ವಿಶೇಷ ಲೇಖನ :
ಡಾ.ಕೆ.ವಿ. ಸಂತೋಷ್
ಹೊಳಲ್ಕೆರೆ
ಚಿತ್ರದುರ್ಗ ಜಿಲ್ಲೆ.
ಮೊ : 93424 66936
ದಾವಣಗೆರೆ ಜಿಲ್ಲೆ ಚನ್ನಗಿರಿ ತಾಲೂಕು ಸಂತೇಬೆನ್ನೂರು ಗ್ರಾಮದಲ್ಲಿರುವ ಐತಿಹಾಸಿಕ ಪ್ರಸಿದ್ಧವಾದ ಕಾರಂಜಿಹೊಂಡ ಅಥವಾ ಪುಷ್ಕರಣಿಯು ದಾವಣಗೆರೆ ಜಿಲ್ಲೆಯ ಪ್ರವಾಸೋದ್ಯಮ ಇಲಾಖೆಯ ಮೊದಲ 10 ಪ್ರಮುಖ ನೋಡಲೇಬೇಕಾದ ಸ್ಥಳಗಳಲ್ಲಿ ಇದು ಒಂದಾಗಿದ್ದು ದಾವಣಗೆರೆ ಜಿಲ್ಲೆಯ ಸಿಗ್ನೇಚರ್ ಐಕಾನ್ ಆಗಿ ಈ ಪುಷ್ಕರಣಿಯನ್ನು ಗುರುತಿಸಲಾಗುತ್ತದೆ.
ಗ್ರಾಮದ ಮಧ್ಯಭಾಗದಲ್ಲಿ ದಾವಣಗೆರೆ – ಚನ್ನಗಿರಿ ಹೆದ್ದಾರಿಯಲ್ಲಿರುವ ಈ ಪುಷ್ಕರಣಿಯು ಅತ್ಯಂತ ನಯನ ಮನೋಹರ ಹಾಗೂ ಸುಂದರ ವಾಸ್ತುಶಿಲ್ಪದಿಂದ ಕಂಗೊಳಿಸುತ್ತದೆ. 1558 ರಲ್ಲಿ( 16 ನೇ ಶತಮಾನ) ವಿಜಯನಗರೋತ್ತರ ಶೈಲಿಯಲ್ಲಿ ನಿರ್ಮಿಸಲಾದ ಈ ಪುಷ್ಕರಣಿಯನ್ನು ಹಿಂದೆ ಇಲ್ಲಿ ಆಳ್ವಿಕೆ ಮಾಡಿದ್ದ ಸ್ಥಳೀಯ ಪಾಳೆಯಗಾರನಾದ ಕೆಂಗ ಹನುಮಪ್ಪ ನಾಯಕನು ನಿರ್ಮಿಸಿ ಈ ಹೊಂಡದ ಎದುರು ಭಾಗದಲ್ಲಿ ಶ್ರೀರಾಮಚಂದ್ರನ ದೇವಾಲಯವನ್ನು ಕಟ್ಟಿಸಿ,ಈ ಹೊಂಡಕ್ಕೆ ರಾಮ ತೀರ್ಥ ಎಂದು ಹೆಸರಿಸಿದನು.
ಇಂಡೋ- ಇಸ್ಲಾಮಿಕ್ ಲಕ್ಷಣಗಳನ್ನು ಹೊಂದಿರುವ ಈ ಪುಷ್ಕರಣೆಯು ಭಾರತೀಯ ಪುರಾತತ್ವ ಸಂರಕ್ಷಣಾ asi ಇಲಾಖೆಯವರ ಸುಪರ್ದಿ ನಲ್ಲಿದೆ.
ಈ ಪುಷ್ಕರಣಿಯು 235 ಅಡಿ ಉದ್ದ ಹಾಗೂ ಇನ್ನೂ 245 ಅಡಿ ಅಗಲವಿದ್ದು 30 ಅಡಿ ಆಳವಿದೆ. 4 ಕಡೆಗೂ ಮೆಟ್ಟಿಲುಗಳು ಹಾಗೂ ಎರಡು ದಿಕ್ಕಿಗೂ ಮಂಟಪಗಳನ್ನು ಹೊಂದಿವೆ. ಒಟ್ಟು ಎಂಟು ಮಂಟಪದಲ್ಲಿದ್ದು ಅದರಲ್ಲಿ ಈಗ ಆರು ಮಾತ್ರ ಉಳಿದಿದ್ದು ಎರಡು ಮಂಟಪಗಳು ನಾಶವಾಗಿವೆ.
