ದಾವಣಗೆರೆ, ಮಾರ್ಚ್ 26. : 107 ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಚುನಾವಣೆಗೆ ಸಂಬಂಧಿಸಿದಂತೆ, ವಿವಿಧ ಪಕ್ಷ ಹಾಗೂ ಪಕ್ಷೇತರರಾಗಿ ಸ್ಪರ್ಧಿಸಿದ್ದ ಒಟ್ಟು 11 ಅಭ್ಯರ್ಥಿಗಳು ಗುರುವಾರ ತಮ್ಮ ಉಮೇದುವಾರಿಕೆಯನ್ನು ಅಧಿಕೃತವಾಗಿ ಹಿಂತೆಗೆದುಕೊಂಡಿದ್ದಾರೆ ಎಂದು ಚುನಾವಣಾಧಿಕಾರಿ ಸಂತೋಷ್ ಕುಮಾರ್ ಅವರು ತಿಳಿಸಿದ್ದಾರೆ.

ಚುನಾವಣಾ ನಿಯಮ 9 (2)ರ ಅನ್ವಯ ನಮೂನೆ-6 ರಲ್ಲಿ ಉಮೇದುವಾರಿಕೆ ಹಿಂಪಡೆದ ಅಭ್ಯರ್ಥಿಗಳ ವಿವರ:
• ಆನಂದಪ್ಪ ಎಸ್.ಎಲ್: ಎಸ್.ಎಸ್.ಬಡಾವಣೆ, ಬಿ ಬ್ಲಾಕ್, ದಾವಣಗೆರೆ.
• ಸುಭಾನ್ ಖಾನ್: ಕೆ.ಟಿ.ಜೆ ನಗರ, ದಾವಣಗೆರೆ.
• ಹೆಚ್. ಪರವೇಜ್: ಕೊಂಡಜ್ಜಿ ರಸ್ತೆ, ಬಿ.ಜೆ.ಎಂ ಶಾಲೆಯ ಹತ್ತಿರ, ದಾವಣಗೆರೆ.
• ಅಲ್ಲಾಭಕ್ಷ ಬಿ: ವಿಜಯನಗರ ಬಡಾವಣೆ, ದಾವಣಗೆರೆ.
• ಅಮ್ಮಿರಾ ಅಹಮ್ಮದ್ ಖಾನ್: ಹೊಸಕೆರೆ, ಬಸವಪಟ್ಟಣ, ಚನ್ನಗಿರಿ ತಾಲ್ಲೂಕು.
• ಇಸ್ಮಾಯಿಲ್ ಜಬೀವುಲ್ಲಾ: ದೇವರಾಜ್ ಲೇಔಟ್, ದಾವಣಗೆರೆ.
• ಎಸ್.ಕೆ. ಅಫೈಲ್ ಖಾನ್: ದೇವರಾಜ್ ಅರಸ್ ಬಡಾವಣೆ, ಸಿ ಬ್ಲಾಕ್, ದಾವಣಗೆರೆ.
• ಎಸ್.ಸಿ. ತ್ರಿಮೂರ್ತಿ: ಬಿ ಕಲಪನಹಳ್ಳಿ, ದಾವಣಗೆರೆ.
• ಮಹಮ್ಮದ್ ಜಬೀವುಲ್ಲಾ: ಆಜಾದ್ ನಗರ, ದಾವಣಗೆರೆ.
• ಸೈಯದ್ ಜಬೀವುಲ್ಲಾ: ಆಜಾದ್ ನಗರ, ದಾವಣಗೆರೆ.
• ಡಿ. ಹನುಮಂತಪ್ಪ: ಹರಿಹರ, ದಾವಣಗೆರೆ ಜಿಲ್ಲೆ.



















