ. ರಣ ರಣ ಬಿಸಿಲಿನಲ್ಲೂ ಪ್ರಚಾರದ ಭರಾಟೆ ಜೋರಾಗಿ ನಡೀತಾ ಇದೆ. ಈ ಬಾರಿ ಶಾಮನೂರು ಶಿವಶಂಕರಪ್ಪ ಅವರ ಮೊಮ್ಮಗ ಚುನಾವಣೆಯ ಅಖಾಡಕ್ಕೆ ಬಂದು ನಿಂತಿದ್ದಾರೆ. ಆದರೆ ಸಮರ್ಥ್ ಗೆ ತಮ್ಮ ಪಕ್ಷದವರೇ ಸ್ಪರ್ಧೆ ಕೊಡ್ತಾರೆ ಅನ್ನೋದು ಮಾತ್ರ ತಿಳಿದಿರಲಿಲ್ಲ. ಮುಸ್ಲಿಂ ಬಾಂಧವರು ಬಂಡಾಯವೆದ್ದಿದ್ದು, ಈಗ ಗೆಲ್ಲಲೇಬೇಕಾದ ಅನಿವಾರ್ಯತೆಯ ಓಟ ಶುರುವಾಗಿದೆ. ಆದರೆ ಚುನಾವಣೆಯ ಸ್ಪರ್ಧೆಯ ಕಣದಲ್ಲಿ ಸಾಕಷ್ಟು ಮುಸ್ಲಿಮರು ಕೂಡ ಇದ್ರು. ಇದೀಗ ಒಂದಷ್ಟು ಜನ ನಾಮಪತ್ರ ವಾಪಾಸ್ ಪಡೆದುಕೊಂಡಿದ್ದಾರೆ.
ಈ ಸಂಬಂಧ ಚುನಾವಣಾ ಅಧಿಕಾರಿ ಸಂತೋಷ್ ಮಾಹಿತಿಯನ್ನು ನೀಡಿದ್ದು, ಸದ್ಯ ಚುನಾವಣಾ ಕಣದಲ್ಲಿ 25 ಜನ ಫೈನಲ್ ಅಭ್ಯರ್ಥಿಗಳಾಗಿದ್ದಾರೆ. 45 ನಾಮಪತ್ರಗಳು ಸಲ್ಲಿಕೆಯಾಗಿದ್ದವು. ಅದರಲ್ಲಿ 3 ರಿಜೆಕ್ಟ್ ಆಗಿವೆ, 11 ಅಭ್ಯರ್ಥಿಗಳು ನಾಮಪತ್ರವನ್ನು ವಾಪಾಸ್ ಪಡೆದಿದ್ದಾರೆ. ಒಬ್ಬ ಮಹಿಳಾ ಅಭ್ಯರ್ಥಿ ಸೇರಿದಂತೆ 25 ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಇದರ ನಡುವೆ ಸಾಧಿಕ್ ನಾಮಪತ್ರ ವಾಪಾಸ್ ಪಡೆಯುವುದಕ್ಕೆ ಒಂದು ಫೋರ್ಜರಿ ಆರೋಪ ಕೂಡ ಕೇಳಿ ಬಂದಿತ್ತು. ಅದಕ್ಕುಹ ಕೂಡ ಚುನಾವಣಾ ಅಧಿಕಾರಿಗಳು ಇಲ್ಲಿ ಉತ್ತರವನ್ನು ನೀಡಿದ್ದಾರೆ.

ನ್ಯಾಷನಲ್ ಪಾರ್ಟಿಯಿಂದ 3 ಜನ, ಬಿಜೆಪಿಯಿಂದ 1, ಕಾಂಗ್ರೆಸ್ ನಿಂದ 1, ಆಮ್ ಆದ್ಮಿ ಪಾರ್ಟಿಯಿಂದ 1, ಸ್ವತಂತ್ರವಾಗಿ 12, ಇನ್ನುಳಿದಂತೆ 10 ಜನ ಸೇರಿದಂತೆ ಒಟ್ಟು 25 ಜನ ಇದ್ದಾರೆ. ಅರ್ಜಿಯಲ್ಲಿ ಫೇಕ್ ಆಗಿ ಸಹಿ ಮಾಡಿದರೆ ಅದನ್ನ ಪರಿಶೀಲನೆ ಮಾಡ್ತೀವಿ. ಪ್ರಪೋಸಲ್ ಅಷ್ಟೆ ಕೊಟ್ಟಿದ್ದರು, ಬೇರೆ ಬಂದಿಲ್ಲ ಎಂಬ ಮಾಹಿತಿಯನ್ನ ನೀಡಿದ್ದಾರೆ.



















