Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ಮಹಿಳೆ ಶಿಕ್ಷಣವಂತಳಾದಾಗ ಎಲ್ಲ ಕ್ಷೇತ್ರಗಳಲ್ಲೂ ಸ್ಥಾನ ಸಿಗುತ್ತದೆ : ಡಾ. ಜೆ.ಕರಿಯಪ್ಪ ಮಾಳಿಗೆ

---Advertisement---

ಸುದ್ದಿಒನ್, ಚಿತ್ರದುರ್ಗ, ಮಾರ್ಚ್. 15 : ಮಹಿಳೆ ಶಿಕ್ಷಣವಂತಳಾದಾಗ ಮಾತ್ರ ಎಲ್ಲಾ ಕ್ಷೇತ್ರಗಳಲ್ಲಿ ಸ್ಥಾನ ತನ್ನಷ್ಟಕ್ಕೆ ತಾನೆ ಅರಸಿ ಬರುತ್ತದೆಂದು ಸರ್ಕಾರಿ ಕಲಾ ಕಾಲೇಜು ಪ್ರಾಂಶುಪಾಲರಾದ
ಡಾ.ಜೆ.ಕರಿಯಪ್ಪ ಮಾಳಿಗೆ ತಿಳಿಸಿದರು.

 

ಕರ್ನಾಟಕ ಲೇಖಕಿಯರ ಸಂಘ ಜಿಲ್ಲಾ ಘಟಕದ ವತಿಯಿಂದ ಪತ್ರಕರ್ತರ ಭವನದಲ್ಲಿ ಭಾನುವಾರ ಹಮ್ಮಿಕೊಳ್ಳಲಾಗಿದ್ದ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಹಾಗೂ ರಾಜ್ಯ ಮಟ್ಟದ ಕವಿಗೋಷ್ಠಿ ಉದ್ಘಾಟಿಸಿ ಮಾತನಾಡಿದರು.
ಮಹಿಳೆಗೆ ಭೂಮಿ ತೂಕದ ಅರ್ಥವಿದೆ. ಸಹಜತೆಯಲ್ಲಿ ಆಕರ್ಷಣೆ, ಸೌಂದರ್ಯ, ಸೊಗಸಿರುತ್ತದೆ. ಮಹಿಳೆ ಸಾಂಸ್ಕøತಿಕ, ಸಂಘಟನಾತ್ಮಕವಾಗಿ ಬೆಳೆಯಬೇಕು. ಮಹಿಳಾ ಚಳುವಳಿಗಳು ಹೇಗೆ ಹುಟ್ಟಿಕೊಂಡವು ಎನ್ನುವ ಬಗ್ಗೆಯೂ ನೀವುಗಳು ಮಾಹಿತಿ ತಿಳಿದುಕೊಂಡಿರಬೇಕು. ಸಾಧನೆಗೆ ಪೂರಕವಾದ ವಾತಾವರಣ ಸೃಷ್ಠಿಯಾಗಬೇಕು. ಹೆಣ್ಣಾದರೆ ಮಾತ್ರ ಶರಣಾಗಲು ಸಾಧ್ಯ ಎಂದು ಹೇಳಿದರು.

 

