Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ಬಳ್ಳಾರಿ ಶಾಸಕ ಭರತ್ ರೆಡ್ಡಿ ಸೇರಿ 50 ಜನ ದುಬೈನಲ್ಲಿ ಲಾಕ್..!

---Advertisement---

ಬೆಂಗಳೂರು: ದುಬೈನಲ್ಲಿ ಈಗ ಭಯದ ವಾತಾವರಣ ನಿರ್ಮಾಣವಾಗಿದೆ. ಇಸ್ರೆಲ್ – ಇರಾನ್ ಉದ್ವಿಗ್ನತೆಯಿಂದ ದುಬೈನ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲೂ ವಿಮಾನಗಳ ಹಾರಾಟ ಸ್ಥಗಿತಗೊಂಡಿದೆ. ಇದರಿಂದ ದುಬೈಗೆ ಹೋದವರು ಸಹ ಮರಳಿ ಬರುವುದಕ್ಕೆ ಆಗ್ತಾ ಇಲ್ಲ. ಸಾಕಷ್ಟು ಜನ ಕನ್ನಡಿಗರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಬಳ್ಳಾರಿಯ ಶಾಸಕ ಭರತ್ ರೆಡ್ಡಿ ಅವರು ಕೂಡ ದುಬೈನಲ್ಲಿ ಸಿಲುಕಿದ್ದಾರೆ. ಭರತ್ ರೆಡ್ಡಿ ಸೇರಿದಂತೆ 50ಕ್ಕುಇ ಹೆಚ್ಚು ಮಂದಿ ಸಿಲುಕಿದ್ದಾರೆ. ಕನ್ನಡಿಗರನ್ನು ಸೇಫಾಗಿ ಕರೆತರುವುದಕ್ಕೆ ವ್ಯವಸ್ಥೆ ಮಾಡುವಂತೆ ಪ್ರಧಾನಿ ಮೋದಿ ಅವರಿಗೆ ಪತ್ರ ಕೂಡ ಬರೆಯಲಾಗಿದೆ.

ದುಬೈನಲ್ಲಿ ಭರತ್ ರೆಡ್ಡಿ ಮಾತ್ರವಲ್ಲ ಕುಟುಂಬದವರು ಸಿಲುಕಿದ್ದಾರೆ. ಕಳೆದ ವಾರವಷ್ಟೇ ಇಡೀ ಕುಟುಂಬ ದುಬೈಗೆ ಪ್ರವಾಸಕ್ಕೆಂದು ಹೋಗಿತ್ತು. ಆದರೆ ವಿಮಾನಗಳು ರದ್ದಾಗಿರುವ ಕಾರಣ ಎಲ್ಲರೂ ದುಬೈನಲ್ಲಿಯೇ ಉಳಿದುಕೊಳ್ಳುವ ಪರಿಸ್ಥಿತಿ ಬಂದಿದೆ. ಪ್ರವಾಸ ಮುಗಿಸಿ, ಶನಿವಾರವಷ್ಟೇ ವಿಮಾನ ನಿಲ್ದಾಣಕ್ಕೆ ಬಂದಿದ್ದಾರೆ. ಆದರೆ ವಿಮಾನ ಕ್ಯಾನ್ಸಲ್ ಆಗಿರುವ ಕಾರಣ, ಟರ್ಮಿನಲ್ ಒಳಗೂ ಪ್ರವೇಶವನ್ನ ನಿರಾಕರಿಸಿದ್ದಾರೆ.

ಇನ್ನು ಬೇಗ ಬಂದಿದ್ದರೆ, ಟರ್ಮಿನಲ್ ಒಳಗೆ ಪ್ರವೇಶ ಮಾಡಿದ್ದರೆ, ಅಲ್ಲಿಯೇ ಉಳಿದುಕೊಳ್ಳುವ ವ್ಯವಸ್ಥೆಯನ್ನಾದರೂ ಮಾಡುತ್ತಿದ್ದರು. ಆದರೆ ಹೊರಗೆ ನಿಲ್ಲಬೇಕಾದ ಪರಿಸ್ಥಿತಿ ಇದೆ ಎಂದು ಅಲ್ಲಿನ ಪ್ರಯಾಣಿಕರೊಬ್ಬರು ಕಣ್ಣೀರು ಹಾಕಿದರು. ಇನ್ನು ವಿಮಾನಗಳ ಟಿಕೆಟ್ ಬೆಲೆಯಂತೂ 15-20 ಸಾವಿರದ ತನಕ ಏರಿಕೆಯಾಗಿದೆ. ವಿಮಾನ ನಿಲ್ದಾಣದಲ್ಲಿಯೇ ನಿಂತ ಕನ್ನಡಿಗರು ಆತಂಕವನ್ನ ವ್ಯಕ್ತಪಡಿಸುತ್ತಾ ಇದ್ದಾರೆ. ಡ್ರೋನ್ ಪ್ರತಾಪ್ ಕೂಡ ಒಂದು ವಿಡಿಯೋ ಮಾಡಿದ್ದರು. ಅಲ್ಲಿದ್ದ ಕನ್ನಡಿಗರಿಗೆ ಧೈರ್ಯ ಹೇಳಿ, ಸಮಾಧಾನ ಮಾಡಿರುವ ವಿಡಿಯೋ ಅದಾಗಿತ್ತು. ಜೀವ ಉಳಿದರೆ ಸಾಕು ಎನ್ನುತ್ತಿದ್ದಾರೆ ವಿಮಾನ ನಿಲ್ದಾಣದಲ್ಲಿ ತಂಗಿರುವ ಪ್ರಯಾಣಿಕರು.

ಸಾರ್ವಜನಿಕ ಕುಂದುಕೊರತೆ ವಿಭಾಗ : ನಿಮ್ಮ ಧ್ವನಿ - ನಮ್ಮ ವೇದಿಕೆ

ನಿಮ್ಮ ಊರಿನ ಸಮಸ್ಯೆಗಳು ಇನ್ನು ಮುಂದೆ ಕೇವಲ ಚರ್ಚೆಯಾಗಬಾರದು, ಅವುಗಳಿಗೆ ಪರಿಹಾರ ಸಿಗಬೇಕು.

ವರದಿ ಮಾಡುವುದು ಹೇಗೆ?

  • ನಿಮ್ಮ ಸುತ್ತಮುತ್ತಲಿನ ರಸ್ತೆ, ನೀರು, ವಿದ್ಯುತ್ ಸಮಸ್ಯೆಗಳ ಫೋಟೋ, ವಿಡಿಯೋ ಅಥವಾ ಮಾಹಿತಿ ನಮಗೆ ಕಳುಹಿಸಿ.
ವಾಟ್ಸಪ್ ಮಾಡಿ: 90369 74702

ನಾವು ಏನು ಮಾಡುತ್ತೇವೆ?

  • ನೀವು ಕಳುಹಿಸಿದ ವರದಿಗಳನ್ನು suddione.com ನಲ್ಲಿ ಪ್ರಕಟಿಸುತ್ತೇವೆ.
  • ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದು ಪರಿಹಾರಕ್ಕಾಗಿ ಒತ್ತಾಯಿಸುತ್ತೇವೆ.
  • ನಿಮ್ಮೂರಿನ ಅಭಿವೃದ್ಧಿಗೆ ನಿಮ್ಮೊಂದಿಗೆ ಧ್ವನಿಗೂಡಿಸುತ್ತೇವೆ.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now