ಸಂಬಳವನ್ನು ಬೇಡ ಎಂದ ಈ ಇಬ್ಬರು ಲೋಕಸಭಾ ಸಂಸದರು ಯಾರು ಗೊತ್ತೇ?

1 Min Read

ಲೋಕಸಭೆಯ  ಇಬ್ಬರು ಸಂಸದರು ಸಂಬಳ ಪಡೆಯದೇ ಇರಲು ನಿರ್ಧರಿಸಿದ್ದಾರೆ. ಒಬ್ಬರು ಬಿಜೆಪಿ ಪಕ್ಷದವರಾದರೆ , ಇನ್ನೊಬ್ಬರು ಕಾಂಗ್ರೆಸ್‌ನವರು‌. ಈ ಮಾಹಿತಿಯನ್ನು ಮಾಹಿತಿ ಹಕ್ಕು ಕಾಯ್ದೆಯಡಿ ಮಾಧ್ಯಮವೊಂದು ಬಹಿರಂಗಪಡಿಸಿದೆ.

ಈ ಇಬ್ಬರು ಸಂಸದರು ಒಂದು ರೂಪಾಯಿ ಕೂಡ ಸಂಬಳ ಬೇಡ ಎಂದಿದ್ದಾರೆ.ಲೋಕಸಭಾ ಸಚಿವಾಲಯದ ಮಾಹಿತಿ ಪ್ರಕಾರ ಕುರುಕ್ಷೇತ್ರದ ಸಂಸದ ನವೀನ್ ಜಿಂದಾಲ್ ಮತ್ತು ಇನ್ನರ್ ಮಣಿಪುರದ ಸಂಸದ ಡಾ. ಬಿಮೋಲ್ ಅಕೋಯಿಜಮ್ ಅಂಗೋಮ್ಚಾ ಅವರು ಸಂಬಳ ಪಡೆಯದಿರಲು ತೀರ್ಮಾನಿಸಿದ್ದಾರೆ. ಜಿಂದಾಲ್ ಅವರು ಭತ್ಯೆ ಅಥವಾ ಸವಲತ್ತುಗಳನ್ನು ಕೂಡ ನಿರಾಕರಿಸಿದ್ದಾರೆ.  ಜಿಂದಾಲ್ ಅವರು ಕಚೇರಿಯೊಂದಿಗೆ ಬರುವ ಸರ್ಕಾರಿ ಸವಲತ್ತು ಮತ್ತು ಭತ್ಯೆಗಳು ಕೂಡ ಬೇಡ ಎಂದು ತಿಳಿಸಿದ್ದಾರೆ ಎನ್ನಲಾಗಿದೆ.

ಚುನಾವಣಾ ಅಫಿಡವಿಟ್‌ಗಳ ಪ್ರಕಾರ, ಕುರುಕ್ಷೇತ್ರದ ಸಂಸದ ನವೀನ್ ಜಿಂದಾಲ್ 1,241 ಕೋಟಿ ರೂ. ಮೌಲ್ಯದ ಆಸ್ತಿಯನ್ನು ಹೊಂದಿದ್ದು, ಇನ್ನರ್ ಮಣಿಪುರವನ್ನು ಪ್ರತಿನಿಧಿಸುವ ಡಾ. ಬಿಮೋಲ್ ಅಕೋಯಿಜಮ್ ಅಂಗೋಮ್ಚಾ ಸುಮಾರು 97 ಲಕ್ಷ ರೂ. ಆಸ್ತಿಯನ್ನು ಹೊಂದಿದ್ದಾರೆ.

Share This Article