22 ವರ್ಷದ ಯುವಕ ಮತ್ತು ಆತನ ಗೆಳತಿ ಬೆಂಗಳೂರಿನಿಂದ ಪ್ರಯಾಣಿಸಲು ಖಾಸಗಿ ಸ್ಲೀಪರ್ ಬಸ್‌ನಲ್ಲಿ ಡಬಲ್ ಬರ್ತ್‌ಗಳನ್ನು ಬುಕ್ ಮಾಡಿದ್ದರು. ಆದರೆ ಬಸ್ ಹತ್ತಿದ ನಂತರ ಕಂಡಕ್ಟರ್ ಇವರಿಬ್ಬರನ್ನು ಒಟ್ಟಿಗೆ ಕುಳಿತುಕೊಳ್ಳದಂತೆ ತಡೆದಿದ್ದಾರೆ. ಇಬ್ಬರೂ ವಯಸ್ಕರಾಗಿದ್ದರೂ ಮತ್ತು ಅಧಿಕೃತ ಟಿಕೆಟ್ ಹೊಂದಿದ್ದರೂ, ಕಂಡಕ್ಟರ್ ಇಬ್ಬರನ್ನು ಪ್ರತ್ಯೇಕ ಸೀಟುಗಳಲ್ಲಿ ಮಲಗುವಂತೆ ಒತ್ತಾಯಿಸಿದ್ದಾರೆ.ನಿಮ್ಮ ಪೋಷಕರಿಗೆ ಫೋನ್ ಮಾಡಿ” ಇಲ್ಲವೆಂದರೆ “ಪೊಲೀಸರಿಗೆ ದೂರು ನೀಡುತ್ತೇವೆ” ಎಂದು ಕಂಡಕ್ಟರ್ ಬೆದರಿಕೆ ಹಾಕಿದ್ದರಿಂದ ಆತಂಕಗೊಂಡ ಜೋಡಿ, ವಿವಾದ ಬೇಡವೆಂದು ದೂರ ಕುಳಿತಿದ್ದಾರೆ.
ಇನ್ನು ಮತ್ತೊಂದೆಡೆ ಆಂಧ್ರಪ್ರದೇಶದ ಈ ಪ್ರೇಮಿಗಳು ಹೈದರಾಬಾದ್‌ನಲ್ಲಿ ವಾಸಿಸುತ್ತಿದ್ದರು. ಹೈದರಾಬಾದ್‌ನಿಂದ ಬಂದರ್‌ಗೆ ಹೋಗಲು ಖಾಸಗಿ ಟ್ರಾವೆಲ್ಸ್‌ಗೆ ಸೇರಿದ ಎಸಿ ಸ್ಲೀಪರ್ ಬಸ್‌ನಲ್ಲಿ ಪಕ್ಕಪಕ್ಕದ ಸೀಟುಗಳನ್ನು ಬುಕ್ ಮಾಡಿದ್ದರು.
ಬಸ್ ಹತ್ತುವಾಗ ಒಬ್ಬ ಹುಡುಗ ಮತ್ತು ಒಬ್ಬ ಹುಡುಗಿ ಪಕ್ಕಪಕ್ಕದ ಸೀಟಿನಲ್ಲಿ ಮಲಗಿ ಪ್ರಯಾಣಿಸಲು ಮುಂದಾದಾಗ ಡ್ರೈವರ್ ಅಡ್ಡಿಪಡಿಸಿದರು. ಆದರೆ ಇವರಿಬ್ಬರೂ ಒಟ್ಟಿಗೇ ಇರಬೇಕೆಂದು ಪಟ್ಟು ಹಿಡಿದರು, ಆದರೆ ಡ್ರೈವರ್ ನಿಯಮ ಮೀರಿ ಅವಕಾಶ ನೀಡಲು ನಿರಾಕರಿಸಿದರು. ಈ ವೇಳೆ ಡ್ರೈವರ್ ಮತ್ತು ಜೋಡಿಯ ನಡುವೆ ಜೋರಾದ ಗಲಾಟೆ ನಡೆಯಿತು. ಬಸ್ಸಿನಲ್ಲಿದ್ದ ಇತರ ಪ್ರಯಾಣಿಕರು ಡ್ರೈವರ್ ಪರವಾಗಿ ಮಾತನಾಡಿದ್ದರಿಂದ ಬೇರೆ ದಾರಿಯಿಲ್ಲದೆ ಜೋಡಿ ದೂರದೂರದ ಸೀಟುಗಳಲ್ಲಿ ಕುಳಿತು ಪ್ರಯಾಣ ಬೆಳೆಸಿದರು.
ಮಚಿಲಿಪಟ್ಟಣಂ ಬಸ್ ನಿಲ್ದಾಣಕ್ಕೆ ಬರುತ್ತಿದ್ದಂತೆ ಮತ್ತೆ ಗಲಾಟೆ ಶುರು ಮಾಡಿದರು. ಯುವಕ, ಬಸ್ ಡ್ರೈವರ್ ಮೇಲೆ ಹಲ್ಲೆ ಮಾಡಿದ್ದಾನೆ. ಚಿಲಕಪುಡಿ ಸೆಂಟರ್ ಬಳಿ ಡ್ರೈವರ್‌ಗೆ ಹೊಡೆದು ಅಲ್ಲಿಂದ ಪರಾರಿಯಾಗಿದ್ದಾರೆ. ಈ ಕುರಿತು ಬಸ್ ಡ್ರೈವರ್ ಪೊಲೀಸ್‌ಗೆ ದೂರು ನೀಡಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.
ಸಾರ್ವಜನಿಕ ಕುಂದುಕೊರತೆ ವಿಭಾಗ : ನಿಮ್ಮ ಧ್ವನಿ - ನಮ್ಮ ವೇದಿಕೆ
ನಿಮ್ಮ ಊರಿನ ಸಮಸ್ಯೆಗಳು ಇನ್ನು ಮುಂದೆ ಕೇವಲ ಚರ್ಚೆಯಾಗಬಾರದು, ಅವುಗಳಿಗೆ ಪರಿಹಾರ ಸಿಗಬೇಕು.
ವರದಿ ಮಾಡುವುದು ಹೇಗೆ?
- ನಿಮ್ಮ ಸುತ್ತಮುತ್ತಲಿನ ರಸ್ತೆ, ನೀರು, ವಿದ್ಯುತ್ ಸಮಸ್ಯೆಗಳ ಫೋಟೋ, ವಿಡಿಯೋ ಅಥವಾ ಮಾಹಿತಿ ನಮಗೆ ಕಳುಹಿಸಿ.
ನಾವು ಏನು ಮಾಡುತ್ತೇವೆ?
- ನೀವು ಕಳುಹಿಸಿದ ವರದಿಗಳನ್ನು suddione.com ನಲ್ಲಿ ಪ್ರಕಟಿಸುತ್ತೇವೆ.
- ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದು ಪರಿಹಾರಕ್ಕಾಗಿ ಒತ್ತಾಯಿಸುತ್ತೇವೆ.
- ನಿಮ್ಮೂರಿನ ಅಭಿವೃದ್ಧಿಗೆ ನಿಮ್ಮೊಂದಿಗೆ ಧ್ವನಿಗೂಡಿಸುತ್ತೇವೆ.