ಈ ಸ್ಮಾರಕದ ಮುಖ್ಯ ಆಕರ್ಷಣೆ ಎಂದರೆ ಈ ಪುಷ್ಕರಣೆ ಮಧ್ಯದಲ್ಲಿರುವ ಮಂಟಪ.ಇದನ್ನು ವಸಂತ ಮಂಟಪವೆಂದು ಕರೆಯಲಾಗುತ್ತದೆ. ಇದು ಐವತ್ತು ಅಡಿಗಳಷ್ಟು ಎತ್ತರವಾಗಿದೆ. ಗಾರೆ ಚುರುಕಿ ಗಳಿಂದ ನಿರ್ಮಿಸಲಾದ ಈ ಮಂಟಪದ ಮೇಲ್ಭಾಗದಿಂದ ಹಿಂದೆ ನೀರಿನ ಒತ್ತಡ ಸಹಜವಾಗಿ ಏರಿ ಕಾರಂಜಿಯಂತೆ ಚಿಮ್ಮುತ್ತಿತ್ತು ಎನ್ನಲಾಗುತ್ತದೆ. ಆದ್ದರಿಂದ ಇದನ್ನು ಕಾರಂಜಿ ಹೊಂಡ ಎಂದು ಕೂಡ ಕರೆಯಲಾಗುತ್ತಿತ್ತು ಎನ್ನಲಾಗುತ್ತದೆ. ಜೊತೆಗೆ ಈ ಮಂಟಪವು ಮೆಟ್ಟಿಲುಗಳ ಮೇಲಿನಿಂದ ನಿಂತು ನೋಡಿದಾಗ ನೀರಿನ ಮೇಲೆ ತೇಲುವಂತೆ ಕಂಡುಬರುವ ಒಂದು ವಾಸ್ತು ಶೈಲಿ ಗಮನಿಸಬಹುದು.
(ಇಂದು ವಸಂತ ಮಂಟಪದಿಂದ ನೀರು ಕಾರಂಜಿಯಂತೆ ಬರುವುದಿಲ್ಲ.)
ಅದನ್ನು ಮತ್ತಷ್ಟು ವಿಶ್ಲೇಷಿಸುವ ಹಾಗೂ ವಿಮರ್ಷಿಸುವ ಪರೀಕ್ಷಿಸುವ ಅಗತ್ಯವಿದೆ.

ಹೊಂಡಾದ ಸುತ್ತಲೂ ಗ್ರಾನೆಟ್ ಕಲ್ಲುಗಳನ್ನು ಬಳಸಿ ಮೆಟ್ಟಿಲುಗಳು ಹಾಗೂ ಅವರ ಮೇಲ್ಮೈ ಗೋಡೆಗಳನ್ನು ಹಾಗೂ ಮಂಟಪಗಳನ್ನು ನಿರ್ಮಿಸಲಾಗಿದೆ.
ಮಂಟಪದ ಕಂಬಗಳು ವಿಜಯನಗರ ಶೈಲಿಯನ್ನು ಹೊಂದಿದ್ದು ಆಕರ್ಷಕ ಕೆತ್ತನೆಗಳನ್ನು,ನೂರಾರು ದೇವತೆಗಳ ಉಬ್ಬು ಶಿಲ್ಪಗಳನ್ನು ಕಾಣಬಹುದು.
ಹಿಂದೆ ಈ ಹೊಂಡವನ್ನು ಉತ್ಸವ ಆಚರಣೆಗಳಿಗೆ ಹಾಗೂ ನೀರಿನ ಅವಶ್ಯಕತೆ ಗಳಿಗೆ ಬಳಸಲಾಗುತ್ತಿತ್ತು. 4 ದಿಕ್ಕುಗಳಿಂದಲೂ ಈ ಹೊಂಡಕ್ಕೆ ಇಳಿಯಲು ಮೆಟ್ಟಿಲುಗಳಿವೆ. ಪ್ರಮುಖ ಮುಖ್ಯ ಪ್ರವೇಶ ದ್ವಾರದಿಂದ 52 ದೊಡ್ಡ ಮೆಟ್ಟಿಲು ಹಾಗೂ ಉಳಿದ ಮೂರು ಭಾಗಗಳಲ್ಲಿ 44 ಮೆಟ್ಟಿಲುಗಳಿವೆ.
