ಗ್ಯಾಸ್ ಸಿಲಿಂಡರ್ ಕೊರತೆ : ಸದನದಲ್ಲಿ ಗರಂ ಆದ್ರೂ ಸಿಎಂ

1 Min Read

ಬೆಂಗಳೂರು: ಜಿಲ್ಲೆಯ ಹಲವು ಕಡೆ ಗ್ಯಾಸ್ ಸಿಲಿಂಡರ್ ಕೊರತೆ ಉಂಟಾಗಿ ಅದೆಷ್ಟೋ ಹೊಟೇಲ್ ಗಳು ಬಾಗಿಲು ಬಂದ್ ಮಾಡಿವೆ. ಇದರಿಂದ ಹೊಟೇಲ್ ಅನ್ನೇ ನಂಬಿಕೊಂಡವರು ಉಪವಾಸ ಕೂರುವಂತೆ ಆಗಿದೆ. ಎರಡನೇ ದಿನ ಗ್ಯಾಸ್ ಸಿಲಿಂಡರ್ ಕೊರತೆ ಇನ್ನಷ್ಟು ಹೆಚ್ಚಾಗಿದ್ದು, ಸದನದಲ್ಲೂ ಗ್ಯಾಸ್ ಸಿಲಿಂಡರ್ ವಿಚಾರ ಸದ್ದು ಮಾಡಿದೆ. ವಿಪಕ್ಷಗಳ ಮಾತಿಗೆ ಸಿಎಂ ಸಿದ್ದರಾಮಯ್ಯ ಅವರು ಉತ್ತರ ನೀಡಿದ್ದಾರೆ.

ಗ್ಯಾಸ್ ಬಗ್ಗೆ ಮಾತನ್ನಾಡ್ತಾ ಇದ್ದಾರೆ. ಶೂನ್ಯ ವೇಳೆಯಲ್ಲಿ ಪ್ರಸ್ತಾಪ ಮಾಡಿರುವಂತದ್ದು. ಎಲ್ಲದಕ್ಕೂ ಎದ್ದು ನಿಂತುಕೊಳ್ಳಬೇಕಾದಂತ ಅವಶ್ಯಕತೆ ಇಲ್ಲ. ಉತ್ತರ ಕೊಡಬೇಕಾದದ್ದು ಫುಡ್ ಮಿನಿಸ್ಟರ್. ಆ ಬಗ್ಗೆ ಇಂದು ಚರ್ಚೆ ಮಾಡಿದ್ದಾರೆ. ಅಲ್ಲಿ ಆಯಿಲ್ ಕಂಪನಿಗಳು ಏನು ಹೇಳಿದ್ದಾರೆ ಎಂಬುದನ್ನು ಪ್ರಸ್ತಾಪ ಮಾಡುತ್ತಾರೆ. ಅದನ್ನು ಕೇಳುವುದಕ್ಕೆ ತಾಳ್ಮೆಯೂ ಇಲ್ಲ. ಈ ಗ್ಯಾಸ್ ಸಿಲಿಂಡರ್ ಗಳನ್ನ ಕೊಡುವಂತವರು ಯಾರು. ಕೇಂದ್ರ ಸರ್ಕಾರ ಅಲ್ವಾ.

ಸುಮ್ಮನೆ ಎಲ್ಲದಕ್ಕೂ ಎದ್ದು ನಿಲ್ಲೋದಲ್ಲ. ಸಿಲಿಂಡರ್ ಬೆಲೆ ಏರಿಕೆ ಮಾಡ್ತಾರೆ. ಹರ್ದಿಪ್ ಸಿಂಗ್ ಪೂರಿ ಹೇಳಿರುವಂತದ್ದನ್ನು ಪ್ರಸ್ತಾಪ ಮಾಡಿದರೆ ಅದನ್ನ ಕೇಳುವುದಕ್ಕೆ ವ್ಯವಧಾನವೇ ಇಲ್ಲ. ಕೇಂದ್ರ ಸರ್ಕಾರ ಎಂದ ಕೂಡಲೇ ಎದ್ದು ನಿಂತು ಬಿಡೋದಾ ಎಂಬ ಪ್ರಶ್ನೆಯನ್ನ ಸಿದ್ದರಾಮಯ್ಯ ಅವರು ಕೇಳಿದ್ದಾರೆ. ಸದನದಲ್ಲಿ ಬಿಜೆಪಿ ನಾಯಕರು ಇದೇ ವಿಚಾರಕ್ಕೆ ಕಾಂಗ್ರೆಸ್ ಸರ್ಕಾರದ ವಿರಿದ್ಧ ಹೌಹಾರಿದ್ದಾರೆ. ಕೇಂದ್ರ ಸರ್ಕಾರವೇ ನೀಡಬಹುದು. ಆದರೆ ರಾಜ್ಯ ಸರ್ಕಾರ ಎಲ್ಲದನ್ನು ನೋಡಿಕೊಳ್ಳಬೇಕು ಎಂದಿದ್ದಾರೆ. ಸಿದ್ದರಾಮಯ್ಯ ಅವರು ಮಾತನ್ನಾಡುವುದಕ್ಕೂ ಬಿಡದೆ ಗ್ಯಾಸ್ ಸಿಲಿಂಡರ್ ಕೊರತೆಯ ಬಗ್ಗೆ ಜೋರು ಧ್ವನಿ ಎತ್ತಿದ್ದಾರೆ.

Share This Article