Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ನ್ಯೂಜಿಲೆಂಡ್‌ನ ಕಬ್ಬಿಣಯುಕ್ತ ಪಳೆಯುಳಿಕೆಗಳು: ಕೋಟ್ಯಾಂತರ ವರ್ಷಗಳ ಭೂ ಇತಿಹಾಸದ ಸಾಕ್ಷಿ

---Advertisement---

ವಿಶೇಷ ಲೇಖನ :
ಜೆ. ಪರಶುರಾಮ
ನಿವೃತ್ತ ಹಿರಿಯ ಭೂವಿಜ್ಞಾನಿ
ಕಾರ್ಯದರ್ಶಿ, ಚಿತ್ರದುರ್ಗ ಜಿಲ್ಲಾ ರೆಡ್ಡಿಜನಸಂಘ
ಸದಸ್ಯರು, ಬೆಂಗಳೂರು ಸೌತ್ ಸೆಂಟರ್ (ಒ.)
ಮೊ : 94483 38821

ನ್ಯೂಜಿಲೆಂಡ್‌ನಲ್ಲಿ ಪತ್ತೆಯಾದ ಕಬ್ಬಿಣದ ಅಂಶವಿರುವ ಪೆಟ್ರಿಪೈಡ್‌ (ಕಲ್ಲಾದ) ಮರದ ಪಳೆಯುಳಿಕೆಗಳು ಮುಖ್ಯವಾಗಿ ಜ್ವಾಲಮುಖಿ ಬೂದಿ ಮತ್ತು ಖನಿಜಮುಕ್ತ ನೀರಿನಿಂದ ಕೋಟ್ಯಾಂತರ ವರ್ಷಗಳಲ್ಲಿ ಕಲ್ಲಾಗಿ ಪರಿವರ್ತನೆಯಾದವು. ಈ ಪ್ರಕ್ರಿಯೆಯಲ್ಲಿ ಮರದಕೋಶಗಳು ಕಬ್ಬಿಣ ಮತ್ತು ಸಿಲಿಕಾನ್‌ದಿಂದ ಭರ್ತಿಯಾಗುತ್ತವೆ. ಇದು ಮರಕ್ಕೆ ಗಾಢ ಕಂದು, ಕೆಂಪು ಅಥವಾ ಕಪ್ಪು ಬಣ್ಣವನ್ನು ನೀಡುತ್ತದೆ. ನ್ಯೂಜಿಲೆಂಡ್‌ನ ಕೊರೂಮಂಡಲ್‌  ಪೆನಿನ್ಸುಲಾ ಮತ್ತು ಕ್ಯೂರಿಯಾ ಬೇ ಮುಂತಾದ ಪ್ರದೇಶಗಳಲ್ಲಿ ಈ ಪಳೆಯುಳಿಕೆಗಳು ಹೆಚ್ಚಾಗಿ ಕಂಡು ಬರುತ್ತವೆ. ಜ್ವಾಲಮುಖಿ ಚಟುವಟಿಕೆಗಳ ಸಮಯದಲ್ಲಿ ಮರಗಳಿವೆ ಮಣ್ಣಿನಲ್ಲಿ ಹೂತು ಹೋಗಿ ನಂತರ ಖನಿಜಯುಕ್ತ  ನೀರು ಮರದ ಕೋಶಗಳಲ್ಲಿ ಸಂಚರಿಸಿ, ಸಾವಯವ ವಸ್ತುಗಳನ್ನು ಸಿಲಿಕಾ, ಕ್ಯಾಲ್ಸೈಡ್‌ ಮತ್ತು ಕಬ್ಬಿಣದ ಆಕ್ಸೈಡ್‌ಗಳೊಂದಿಗೆ ಬದಲಾಯಿಸಿತು. ಮರದಲ್ಲಿನ ಕಬ್ಬಿಣದ ಅಂಶವು ಹೆಚ್ಚಾಗಿ ಹೆಮಟೈಟ್‌ ಅಥವಾ ಗೋಥೈಟ್‌ ರೂಪದಲ್ಲಿದ್ದು, ಇದು ಕಡು ಕಂದು ಅಥವಾ ಕಪ್ಪು ಬಣ್ಣದ, ಗಟ್ಟಿಯಾದ ಸಾಂದ್ರವಾದ ಕೋರ್‌ (Core) ಅನ್ನು ರೂಪಿಸುತ್ತದೆ.