ಇದರ ಎದುರು ಭಾಗದಲ್ಲಿ ಮುಸಾಫೀರ್ ಖಾನಾ (ಪ್ರವಾಸಿಗರ ತಂಗುದಾಣ = ಪ್ರವಾಸಿ ಮಂದಿರ) ಎಂಬ ಕಟ್ಟಡವಿದ್ದು ಇದನ್ನು ಹಿಂದೆ ದೆಹಲಿಯ ದಂಡನಾಯಕನಾಗಿದ್ದ ರಣದುಲ್ಲ ಖಾನ್ ಇಲ್ಲಿದ್ದ ಶ್ರೀ ರಾಮನ ದೇವಾಲಯವನ್ನು ಕೆಡವಿ ಇದನ್ನು ನಿರ್ಮಿಸಿದ್ದಾನೆ.
ಪ್ರವಾಸಿತಾಣ :
ವರ್ಷದ ಎಲ್ಲಾ ಸಮಯದಲ್ಲೂ ಇಲ್ಲಿಗೆ ಭೇಟಿ ನೀಡಬಹುದು, ಬೆಳಿಗ್ಗೆ ಏಳರಿಂದ ಸಂಜೆ 5:30 ಗಂಟೆವರೆಗೆ ಈ ಸ್ಥಳವು ಸಾರ್ವಜನಿಕರಿಗೆ ಮುಕ್ತ ಪ್ರವೇಶವಿರುತ್ತದೆ. ಪುನೀತ್ ರಾಜಕುಮಾರ್,ಗೋಲ್ಡನ್ ಸ್ಟಾರ್ ಗಣೇಶ್, ರಮ್ಯಾ ರವರ ಹತ್ತಾರು ಚಲನಚಿತ್ರಗಳು ಇಲ್ಲಿ ಚಿತ್ರೀಕರಣಗೊಂಡಿವೆ. ಸದಾ ಕಾಲ ಇಲ್ಲಿ ನವ ವಧು -ವರರ ಪ್ರೀವಿಡ್ಡಿಂಗ್ ಶೂಟಿಂಗ್ ಕೂಡ ಜರುಗುತ್ತದೆ. ಅದಕ್ಕಾಗಿ ಇಲಾಖೆಯ ಅನುಮತಿ ಕಡ್ಡಾಯವಾಗಿರುತ್ತದೆ.
ಹತ್ತಿರದಲ್ಲಿಯೇ ಹತ್ತಾರು ಹೋಟೆಲುಗಳಿದ್ದು ತಿಂಡಿ ಊಟಕ್ಕೆ ಯಾವುದೇ ಸಮಸ್ಯೆ ಇಲ್ಲ.
ಸಾರ್ವಜನಿಕ ಕುಂದುಕೊರತೆ ವಿಭಾಗ : ನಿಮ್ಮ ಧ್ವನಿ - ನಮ್ಮ ವೇದಿಕೆ
ನಿಮ್ಮ ಊರಿನ ಸಮಸ್ಯೆಗಳು ಇನ್ನು ಮುಂದೆ ಕೇವಲ ಚರ್ಚೆಯಾಗಬಾರದು, ಅವುಗಳಿಗೆ ಪರಿಹಾರ ಸಿಗಬೇಕು.
ವರದಿ ಮಾಡುವುದು ಹೇಗೆ?
- ನಿಮ್ಮ ಸುತ್ತಮುತ್ತಲಿನ ರಸ್ತೆ, ನೀರು, ವಿದ್ಯುತ್ ಸಮಸ್ಯೆಗಳ ಫೋಟೋ, ವಿಡಿಯೋ ಅಥವಾ ಮಾಹಿತಿ ನಮಗೆ ಕಳುಹಿಸಿ.
ನಾವು ಏನು ಮಾಡುತ್ತೇವೆ?
- ನೀವು ಕಳುಹಿಸಿದ ವರದಿಗಳನ್ನು suddione.com ನಲ್ಲಿ ಪ್ರಕಟಿಸುತ್ತೇವೆ.
- ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದು ಪರಿಹಾರಕ್ಕಾಗಿ ಒತ್ತಾಯಿಸುತ್ತೇವೆ.
- ನಿಮ್ಮೂರಿನ ಅಭಿವೃದ್ಧಿಗೆ ನಿಮ್ಮೊಂದಿಗೆ ಧ್ವನಿಗೂಡಿಸುತ್ತೇವೆ.




















