ಬೆಂಗಳೂರು : ಇಂದು ನಾವೂ ಬರೋದಿಕ್ಕೆ ಕಾರಣ ಏನು ಅಂದ್ರೆ ಉಪಮುಖ್ಯಮಂತ್ರಿಗಳನ್ನು ಕೂಡಲೇ ಮುಖ್ಯಮಂತ್ರಿಗಳನ್ನಾಗಿ ಮಾಡಬೇಕು. ಸೋನಿಯಾ ಗಾಂಧಿ ಅವರು, ರಾಹುಲ್ ಗಾಂಧಿ ಅವರು ಸೇರಿ ಮಾತನ್ನಾಡಬೇಕು. ಈಗಾಗಲೇ ತುಂಬಾನೇ ಲೇಟ್ ಆಗಿದೆ. ಅವರು ಕಾಂಗ್ರೆಸ್ ಪಕ್ಷಕ್ಕಾಗಿ ಸಾಕಷ್ಟು ದುಡಿದಿದ್ದಾರೆ. ಅದಕ್ಕಾಗಿ ಕೂಲಿ ಕೊಡಬೇಕು ಎಂದು ಪ್ರಣವಾನಂದ ಸ್ವಾಮಿಗಳು ಡಿಕೆ ಶಿವಕುಮಾರ್ ಪರ ಬ್ಯಾಟ್ ಬೀಸಿದರು.
ಮೇ ತಿಂಗಳಲ್ಲಿ ಅರಮನೆ ಮೈದಾನದಲ್ಲಿ ಬೃಹತ್ ಮಠಾಧೀಶ್ವರ ಮಹಾಸಭೆ ವಿಚಾರವಾಗಿ ಈಡಿಗ ಸಮುದಾಯದ ಪ್ರಣಾವನಂದ ಸ್ವಾಮೀಜಿ ಡಿಸಿಎಂ ಡಿಕೆ ಶಿವಕುಮಾರ್ ಅವರನ್ನು ಸದಾಶಿವ ನಗರದ ನಿವಾಸದಲ್ಲಿ ಭೇಟಿಯಾಗಿದ್ದಾರೆ. ಬಳಿಕ ಮಾಧ್ಯಮದವರೊಂದಿಗೆ ಮಾತನ್ನಾಡಿ, ಬಜೆಟ್ ಬಗ್ಗೆಯೂ ಪ್ರಸ್ತಾಪ ಮಾಡಿದ್ದಾರೆ.
ಒಂದು ವೇಳೆ ಡಿಕೆ ಶಿವಕುಮಾರ್ ಅವರನ್ನು ಮುಖ್ಯಮಂತ್ರಿ ಮಾಡದೆ ಮುಂದುವರೆಸಿಕೊಂಡು ಹೋದರೆ, ಈಗ ಏನು ಹೇಳ್ತಾ ಇದ್ದಾರೆ ಪಂಚರಾಜ್ಯ ಚುನಾವಣೆ ಅಂತಿದ್ದಾರೆ. ಅದಕ್ಕೂ ಮುಂಚೆ ಯುಗಾದಿ ಅಂದಿದ್ರು. ಅದಕ್ಕೂ ಮುಂಚೆ ಮಕರ ಸಂಕ್ರಾಂತಿ ಅಂತೇಳಿದ್ರು. ಎಷ್ಟೊಂದು ದಿನ ಕಾಯಬೇಕಾಗುತ್ತೆ. ಅವರನ್ನ ಕೂಡಲೇ ಮುಖ್ಯಮಂತ್ರಿ ಮಾಡಬೇಕು ಎಂಬುದೇ ನಮ್ಮೆಲ್ಲರ ಒತ್ತಾಯ. ಅದರ ಜೊತೆಗೆ ಮೇ ತಿಂಗಳಲ್ಲಿ ಬೃಹತ್ ಸಮಾವೇಶ ಮಾಡ್ತಾ ಇದ್ದೀವಿ. ಮಠಾಧೀಶ್ವರ ಮಹಾಸಭೆಗೆ ಅವರು ಮೊದಲು ಬಂದಾಗ ಒಂದು ಭರವಸೆಯನ್ನ ನೀಡಿದ್ರು, ಎಲ್ಲಾ ಹಿಂದೂಳಿದ ಸಮುದಾಯದ ಸ್ವಾಮೀಜಿಗಳು ಕೂಡ ಬೆಂಗಳೂರಲ್ಲಿ ಉಳಿದುಕೊಳ್ಳುವುದಕ್ಕೆ ವ್ಯವಸ್ಥೆ ಮಾಡಿಕೊಡ್ತೀನಿ ಅಂದಿದ್ರು. ಇವಾಗ ಬರೋದಕ್ಕೂ ಒಂದು ಕಾರಣವಿದೆ. ಮೊನ್ನೆ ಬಜೆಟ್ ನಲ್ಲಿ ಯಾವ್ಯಾವ ಸ್ವಾಮೀಜಿಗಳು ಡಿಕೆ ಶಿವಕುಮಾರ್ ಅವರನ್ನು ಭೇಟಿಯಾಗಿ, ಮುಖ್ಯಮಂತ್ರಿ ಮಾಡಲು ಎಂದು ಹೇಳಿದ ಸ್ವಾಮೀಜಿಗಳ ಮಠಕ್ಕೆ ಒಂದು ರೂಪಾಯಿ ಕೂಡ ಕೊಟ್ಟಿಲ್ಲ ಎಂದು ಬೇಸರ ಹೊರ ಹಾಕಿದ್ದಾರೆ.

ಸಾರ್ವಜನಿಕ ಕುಂದುಕೊರತೆ ವಿಭಾಗ : ನಿಮ್ಮ ಧ್ವನಿ - ನಮ್ಮ ವೇದಿಕೆ
ನಿಮ್ಮ ಊರಿನ ಸಮಸ್ಯೆಗಳು ಇನ್ನು ಮುಂದೆ ಕೇವಲ ಚರ್ಚೆಯಾಗಬಾರದು, ಅವುಗಳಿಗೆ ಪರಿಹಾರ ಸಿಗಬೇಕು.
ವರದಿ ಮಾಡುವುದು ಹೇಗೆ?
- ನಿಮ್ಮ ಸುತ್ತಮುತ್ತಲಿನ ರಸ್ತೆ, ನೀರು, ವಿದ್ಯುತ್ ಸಮಸ್ಯೆಗಳ ಫೋಟೋ, ವಿಡಿಯೋ ಅಥವಾ ಮಾಹಿತಿ ನಮಗೆ ಕಳುಹಿಸಿ.
ನಾವು ಏನು ಮಾಡುತ್ತೇವೆ?
- ನೀವು ಕಳುಹಿಸಿದ ವರದಿಗಳನ್ನು suddione.com ನಲ್ಲಿ ಪ್ರಕಟಿಸುತ್ತೇವೆ.
- ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದು ಪರಿಹಾರಕ್ಕಾಗಿ ಒತ್ತಾಯಿಸುತ್ತೇವೆ.
- ನಿಮ್ಮೂರಿನ ಅಭಿವೃದ್ಧಿಗೆ ನಿಮ್ಮೊಂದಿಗೆ ಧ್ವನಿಗೂಡಿಸುತ್ತೇವೆ.










