Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ವಿಧಾನಸೌಧದ ಪ್ರವೇಶ ದ್ವಾರಗಳಿಗೆ ಹೊಸ ಲುಕ್​; ಒಂದೊಂದು ಬಾಗಿಲಿಗೆ ಎಷ್ಟು ಲಕ್ಷ ಖರ್ಚಾಗುತ್ತೆ ಗೊತ್ತಾ?

---Advertisement---

ರಾಜ್ಯದ ಶಕ್ತಿ ಸೌಧ ವಿಧಾನಸೌಧಕ್ಕೆ  ಹೊಸ ಲುಕ್ ನೀಡಲಾಗುತ್ತುದೆ. ವಿಧಾನಸೌಧದ ಪಶ್ಚಿಮ ದ್ವಾರದಿಂದ ವಿಧಾನಸಭೆಗೆ ಎಂಟ್ರಿ ನೀಡುವ ದ್ವಾರಕ್ಕೆ ಹೊಸ ಮೆರುಗು ನೀಡಲಾಗಿತ್ತು.ನಾಲ್ಕು ಪ್ರವೇಶದ್ವಾರಕ್ಕೆ ಆಕರ್ಷಕ ಬಾಗಿಲು, ನಿರ್ಮಾಣಕ್ಕೆ ಸ್ಪೀಕರ್ ಯು.ಟಿ ಖಾದರ್ (UT Khader) ಮುಂದಾಗಿದ್ದು, ದ್ವಾರಗಳಲ್ಲಿ ಆಕರ್ಷಕ ಕೆತ್ತನೆಗಳನ್ನು ಮಾಡಲು ಎಷ್ಟು ಖರ್ಚಾಗುತ್ತೆ ಗೊತ್ತಾ?

ಶಕ್ತಿ ಸೌಧದ ನಾಲ್ಕು ಮುಖ್ಯ ದ್ವಾರಗಳಲ್ಲಿ ಆಕರ್ಷಕ ಕೆತ್ತನೆಗಳನ್ನು ಮಾಡಲು ಯು ಟಿ ಖಾದರ್ ನಿರ್ಧರಿಸಿದ್ದಾರೆ. ಈಗಾಗಲೇ ಕಾಮಗಾರಿ ಕೂಡ ಆರಂಭವಾಗಿದೆ.ಬೆಂಗಳೂರಿಗೆ ಬಂದವರು ವಿಧಾನಸೌಧ ಮುಂದೆ ಪೋಟೋ ತೆಗೆಸಿಕೊಳ್ಳುತ್ತಾರೆ. ಹೀಗಾಗಿ ವಿಧಾನಸೌಧದ ಸೌಂದರ್ಯ ಹೆಚ್ಚಿಸಲು ಈ ಯೋಜನೆ ಎಂದು ಸ್ಪೀಕರ್ ಖಾದರ್​ ಸ್ಪಷ್ಟನೆ ನೀಡಿದ್ದಾರೆ.

ದೇಶ, ವಿದೇಶದಿಂದ ವಿಧಾನಸೌಧ ನೋಡಲು ಬರ್ತಾರೆ. ಸುಂದರವಾಗಿ ಕಾಣಬೇಕು ಎಂದು ಮೊದಲ ಹೆಜ್ಜೆ ಎಂಬಂತೆ ವಿಧಾನಸಭೆ ಪ್ರವೇಶ ದ್ವಾರ ಮಾಡಿದ್ದೆವು.ವಿಧಾನಸಭೆ ಪ್ರವೇಶ ದ್ವಾರ ಮಾಡಿದ್ದೆವು. ರೋಜ್ ವುಡ್ ನಲ್ಲಿ ಆ ಬಾಗಿಲು ಮಾಡಲಾಗಿತ್ತು.
ಉತ್ತರ, ದಕ್ಷಿಣ ಎಲ್ಲಾ ಬಾಗಿಲುಗಳಿಗೂ ದ್ವಾರ ಅಳವಡಿಕೆ ಮಾಡಲು ಆದೇಶ ಆಗಿದೆ ಎಂದು ಸ್ಪೀಕರ್ ಯು.ಟಿ.ಖಾದರ್ ಹೇಳಿದ್ದಾರೆ. ಪ್ರತಿಯೊಂದು ಬಾಗಿಲಿಗೆ ಅಂದಾಜು 70 ರಿಂದ 80 ಲಕ್ಷ ವೆಚ್ಚ ತಗುಲಿದೆ ಎಂಬ ಮಾಹಿತಿ ಇದೆ.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now