ಕನ್ನಡದಲ್ಲಿ ಮಹಿಳಾ ಸಾಹಿತ್ಯ ಸೃಷ್ಠಿಯಾಗಿದೆ. ಚಳುವಳಿ ಎಂದರೆ ಕೇವಲ ವಿರೋಧಿಸುವುದಲ್ಲ. ಸಾಮರಸ್ಯ, ಸುಧಾರಣೆ, ಪ್ರೀತಿಯಿರುತ್ತದೆ. ಪ್ರೀತಿಯಿಂದ ಜಗತ್ತನ್ನು ಗೆಲ್ಲಬಹುದು ಎನ್ನುವುದನ್ನು ಬುದ್ದ ತೋರಿಸಿದ್ದಾನೆ. ಜಗದ, ಮನಸ್ಸಿನ ಬೆಳಕು ಮಹಿಳೆ. ಶಿಕ್ಷಣವೆಂದರೆ ಕೇವಲ ಅಕ್ಷರ ತಿಳುವಳಿಕೆಯಲ್ಲ. ಜೀವನದಲ್ಲಿನ ಅನುಭವ ಕೂಡ ಶಿಕ್ಷಣವೆ. ಕೀಳರಿಮೆ, ಹಿಂಜರಿಕೆಯನ್ನು ಬಿಟ್ಟು ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯಲ್ಲಿ ಭಾಗವಹಿಸುವುದರಿಂದ ನಿಮ್ಮಲ್ಲಿ ಆತ್ಮವಿಶ್ವಾಸ ಮೂಡಿಸುತ್ತದೆ. ಜನಪದರಲ್ಲಿ ಸ್ತ್ರೀಗೆ ಗೌರವವಿದೆ. ಮಹಿಳೆ-ಪುರುಷ, ಜಾತಿ-ಧರ್ಮದ ನಡುವೆ ಒಡಕಿರುವ ಇಂದಿನ ಕಾಲಘಟ್ಟದಲ್ಲಿ ಸೌಹಾರ್ಧ, ಸಹಬಾಳ್ವೆಯಿಂದ ಇರುವುದನ್ನು ಕಲಿತಾಗ ಮಾತ್ರ ಎಲ್ಲಿಯೂ ಸಂಘರ್ಷಕ್ಕೆ ಜಾಗವಿರುವುದಿಲ್ಲ. ವಾಸ್ತವ ಪ್ರ್ರಜ್ಞೆಯ ಸಂಕೇತವಾಗಿರುವ ಮಹಿಳೆಯರು ಸೂಕ್ಷ್ಮ ಸಂವೇದನೆಗಳನ್ನು ಬೆಳೆಸಿಕೊಳ್ಳುವಂತೆ ಡಾ.ಜೆ.ಕರಿಯಪ್ಪ ಮಾಳಿಗೆ ಕರೆ ನೀಡಿದರು.

 

ಖ್ಯಾತ ವಿಮರ್ಶಕರಾದ ತಾರಿಣಿ ಶುಭದಾಯಿನಿ ಸ್ತ್ರೀ ಬರವಣಿಗೆಯಲ್ಲಿನ ಕುಶಲತೆಗಳು ಎಂಬ ವಿಷಯ ಕುರಿತು ಮಾತನಾಡುತ್ತ ಸೃಜನಶೀಲತೆ ಯಾರ ಸ್ವತ್ತಲ್ಲ. ಅಕ್ಕಮಹಾದೇವಿ ಮೊದಲ ಮಹಿಳಾ ಕವಿ, ನಂತರದಲ್ಲಿ ಶರಣೆಯರು, ವಚನಗಾರ್ತಿಯರು ಬರುತ್ತಾರೆ. ಅಭಿವ್ಯಕ್ತಿಯಲ್ಲಿಯೂ ಅನುಭವದ ಸಂವೇದನೆಯ ಸೆಳಹುಗಳಿರುತ್ತವೆ. 19 ನೇ ಶತಮಾನದಲ್ಲಿ ಸ್ತ್ರೀಗೆ ಶಿಕ್ಷಣ ಕಠಿಣವಾಗಿದ್ದರಿಂದ ಮನೆಯಲ್ಲಿ ಅನೇಕ ಕಟ್ಟುಪಾಡುಗಳನ್ನು ಪಾಲಿಸುವುದೇ ದೊಡ್ಡ ಸವಾಲಾಗಿತ್ತು. ಕೀರ್ತನಕಾರರು ಮೌಖಿಕ ಪರಂಪರೆಯವರು. ಮೌಖಿಕ ಪರಂಪರೆಯನ್ನು ಒಗ್ಗಿಸಿಕೊಳ್ಳುವುದು ಒಂದು ಕೌಶಲ್ಯ ಎಂದರು.

 

ಅಭಿವ್ಯಕ್ತಿ ತುಡಿತ ನೈಜವಾಗಿದ್ದಷ್ಟು ಮುನ್ನಡೆಸಿಕೊಂಡು ಹೋಗುತ್ತದೆ. ತಂತ್ರಗಾರಿಕೆಯಿಂದ ಸಾಹಿತ್ಯವನ್ನು ಉಳಿಸಿಕೊಂಡು ಬರಲಾಗಿದೆ. ಮಹಿಳಾ ಅಭಿವ್ಯಕ್ತಿಯಲ್ಲಿ ತನ್ನ ತನದ ಬರವಣಿಗೆಯಿರಬೇಕು. ಬರವಣಿಗೆಯಲ್ಲಿ ಗುರುತಿಸಿಕೊಳ್ಳಬೇಕಾದರೆ ಅನನ್ಯತೆಗಳನ್ನು ಶೋಧಿಸಿಕೊಳ್ಳಬೇಕಾದರೆ ಅಭಿವ್ಯಕ್ತಿಗಳನ್ನು ಭಾಷೆ ಮೂಲಕ ಹೊರಗಿಡಿ. ಸೃಜನಶೀಲತೆ ಸಮಸ್ಯೆಯಿದೆ. ಅದೊಂದು ದೊಡ್ಡ ಸವಾಲನ್ನು ಮಹಿಳೆಯರು ಸಮರ್ಥವಾಗಿ ಎದುರಿಸಲು ಸಿದ್ದರಾಗಬೇಕೆಂದು ನುಡಿದರು.

