ಸುದ್ದಿಒನ್, ಚಿತ್ರದುರ್ಗ, ಮಾರ್ಚ್. 09 : ಮಾಜಿ ಸಚಿವ ಏಕಾಂತಯ್ಯನವರ ಪುತ್ರ ಇ. ಜಯಪ್ರಕಾಶ್ (67 ವರ್ಷ) ಅವರು ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಇಂದು ಬೆಳಿಗ್ಗೆ (ಮಾರ್ಚ್. 09, ಸೋಮವಾರ) ಸುಮಾರು 10 ಗಂಟೆ ಸಮಯದಲ್ಲಿ ನಿಧನರಾದರು.
ಮೃತರು ತಂದೆ ಮಾಜಿ ಸಚಿವ ಏಕಾಂತಯ್ಯ, ಪತ್ನಿ, ಓರ್ವ ಪುತ್ರ, ಓರ್ವ ಪುತ್ರಿ ಸೇರಿದಂತೆ ಅಪಾರ ಬಂಧು ಬಳಗದವರನ್ನು ಅಗಲಿದ್ದಾರೆ. ಅಂತ್ಯಕ್ರಿಯೆ ನಾಳೆ (ಮಾರ್ಚ್. 10 ರಂದು) ಬೆಳಿಗ್ಗೆ 11.00 ಗಂಟೆಗೆ ಹಿರಿಯೂರು ತಾಲ್ಲೂಕಿನ ಬಬ್ಬೂರು ಗ್ರಾಮದ ಜವಳಿ ಫಾರ್ಮ್ ನಲ್ಲಿ ನೆರವೇರಿಸಲಾಗುವುದು ಎಂದು ಕುಟುಂಬದ ಮೂಲಗಳು ತಿಳಿಸಿವೆ.





