Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ಟಿಕೆಟ್ ಅನೌನ್ಸ್ ಆಗದೆ ನಾಮಪತ್ರ ಸಲ್ಲಿಕೆ : ಪ್ರಭಾ ಮಲ್ಲಿಕಾರ್ಜುನ ಹೇಳಿದ್ದೇನು..?

---Advertisement---

ಸುದ್ದಿಒನ್, ದಾವಣಗೆರೆ,, ಮಾರ್ಚ್. 20 : ದಕ್ಷಿಣ ಕ್ಷೇತ್ರದ ಉಪಚುನಾವಣೆಗೆ ದಿನಾಂಕ ಘೋಷಣೆಯಾಗಿದ್ದು, ದಾವಣಗೆರೆಯಲ್ಲಿ ಶಾಮನೂರು ಶಿವಶಂಕರಪ್ಪ ಕುಟುಂಬ ವರ್ಸಸ್ ಅಲ್ಪಸಂಖ್ಯಾತರ ಬಳಗ ಅನ್ನೋ ಹಾಗಾಗಿದೆ. ಕಾಂಗ್ರೆಸ್ ಹೈಕಮಾಂಡ್ ಗೂ ಇದು ದೊಡ್ಡ ತಲೆ ನೋವೇ. ಯಾರಿಗೆ ಟಿಕೆಟ್ ಘೋಷಣೆ ಮಾಡಬಹುದು ಎಂಬ ಪ್ರಶ್ನೆಯ ನಡುವೆಯೇ ಶಾಮನೂರು ಶಿವಶಂಕರಪ್ಪ ಅವರ ಕುಟುಂಬ ಒಂದು ಹೆಜ್ಜೆ ಮುಂದಿಟ್ಟಿದೆ. ಟಿಕೆಟ್ ಘೋಷಣೆಗೂ ಮುನ್ನವೇ ನಾಮಪತ್ರವನ್ನ ಸಲ್ಲಿಕೆ ಮಾಡಿದ್ದಾರೆ.

ಎಸ್ ಎಸ್ ಮಲ್ಲಿಕಾರ್ಜುನ ಅವರ ಪುತ್ರ ಸಮರ್ಥ್ ಶಾಮನೂರು ಇಂದು ನಾಮಪತ್ರ ಸಲ್ಲಿಕೆ ಮಾಡಿದ್ದಾರೆ. ತಾಯಿ, ಸಂಸದೆ ಪ್ರಭಾ ಮಲ್ಲಿಕಾರ್ಜುನ ಅವರು ಕೂಡ ಈ ಸಂದರ್ಭದಲ್ಲಿ ಜೊತೆಯಾಗಿದ್ದರು. ಈ ಬಗ್ಗೆ ಪ್ರಭಾ ಮಲ್ಲಿಕಾರ್ಜುನ ಅವರು ಪ್ರತಿಕ್ರಿಯೆ ನೀಡಿದ್ದು ಹೀಗೆ.

ಈಗಾಗಲೇ ಸಮರ್ಥ್ ಹೇಳಿದಂತೆ ಯುಗಾದಿ ಹಬ್ಬ, ರಂಜಾನ್ ಹಬ್ಬ ಎರಡು ಕೂಡಿ ಬಂದಿರುವ ಕಾರಣ ಒಳ್ಳೆಯ ಮುಹೂರ್ತವಿದೆ. ಆದ್ದರಿಂದ ನಾಮಿನೇಷನ್ ಇವತ್ತು ಫೈಲ್ ಮಾಡೋಣಾ ಅಂತ ಬಂದಿದ್ದೇವೆ. ಬಿ ಫಾರಂ ಬಂದ್ಮೇಲೆ ಅಧಿಕೃತವಾಗಿ ಸೋಮವಾರ ಫೈಲ್ ಮಾಡ್ತೇವೆ. ಹಿಂದೆ ಕೂಡ ಅಪ್ಪಾಜಿ ಅವರು ವಿತೌಟ್ ಬಿ ಫಾರಂ ನಾಮಪತ್ರ ಸಲ್ಲಿಕೆ ಮಾಡಿದ್ದರು. ಯಾಕಂದ್ರೆ ಜನರ ಬೆಂಬಲ ಅಷ್ಟಿದೆ, ನಿರೀಕ್ಷೆಗಳು ಇದಾವೆ. ಅಪ್ಪಾಜಿ ಮಾಡಿದಂತ ಅಭಿವೃದ್ಧಿ ಕೆಲಸಗಳೇ ರಕ್ಷಾ ಕವಚದಂತೆ ನಮಗೆಲ್ಲಾ ಕೆಲಸ ಮಾಡ್ತಾ ಇದೆ.

