Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ವಿಶ್ವದ ಅತಿದೊಡ್ಡ ಗೊಡಂಬಿ ಮರ ಎಲ್ಲಿದೆ ಗೊತ್ತೆ ?

---Advertisement---

ಪ್ರಕೃತಿ ಅದ್ಭುತಗಳಲ್ಲಿ ಒಂದು ವಿಶ್ವದ ಅತಿದೊಡ್ಡ ಗೋಡಂಬಿ ಮರ  ಎಲ್ಲಿದೆ ಗೊತ್ತೆ? ಇದನ್ನು ನೋಡಿದ ಕೂಡಲೇ ಇದು ಮರನೋ ಅಥವಾ ಕಾಡೋ ಎಂಬ ಪ್ರಶ್ನೆ ಉಂಟಾಗುತ್ತದೆ.  ವಿಶಾಲವಾಗಿ ಹರಡಿಕೊಂಡಿದೆ ಈ ಒಂದೇ ಒಂದು ಮರ.

ವಿಶ್ವದ ಅತಿದೊಡ್ಡ ಗೋಡಂಬಿ ಮರವಾದ ಅನಾಕಾರ್ಡಿಯಂ ಆಕ್ಸಿಡೆಂಟೇಲ್, ಸುಮಾರು 8,500 ಚದರ ಮೀಟರ್‌ಗಳಷ್ಟು ವಿಸ್ತೀರ್ಣದಲ್ಲಿ ಹರಡಿಕೊಂಡಿದೆ ಮತ್ತು ಈ ದೈತ್ಯ ಮರ ವರ್ಷಕ್ಕೆ ಸುಮಾರು 80,000 ಹಣ್ಣುಗಳನ್ನು ನೀಡುತ್ತದೆ. ಸ್ಥಳೀಯವಾಗಿ “ಮೈಯರ್ ಕ್ಯಾಜುಯೆರೊ ಡೊ ಮುಂಡೋ” ಎಂದು ಕರೆಯಲ್ಪಡುವ ಈ ಮರವು ಬ್ರೆಜಿಲ್‌ನ ರಿಯೊ ಗ್ರಾಂಡೆ ಡೊ ನಾರ್ಟೆ ರಾಜ್ಯದ ಪರ್ನಮಿರಿಮ್‌ನ ಕಡಲತೀರದ ಬಳಿ ಇದೆ.

ಇದು 100 ವರ್ಷಕ್ಕಿಂತ ಹೆಚ್ಚು ಹಳೆಯ ಮರ ಎಂದು ನಂಬಲಾಗಿದೆ. ಸ್ಥಳೀಯ ಕಥೆಗಳ ಪ್ರಕಾರ, 1888ರಲ್ಲಿ ಒಬ್ಬ ಮೀನುಗಾರ ಈ ಮರವನ್ನು ನೆಟ್ಟಿದ್ದಾನೆ ಎನ್ನಲಾಗುತ್ತದೆ. ಕಾಲಕ್ರಮೇಣ ಇದು ಸಾಮಾನ್ಯ ಮರಗಳಂತೆ ನೇರವಾಗಿ ಬೆಳೆಯದೇ, ಅಸಾಧಾರಣ ರೀತಿಯಲ್ಲಿ ಎಲ್ಲ ದಿಕ್ಕುಗಳಿಗೂ ಹರಡತೊಡಗಿತು.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now
🏫 ಅಡ್ಮಿಷನ್ ಓಪನ್
🔒

ಇಂಡಿಯನ್ ಇಂಟರ್ ನ್ಯಾಷನಲ್ ಸ್ಕೂಲ್

ಸ್ವಾಗತ...