ಬೆಂಗಳೂರು : ದಾವಣಗೆರೆ ದಕ್ಷಿಣ ಕ್ಷೇತ್ರದ ಉಪಚುನಾವಣೆಯ ಟಿಕೆಟ್ ಅನ್ನು ಈ ಬಾರಿ ಶಾಮನೂರು ಕುಟುಂಬವೇ ಪಡೆದುಕೊಂಡಿದೆ. ಸಮರ್ಥ್ ಶಾಮನೂರಿಗೆ ಟಿಕೆಟ್ ಘೋಷಣೆಯಾಗಿದ್ದು, ಎಸ್ ಎಸ್ ಮಲ್ಲಿಕಾರ್ಜುನ ಅವರು ಈ ಸಂಬಂಧ ಪ್ರತಿಕ್ರಿಯೆ ನೀಡಿದ್ದಾರೆ.
ಕಳೆದ ಎರಡು ದಿನಗಳಿಂದ ಸಭೆ ಮಾಡಿ, ಎಲ್ಲರ ಮನಸ್ಸು ಗೆದ್ದು, ಒಗ್ಗಟ್ಟಾಗಿ ನಿಂತು ಬಾಗಲಕೋಟೆ ಹಾಗೂ ದಾವಣಗೆರೆ ಅಭ್ಯರ್ಥಿಯನ್ನ ಗೆಲ್ಲಿಸಲೇಬೇಕೆಂದು ಅಭ್ಯರ್ಥಿಗಳ ಘೋಷಣೆ ಮಾಡಿದ್ದಾರೆ. ಇದಕ್ಕೆ ಕೆಪಿಸಿಸಿ ಹಾಗೂ ಎಐಸಿಸಿಗೆ ನಾನು ಧನ್ಯವಾದ ಹೇಳ್ತೇನೆ. ಹಾಗೇ ಎಲ್ಲರೂ ಒಗ್ಗಟ್ಟಾಗಿ ನಿಂತು ಕೆಲಸ ಮಾಡೋಣಾ ಎಂದಿದ್ದಾರೆ.
ಇದೇ ವೇಳೆ ನಿಮ್ಮ ಮಗನಿಗೆ ಟಿಕೆಟ್ ನೀಡಿದ್ದಕ್ಕೆ ಅಲ್ಪಸಂಖ್ಯಾತರಿಗೆ ಬೇಸರವಿಲ್ಲವಾ ಎಂಬ ಪ್ರಶ್ನೆಗೆ, ಹೈಕಮಾಂಡ್ ಎಲ್ಲಾ ನಾಯಕರ ಜೊತೆಗೆ ಕೂತು ಮಾತನ್ನಾಡಿದೆ. ನಮ್ಮ ನಾಯಕರ ಮನಸ್ಸಲ್ಲಿಂದ ಬೇಸರವನ್ನು ಬದಲಾಯಿಸಿ, ಎಲ್ಲರ ಒಪ್ಪಿಗೆ ಮೇರೆಗೆ ಇಂದು ನಮ್ಮ ಮಗನಿಗೆ ಟಕೆಟ್ ಘೋಷಣೆ ಮಾಡಿದೆ. ನಮ್ಮಲ್ಲಿ ಯಾವ ಗೊಂದಲವೂ ಇಲ್ಲ. ಸಮಾನ ಮನಸ್ಕರಂತೆ, ಅಣ್ಣ ತಮ್ಮಂದಿರಂತೆಯೇ ಇದ್ದೀವಿ. ಯಾವ ಮನಸ್ತಾಪವೂ ಇಲ್ಲ. ಇಂದಿನಿಂದಲೇ ಪ್ರಚಾರ ಕಾರ್ಯ ಶುರುವಾಗುತ್ತೆ. ಚುನಾವಣೆ ಅಂತ ಬಂದಾಗ ನಾನ್ ನಿಲ್ತೇನೆ ಅಂತ ಸುಮಾರು ಜನ ಹೇಳ್ತಾರೆ. ಅಂತಿಮವಾಗಿ ತೀರ್ಮಾನ ಮಾಡೋದು ಹೈಕಮಾಂಡ್ ಅಲ್ವಾ. ಅದರಲ್ಲೂ ನಾವೂ ಕಾಂಗ್ರೆಸ್ ಫ್ಯಾಮಿಲಿ ಅವರು ಸುಮಾರು 40 ವರ್ಷಗಳಿಂದಲೂ ನಮ್ಮ ತಂದೆಯವರು ಅದಕ್ಕಾಗಿ ದುಡಿದಿದ್ದಾರೆ. ಅದನ್ನ ಕಾಂಗ್ರೆಸ್ ಹೈಕಮಾಂಡ್ ಕೂಡ ಪರಿಗಣಿಸಿದೆ. ಜೊತೆಗೆ ಅಲ್ಪಸಂಖ್ಯಾತರಿಗೆ ಕೇಳುವ ಹಕ್ಕಿದೆ ಕೇಳಿದ್ದಾರೆ. ಎಲ್ಲರೂ ಒಗ್ಗಟ್ಟಾಗಿ ಚುನಾವಣೆಯನ್ನ ಎದುರಿಸುತ್ತೀವಿ ಎಂಬ ಮಾತನ್ನ ಎಸ್ ಎಸ್ ಮಲ್ಲಿಕಾರ್ಜುನ ಅವರು ಹೇಳಿದ್ದಾರೆ.
ಸಾರ್ವಜನಿಕ ಕುಂದುಕೊರತೆ ವಿಭಾಗ : ನಿಮ್ಮ ಧ್ವನಿ - ನಮ್ಮ ವೇದಿಕೆ
ನಿಮ್ಮ ಊರಿನ ಸಮಸ್ಯೆಗಳು ಇನ್ನು ಮುಂದೆ ಕೇವಲ ಚರ್ಚೆಯಾಗಬಾರದು, ಅವುಗಳಿಗೆ ಪರಿಹಾರ ಸಿಗಬೇಕು.
ವರದಿ ಮಾಡುವುದು ಹೇಗೆ?
- ನಿಮ್ಮ ಸುತ್ತಮುತ್ತಲಿನ ರಸ್ತೆ, ನೀರು, ವಿದ್ಯುತ್ ಸಮಸ್ಯೆಗಳ ಫೋಟೋ, ವಿಡಿಯೋ ಅಥವಾ ಮಾಹಿತಿ ನಮಗೆ ಕಳುಹಿಸಿ.
ನಾವು ಏನು ಮಾಡುತ್ತೇವೆ?
- ನೀವು ಕಳುಹಿಸಿದ ವರದಿಗಳನ್ನು suddione.com ನಲ್ಲಿ ಪ್ರಕಟಿಸುತ್ತೇವೆ.
- ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದು ಪರಿಹಾರಕ್ಕಾಗಿ ಒತ್ತಾಯಿಸುತ್ತೇವೆ.
- ನಿಮ್ಮೂರಿನ ಅಭಿವೃದ್ಧಿಗೆ ನಿಮ್ಮೊಂದಿಗೆ ಧ್ವನಿಗೂಡಿಸುತ್ತೇವೆ.