ಪಳವಳಿಕೆಗಳು ಮರದ ಮೂಲ ರಚನೆಯನ್ನು ಹಾಗೆ ಉಳಿಸಿಕೊಂಡಿರುತ್ತದೆ. ಕೆಲವೊಮ್ಮೆ ಈ ಮರಗಳು ಅತೀಗಟ್ಟಿಯಾಗಿ, ಕಲ್ಲಿದ್ದಲು ಹಾಸುಗಳಲ್ಲಿನ ಮಣ್ಣಿನ ಕಬ್ಬಿಣದ ನೊಡುಲ್ಯ್‌ನಲ್ಲಿ ಕಂಡುಬರುತ್ತವೆ.
ಡಿಕ್ಕೆಟ್‌ (Al, Si2o5(OH4)) ಒಂದು ರೀತಿಯ ಜೇಡಿಮಣ್ಣಿನ ಖನಿಜ ಆಗಿದ್ದು ಇದು ಹೆಚ್ಚಾಗಿ ಜಲೋಷ್ಟೇಯ ಪ್ರಕ್ರಿಯೆಗಳಲ್ಲಿ ಅಥವಾ ಹೂತು ಹೋದ ಮರಗಳಸುತ್ತಲಿನ ವಾತಾವರಣದಲ್ಲಿ ಕಂಡುಬರುತ್ತದೆ. ಪೆಟ್ರಾಪೇಡ್‌ ಮರದ ಸುತ್ತ ಅಥವಾ ಅದರ ಕುಳಿಗಳಲ್ಲಿ ಡಿಕೈಟ್‌ ಕಬ್ಬಿಣದೊಂದಿಗೆ ಸೇರಿಕೊಂಡು ಬಣ್ಣ ಮತ್ತು ರಚನೆಯನ್ನು ಪ್ರಭಾವಿಸುತ್ತದೆ.
ಈ ಪಳೆಯುಳಿಕೆಗಳು ಸುಮಾರು 170 ಮಿಲಿಯನ್‌ ವರ್ಷಗಳಷ್ಟು ಹಳೆಯದಾಗಿದ್ದು, ಗೊಂಡಾನಾ ಸೂಪರ್‌ ಕಾಂಟಿನೆಂಟ್‌ನ ಅವಳೇಷಗಳಾಗಿವೆ.
ನ್ಯೂಜಿಲೆಂಡ್‌ನ ಕಬ್ಬಿಣಯುಕ್ತ ಪಳಿಯುಳಿಕೆಗಳು ಜ್ವಾಲ್ವಾಮುಖಿ ಪ್ರದೇಶಗಳಲ್ಲಿನ ಪ್ರಾಚೀನ ಇತಿಹಾಸವನ್ನು ಹೇಳುತ್ತವೆ. ಕಬ್ಬಿಣ ಆಕ್ಸೈಡ್‌ಗಳು ಮತ್ತು ಡಿಕೈಟ್‌ ನಂತದ ಖನಿಜಗಳು ಮರವನ್ನು ಪೆಟ್ರಿಪೈಡ್‌ ಮಾಡಿ, ಅವುಗಳನ್ನು ಗಟ್ಟಿಯಾದ ಕಲ್ಲುಗಳನ್ನಾಗಿ ಪರಿವರ್ತಿಸಿವೆ. ಇದು ಭೂಮಿಯ ಇತಿಹಾಸವನ್ನು ಅರ್ಥಮಾಡಿಕೊಳ್ಳಲು ಸಹಾಯ ಮಾಡುತ್ತದೆ.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now
🏫 ಅಡ್ಮಿಷನ್ ಓಪನ್
🔒

ಇಂಡಿಯನ್ ಇಂಟರ್ ನ್ಯಾಷನಲ್ ಸ್ಕೂಲ್

ಸ್ವಾಗತ...