 

ಕವಿ ಜಬೀವುಲ್ಲಾ ಎಂ.ಅಸದ್ ಕವಿಗೋಷ್ಠಿಯ ಅಧ್ಯಕ್ಷತೆ ವಹಿಸಿದ್ದರು. ಕೆ.ನಿರ್ಮಲ ಮರಡಿಹಳ್ಳಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಕರ್ನಾಟಕ ಲೇಖಕಿಯರ ಸಂಘ ಜಿಲ್ಲಾ ಘಟಕದ ಕಾರ್ಯದರ್ಶಿ ದೀಪಿಕಾ ಬಾಬು, ಸಹ ಕಾರ್ಯದರ್ಶಿ ಡಾ.ಚಾಂದಿನಿಖಾಲಿದ್, ಖಜಾಂಚಿ ಮೀರಾ ನಾಡಿಗ್, ಡಿ.ಶಬ್ರಿನಾ ಮಹಮದ್ ಆಲಿ ಇವರುಗಳು ವೇದಿಕೆಯಲ್ಲಿದ್ದರು.
ಕೆ.ಸಿ.ಶಿಲ್ಪಾ ಜಗದೀಶ್, ಶಕುಂತಲಾ ಪಿ.ಆಚಾರ್ ಸೇರಿದಂತೆ ಕರ್ನಾಟಕ ಲೇಖಕಿಯರ ಸಂಘ ಜಿಲ್ಲಾ ಘಟಕದ ಪದಾಧಿಕಾರಿಗಳು ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯಲ್ಲಿ ಭಾಗವಹಿಸಿದ್ದರು.
ರಾಜ್ಯದ ನಾನಾ ಜಿಲ್ಲೆಗಳಿಂದ ಆಗಮಿಸಿದ್ದ 60 ಕ್ಕೂ ಹೆಚ್ಚು ಕವಿಗಳು ತಮ್ಮ ಕವನಗಳನ್ನು ವಾಚಿಸಿದರು.

ಸಾರ್ವಜನಿಕ ಕುಂದುಕೊರತೆ ವಿಭಾಗ : ನಿಮ್ಮ ಧ್ವನಿ - ನಮ್ಮ ವೇದಿಕೆ

ನಿಮ್ಮ ಊರಿನ ಸಮಸ್ಯೆಗಳು ಇನ್ನು ಮುಂದೆ ಕೇವಲ ಚರ್ಚೆಯಾಗಬಾರದು, ಅವುಗಳಿಗೆ ಪರಿಹಾರ ಸಿಗಬೇಕು.

ವರದಿ ಮಾಡುವುದು ಹೇಗೆ?

  • ನಿಮ್ಮ ಸುತ್ತಮುತ್ತಲಿನ ರಸ್ತೆ, ನೀರು, ವಿದ್ಯುತ್ ಸಮಸ್ಯೆಗಳ ಫೋಟೋ, ವಿಡಿಯೋ ಅಥವಾ ಮಾಹಿತಿ ನಮಗೆ ಕಳುಹಿಸಿ.
ವಾಟ್ಸಪ್ ಮಾಡಿ: 90369 74702

ನಾವು ಏನು ಮಾಡುತ್ತೇವೆ?

  • ನೀವು ಕಳುಹಿಸಿದ ವರದಿಗಳನ್ನು suddione.com ನಲ್ಲಿ ಪ್ರಕಟಿಸುತ್ತೇವೆ.
  • ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದು ಪರಿಹಾರಕ್ಕಾಗಿ ಒತ್ತಾಯಿಸುತ್ತೇವೆ.
  • ನಿಮ್ಮೂರಿನ ಅಭಿವೃದ್ಧಿಗೆ ನಿಮ್ಮೊಂದಿಗೆ ಧ್ವನಿಗೂಡಿಸುತ್ತೇವೆ.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now