ಯುವಕರು ರಾಜಕಾರಣಕ್ಕೆ ಬರಬೇಕು ಅಂತ ಇದೆ. ಅವರದೆ ಆದಂತ ವಿಷನ್ ಇರುತ್ತೆ. ಎಲ್ಲಿಯೇ ನೋಡಿದ್ರು ಸಹ ನಮ್ಮ ವಾತಾವರಣ, ಗ್ಲೋಬಲ್ ರಿಲೇಷನ್ಸ್ ಇರಬಹುದು. ನಡೆಯುತ್ತಿರುವ ಯುದ್ಧದ ಬಗ್ಗೆ ನಿಮಗೆಲ್ಲಾ ಗೊತ್ತಿದೆ. ಯುವಕರಿಗೆ ಅವರದ್ದೇ ಆದ ದೃಷ್ಟಿಕೋನ ಇರುತ್ತೆ. ಇವತ್ತು ಯುಗಾದಿ ಹಬ್ಬ, ಹೊಸ ಬೆಳೆ ಚಿಗುರುತ್ತಾ ಇದೆ. ಹೀಗಾಗಿ ಯುವಕರಿಗೆ ಬೆಂಬಲ ನೀಡ್ತಾ ಇದ್ದಾರೆ ಎಂದಿದ್ದಾರೆ.

ಸಾರ್ವಜನಿಕ ಕುಂದುಕೊರತೆ ವಿಭಾಗ : ನಿಮ್ಮ ಧ್ವನಿ - ನಮ್ಮ ವೇದಿಕೆ

ನಿಮ್ಮ ಊರಿನ ಸಮಸ್ಯೆಗಳು ಇನ್ನು ಮುಂದೆ ಕೇವಲ ಚರ್ಚೆಯಾಗಬಾರದು, ಅವುಗಳಿಗೆ ಪರಿಹಾರ ಸಿಗಬೇಕು.

ವರದಿ ಮಾಡುವುದು ಹೇಗೆ?

  • ನಿಮ್ಮ ಸುತ್ತಮುತ್ತಲಿನ ರಸ್ತೆ, ನೀರು, ವಿದ್ಯುತ್ ಸಮಸ್ಯೆಗಳ ಫೋಟೋ, ವಿಡಿಯೋ ಅಥವಾ ಮಾಹಿತಿ ನಮಗೆ ಕಳುಹಿಸಿ.
ವಾಟ್ಸಪ್ ಮಾಡಿ: 90369 74702

ನಾವು ಏನು ಮಾಡುತ್ತೇವೆ?

  • ನೀವು ಕಳುಹಿಸಿದ ವರದಿಗಳನ್ನು suddione.com ನಲ್ಲಿ ಪ್ರಕಟಿಸುತ್ತೇವೆ.
  • ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದು ಪರಿಹಾರಕ್ಕಾಗಿ ಒತ್ತಾಯಿಸುತ್ತೇವೆ.
  • ನಿಮ್ಮೂರಿನ ಅಭಿವೃದ್ಧಿಗೆ ನಿಮ್ಮೊಂದಿಗೆ ಧ್ವನಿಗೂಡಿಸುತ್ತೇವೆ.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now