ಬೆಂಗಳೂರು: ಇತ್ತೀಚೆಗಷ್ಟೇ ತಮ್ಮ ಸರ್ಕಾರದ ಬಜೆಟ್ ಮಂಡನೆ ಬಗ್ಗೆ ರಾಮನಗರ ಶಾಸಕ ಇಕ್ಬಾಲ್ ಹುಸೇನ್ ಅಸಮಾಧಾನ ಹೊರ ಹಾಕಿದ್ದರು ಹೀಗಾಗಿ ಹಲವರು ಅವರನ್ನು ಪಕ್ಷದಿಂದ ಹೊರಗೆ ಹಾಕಿ ಎಂಬ ಮಾತನ್ನ ಹೇಳಿದ್ದರು. ಇದಕ್ಕೆ ಸ್ವತಃ ಇಕ್ಬಾಲ್ ಹುಸೇನ್ ಅವರೇ ಪ್ರತಿಕ್ರಿಯೆ ನೀಡಿದ್ದಾರೆ. ಸಂತೋಷ.. ಸಂತೋಷ..ಸಂತೋಷ ಬೇರೇನು ಇಲ್ಲ ಎಂಬ ಪ್ರತಿಕ್ರಿಯೆ ನೀಡಿದ್ದಾರೆ.
ಸರಿ ಆಗ್ಬೇಕು ಅಂದ್ರೆ ನಾಯಕತ್ವ ಬದಲಾವಣೆಯಾಗಬೇಕಾ ಎಂಬ ಪ್ರಶ್ನೆಗೆ, ನಾನ್ಯಾಕೆ ಅದನ್ನ ಮಾತನ್ನಾಡಲಿ. ನಾನು ನನ್ನ ಕ್ಷೇತ್ರದ ಅಭಿವೃದ್ಧಿ ಬಗ್ಗೆ, ನನಗಿರುವ ಕಷ್ಟ ಸುಖದ ಬಗ್ಗೆ, ನನ್ನ ಜನರ ಅಹವಾಲಿನ ಬಗ್ಗೆ ಕೇಳ್ತಾ ಇದ್ದೀನೆ ಹೊರತು, ವಿನಾಕಾರಣ ಯಾವುದೇ ವಿಚಾರದ ಬಗ್ಗೆ ಮಾತನ್ನಾಡೋದಿಲ್ಲ, ನನಗೆ ಅದರ ಬಗ್ಗೆ ಅವಶ್ಯಕತೆಯೂ ಇಲ್ಲ. ನಮ್ಮ ಕ್ಷೇತ್ರಕ್ಕೆ ಏನು ಕೊಟ್ಟಿಲ್ಲ ಎಂಬ ಬೇಸರ ಇದೆ ಅಷ್ಟೇ. ನನ್ನ ಕ್ಷೇತ್ರದ ಬಗ್ಗೆ ಮಾತ್ರ ನಾನ್ ಮಾತಾಡ್ತಾ ಇದ್ದೀನಿ. ಅಲ್ಲಿ ನಡೆದ ಘಟನೆ ನಿಮಗೆ ಗೊತ್ತಿಲ್ಲ. ನಾನು ಕೊಡ್ತೀನಿ ನಿಮಗೆ. ಆ ಚಿತ್ರಗಳನ್ನ ನೋಡಿದ್ರೆ ನಿಮ್ಗೇನೆ ಕರುಳು ಹೊರಗೆ ಬಂದು ಬಿಡುತ್ತೆ.
ಎಷ್ಟೋ ಜಾನುವಾರುಗಳು ತೀರೋದ್ರು. ರೇಷ್ಮೆ ನಾಡು ಅಂತಾರೆ. ಮಕ್ಕಳುಗೆ ಓದೋಕೆ ಪುಸ್ತಕ ಇಲ್ಲ. ಊಟ ಇಲ್ಲ ಮೂರು ದಿನ. ರಸ್ತೆ, ಚರಂಡಿ, ಬ್ರಿಡ್ಜ್ ಎಲ್ಲಾ ಹೊರಟೋಯ್ತು. ನೀವುಗಳು ಬೇರೆ ಪ್ರಶ್ನೆಯನ್ನೇ ಕೇಲಕ್ತಾ ಇದ್ದೀರಿ. ಈ ಬಜೆಟ್ ಬಗ್ಗೆ ಪ್ರಶ್ನೆ ಎತ್ತಿದ್ದೀರಿ, ನಂಗೆ ಸಮಾಧಾನ ಇಲ್ಲ, ನನ್ನ ಕ್ಷೇತ್ರಕ್ಕೆ ಅನುಕೂಲ ಆಗಿಲ್ಲ ಎಂಬ ನೋವನ್ನ ಹೇಳಿಕೊಂಡಿದ್ದೀನಿ ಅಷ್ಟೆ ಎಂದಿದ್ದಾರೆ.






