ಉಪೇಂದ್ರ (Upendra) ನಿನ್ನೆಯ ದಿನ ಒಂದು ಪೋಸ್ಟ್ ಹಾಕಿದ್ದರು. ನಾಳೆಯ ಬೆಳಗ್ಗೆ 10 ಗಂಟೆಗೆ ಒಂದು ಲಿಂಕ್ ಆಗುತ್ತೇನೆ. ಇದನ್ನ ನೋಡಿ ಸುಮ್ನೆ ಇದ್ದು ಬೇಡಿ. ಇದನ್ನ ಯಾರಿಗೂ ಹೇಳ್ಬೇಡಿ. ಬಹುಶಃ ಇದನ್ನ ನೋಡಿದವರು ಡಿಲೀಟ್ ಮಾಡಬಹುದು ಅಂತಲೂ ಹೇಳಿದ್ದರು. ಆಗ ಜನ ತಲೆಗೆ ಹುಳ ಬಿಟ್ಟುಕೊಂಡಿದ್ದರು.
ಈಗ ಉಪ್ಪಿ ಹೇಳಿದಂತೆ ಇನ್ಸ್ಟಾಗ್ರಾಮ್, ಟ್ವಿಟರ್, ಫೇಮಸ್ ಬುಕ್ ಹೀಗೆ ಎಲ್ಲೆಡೆ ಈ ಲಿಂಕ್ (Link) ಹಾಕಿದ್ದಾರೆ. ಆದರೆ, ಈ ಒಂದು ಲಿಂಕ್ ಓಪನ್ ಮಾಡಿದ ಎಲ್ಲರಿಗೂ ಆಶ್ಚರ್ಯ ಆಗುತ್ತಾರೆ. ಅಯ್ಯೋ ಇಷ್ಟೆನಾ ಎಂದು ಅನ್ನಿಸುತ್ತದೆ.ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿರುವ ಲಿಂಕ್ ಓಪನ್ ಮಾಡಿದ್ರೇ ಕಣ್ಣೀಗೆ ಬಿದ್ದಿದ್ದು ಸಿಲಿಂಡರ್.ಸಿಲಿಂಡರ್ ಒಂದರ ಫೋಟೋವನ್ನ ಲಿಂಕ್ ರೂಪದಲ್ಲಿ ಶೇರ್ ಮಾಡಿದ್ದಾರೆ.
ಉಪೇಂದ್ರ ಸಿಲಿಂಡರ್ ಸಮಸ್ಯೆಯನ್ನ ಎತ್ತಿ ಹೇಳಿದ್ದಾರೆ. ಆದರೆ, ಇಲ್ಲಿ ಏನೂ ಹೇಳೋಕೆ ಹೋಗಿಲ್ಲ. ಬದಲಾಗಿ ಕೇವಲ ಸಿಲಿಂಡರ್‌ನ ಒಂದೇ ಒಂದು ಫೋಟೋ ಹಾಕಿ ಬಿಟ್ಟಿದ್ದಾರೆ. ಹೆಸರಿಲ್ಲದ ಖಾಲಿ ಸಿಲಿಂಡರ್ ಫೋಟೋ ನೋಡಿದ ಅಭಿಮಾನಿಗಳು ದಂಗಾಗಿದ್ದಾರೆ. ವಿವಿಧ ರೀತಿಯಲ್ಲಿ ಈ ಫೋಟೋವನ್ನ ಅರ್ಥೈಸಿಕೊಂಡು ಕಾಮೆಂಟ್ ಮಾಡುತ್ತಿದ್ದಾರೆ.

ಸಾರ್ವಜನಿಕ ಕುಂದುಕೊರತೆ ವಿಭಾಗ : ನಿಮ್ಮ ಧ್ವನಿ - ನಮ್ಮ ವೇದಿಕೆ
ನಿಮ್ಮ ಊರಿನ ಸಮಸ್ಯೆಗಳು ಇನ್ನು ಮುಂದೆ ಕೇವಲ ಚರ್ಚೆಯಾಗಬಾರದು, ಅವುಗಳಿಗೆ ಪರಿಹಾರ ಸಿಗಬೇಕು.
ವರದಿ ಮಾಡುವುದು ಹೇಗೆ?
- ನಿಮ್ಮ ಸುತ್ತಮುತ್ತಲಿನ ರಸ್ತೆ, ನೀರು, ವಿದ್ಯುತ್ ಸಮಸ್ಯೆಗಳ ಫೋಟೋ, ವಿಡಿಯೋ ಅಥವಾ ಮಾಹಿತಿ ನಮಗೆ ಕಳುಹಿಸಿ.
ನಾವು ಏನು ಮಾಡುತ್ತೇವೆ?
- ನೀವು ಕಳುಹಿಸಿದ ವರದಿಗಳನ್ನು suddione.com ನಲ್ಲಿ ಪ್ರಕಟಿಸುತ್ತೇವೆ.
- ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದು ಪರಿಹಾರಕ್ಕಾಗಿ ಒತ್ತಾಯಿಸುತ್ತೇವೆ.
- ನಿಮ್ಮೂರಿನ ಅಭಿವೃದ್ಧಿಗೆ ನಿಮ್ಮೊಂದಿಗೆ ಧ್ವನಿಗೂಡಿಸುತ್ತೇವೆ.

















