ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಶೂಗಳಿಗೆ ಸಂಬಂಧಿಸಿದ ಕೆಲವು ವಿಷಯಗಳನ್ನು ಕಾಳಜಿ ವಹಿಸಿದರೆ, ಅದು ನಿಮ್ಮ ಅದೃಷ್ಟವನ್ನು ಹೆಚ್ಚಿಸಬಹುದು. ವಾಸ್ತು ಶಾಸ್ತ್ರದಲ್ಲಿದ್ದು, ಚಪ್ಪಲಿಯನ್ನು ಎಲ್ಲಿ ಹೇಗೆ ಇಡಬೇಕು ಎಂಬ ಕುರಿತು ಕೆಲ ನಿಯಮಗಳನ್ನು ಇಲ್ಲಿ ವಿವರಿಸಲಾಗಿದೆ. ಪಾದರಕ್ಷೆ ಕುರಿತು ಏನೆಲ್ಲಾ ವಾಸ್ತು ಸಲಹೆಗಳು ಇವೆ? ಎಂಬಿತ್ಯಾದಿ ಮಾಹಿತಿಯನ್ನು ತಿಳಿದುಕೊಳ್ಳೋಣ
ಅಮವಾಸ್ಯ, ಮಂಗಳವಾರ, ಶನಿವಾರ ಮತ್ತು ಗ್ರಹಣ ದಿನಗಳಲ್ಲಿ ಪಾದರಕ್ಷೆಗಳನ್ನು ಖರೀದಿಸುವುದನ್ನು ನಿಷೇಧಿಸಲಾಗಿದೆ. ಈ ದಿನಗಳಲ್ಲಿ, ನಕಾರಾತ್ಮಕ ಗ್ರಹಗಳ ಶಕ್ತಿಯು ಹೆಚ್ಚು ಸಕ್ರಿಯವಾಗಿರುತ್ತದೆ, ಇದು ಮನೆಯಲ್ಲಿ ಆರ್ಥಿಕ ತೊಂದರೆಗಳು, ಜಗಳಗಳು ಮತ್ತು ಆರೋಗ್ಯ ಸಮಸ್ಯೆಗಳನ್ನು ತರಬಹುದು. ಚಪ್ಪಲಿ ಶನಿ ಗ್ರಹದೊಂದಿಗೆ ಸಂಪರ್ಕ ಹೊಂದಿರುತ್ತೆ. ಯಾರು ಶನಿ ದೋಷದಿಂದ ಬಳಲುತ್ತಿರುತ್ತಾರೋ, ಅವರು ಚಪ್ಪಲಿ ದಾನ ಮಾಡುವುದೊಳಿತು ಎಂದು ಹೇಳಲಾಗುತ್ತದೆ.
ವಾಸ್ತು ಶಾಸ್ತ್ರದ ಪ್ರಕಾರ, ಚಪ್ಪಲಿಗಳನ್ನು ಮನೆಯ ನೈಋತ್ಯ (South-West) ಅಥವಾ ಪಶ್ಚಿಮ (West) ದಿಕ್ಕಿನಲ್ಲಿರುವ ಮುಚ್ಚಿದ ಸ್ಟ್ಯಾಂಡ್ನಲ್ಲಿ ಇಡುವುದು ಅತ್ಯುತ್ತಮ. ಈಶಾನ್ಯ (North-East) ಅಥವಾ ಪೂರ್ವ (East) ದಿಕ್ಕಿನಲ್ಲಿ ಚಪ್ಪಲಿ ಇಡಬೇಡಿ, ಏಕೆಂದರೆ ಇದು ಆರ್ಥಿಕ ನಷ್ಟಕ್ಕೆ ಕಾರಣವಾಗಬಹುದು. ಮುಖ್ಯ ಬಾಗಿಲಿನ ಬಳಿ ಚಪ್ಪಲಿ ರಾಶಿ ಹಾಕದಿರುವುದು, ಚಪ್ಪಲಿಗಳನ್ನು ಅಸ್ತವ್ಯಸ್ತವಾಗಿ ಅಥವಾ ತಲೆಕೆಳಗಾಗಿ ಇಡದಿರುವುದು ಉತ್ತಮ
ಚಪ್ಪಲಿಗಳನ್ನು ತಲೆಕೆಳಗಾಗಿ ಇಡಬೇಡಿ (ಶನಿ ದೋಷ, ಅಶಾಂತಿ). ಹರಿದ ಅಥವಾ ಹಳೆಯ ಚಪ್ಪಲಿಗಳನ್ನು ಮನೆಯಲ್ಲಿ ಇಡಬೇಡಿ, ಇದು ಋಣಾತ್ಮಕ ಶಕ್ತಿಯನ್ನು ಹೆಚ್ಚಿಸುತ್ತದೆ. ಬೇರೆಯವರು ಬಳಸಿದ ಚಪ್ಪಲಿ ಅಥವಾ ಶೂಗಳನ್ನು ಧರಿಸಬೇಡಿ, ಇದು ರಾಹು/ಶನಿ ದೋಷಕ್ಕೆ ಕಾರಣವಾಗಬಹುದು.
ಉಡುಗೊರೆಯಾಗಿ ಕೊಟ್ಟ ಶೂಗಳು ಮತ್ತು ಚಪ್ಪಲಿಗಳನ್ನು ಎಂದಿಗೂ ಧರಿಸಬೇಡಿ. ಎಷ್ಟೋ ಸಲ ಮನೆ ಮಂದಿ ಒಬ್ಬರಿಗೊಬ್ಬರು ಶೂ, ಚಪ್ಪಲಿ ಗಿಫ್ಟ್ ಕೊಡ್ತಾರೆ. ಆದರೆ ಹೀಗೆ ಮಾಡುವುದರಿಂದ ಕೊಡುವವರಿಗೂ ಮತ್ತು ಸ್ವೀಕರಿಸುವವರಿಗೂ ಹೆಚ್ಚು ತೊಂದರೆ ಉಂಟಾಗುತ್ತದೆ ಎಂದು ಹೇಳಲಾಗುತ್ತದೆ. ಹಾಗಾಗಿ, ಯಾರಿಗೂ ಸಹ ಪಾದರಕ್ಷೆಗಳನ್ನು ಉಡುಗೊರೆಯಾಗಿ ನೀಡಬೇಡಿ. ಹೀಗೆ ಮಾಡುವುದರಿಂದ ಜಾತಕದಲ್ಲಿ ಶನಿಯ ಸ್ಥಾನ ಹದಗೆಡುತ್ತದೆ ಮತ್ತು ಶನಿದೋಷವನ್ನು ಎದುರಿಸಬೇಕಾಗಬಹುದು.
ಊಟ ಮಾಡುವಾಗ ಶೂ ಮತ್ತು ಚಪ್ಪಲಿಗಳನ್ನು ಎಂದಿಗೂ ಧರಿಸಬೇಡಿ. ಹಾಗೆ ಮಾಡುವುದರಿಂದ ನಿಮ್ಮ ಜೀವನದ ಮೇಲೆ ಋಣಾತ್ಮಕ ಪರಿಣಾಮ ಬೀರುತ್ತದೆ. ನೀವು ಮನೆಯಿಂದ ಹೊರಗೆ ಎಲ್ಲೋ ಊಟ ಮಾಡುತ್ತಿದ್ದರೆ, ಮೊದಲು ಶೂ ಮತ್ತು ಚಪ್ಪಲಿಗಳನ್ನು ತೆಗೆದು ಊಟ ಮಾಡಿದರೆ ಪ್ರಯೋಜನಕಾರಿ.

















