ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಕೇಸಲ್ಲಿ ಆರೋಪಿಗಳು ಜೈಲುಬಪಾಲಾಗಿದ್ದಾರೆ. ಸಾಕ್ಷಿಗಳ ಟ್ರಯಲ್ ನಡೆಯುತ್ತಾ ಇದ್ದು, ಆರೋಪಿಗಳು ಸಹ ಆತಂಕದಲ್ಲಿಯೇ ಇದ್ದಾರೆ. ಇದರ ನಡುವೆ ಮಹತ್ವದ ಟ್ವಿಸ್ಟ್ ಒಂದು ಸಿಕ್ಕಿದೆ. ಅದುವೆ ತನಿಖಾಧಿಕಾರಿಯೊಬ್ಬರು ಯಡವಟ್ಟು ಮಾಡಿರೋದು. ತನಿಖಾಧಿಕಾರಿ ಗಿರೀಶ್ ನಾಯಕ್ ವಿರುದ್ಧ ಗಂಭೀರ ಆರೋಪವೊಂದು ಕೇಳಿ ಬಂದಿದೆ.
ರೇಣುಕಾಸ್ವಾಮಿ ಕೊಲೆ ಕೇಸ್ ಆರೋಪಿಗಳನ್ನು ಟೈಲ್ಸ್ ಇರುವ ಕ್ಯಾಬಿನ್ ನಲ್ಲಿ ಫೋಟೋ ತೆಗೆಯಲಾಗಿತ್ತಂತೆ. ಆದರೆ ಕಾಮಾಕ್ಷಿ ಪಾಳ್ಯದಲ್ಲಿ ಆ ರೀತಿಯ ಟೈಲ್ಸ್ ಇಲ್ಲ ಎಂದು ಹೇಳಲಾಗ್ತಾ ಇದೆ. ಈ ಸಂಬಂಧ ಐಒ ವಿರುದ್ಧ ಕ್ರಿಮಿನಲ್ ಕೇಸ್ ದಾಖಲಿಸುವುದಕ್ಕೆ ಮುಂದಾಗಿದ್ದಾರೆ. ಸಿಸಿಹೆಚ್ ಕೋರ್ಟ್ ಗೆ ವಕೀಲ ಡಿಎಸ್ ಸುದನ್ವ ಅರ್ಜಿಯನ್ನ ಸಲ್ಲಿಕೆ ಮಾಡಿದ್ದಾರೆ. ಅರ್ಜಿ ಸಲ್ಲಿಕೆ ಮಾಡಿ ಕೋರ್ಟ್ ನಲ್ಲಿ ವಕೀಲ ಡಿಎಸ್ ಸುದನ್ವ ವಾದವನ್ನು ಮಂಡನೆ ಮಾಡಿದ್ದಾರೆ. ಪೊಲೀಸರಿಂದ ಮೊಬೈಲ್ ಮಹಜರು ಮಾಡುವಂತೆ ಸಂದರ್ಭದಲ್ಲಿ ಈ ಯಡವಟ್ಟನ್ನ ಮಾಡಿಕೊಂಡಿದ್ದಾರೆ.
ಕಾಮಾಕ್ಷಿಪಾಳ್ಯ ಪೊಲೀಸ್ ಠಾಣೆಯಲ್ಲಿ ಮಹಜರು ಮಾಡಿದ್ದಾಗಿ ಪೊಲೀಸರು ಹೇಳಿದ್ದಾರೆ. ಕೋರ್ಟ್ ಗೆ ಮಹಜರು ಕಾಪಿಯನ್ನು ಸಲ್ಲಿಕೆ ಮಾಡಿದ್ದಾರೆ. ಆರೋಪಿಗಳನ್ನ ಟೈಲ್ಸ್ ಹಾಕಿದ ಕ್ಯಾಬಿನ್ ನಲ್ಲಿ ಫೋಟೋಗಳನ್ನ ತೆಗೆಯಲಾಗಿತ್ತು. ಆದರೆ ಕಾಮಾಕ್ಷಿಪಾಳ್ಯ ಠಾಣೆಯಲ್ಲಿ ಟೈಲ್ಸ್ ಹಾಕಿರುವ ಕೋಣೆಯೇ ಇಲ್ಲ ಅಂತ ವಾದವನ್ನು ವಕೀಲರು ಮಂಡಿಸಿದ್ದಾರೆ. ಈ ಸಂಬಂಧ ಸ್ಥಳ ಪರಿಶೀಲನೆ ನಡೆಸಿ ವರದಿಯನ್ನು ನೀಡುವುದಕ್ಕೆ ಕೋರ್ಟ್ ಆದೇಶವನ್ನ ನೀಡಿದೆ. ವಕೀಲರ ಎದುರೇ ಇದರ ವಿಚಾರಣೆ ನಡೆಯಲಿದೆ. ಅಲ್ಲಿರೋದು ಗ್ರೇ ಟೈಲ್ಸ್. ಇದರ ಅರ್ಥ ಏನು ಅಂದ್ರೆ ಆರೋಪಿಗಳನ್ನ ಸುಳ್ಳಾಗಿ ಸಿಗಿಸಬೇಕು ಅಂತ ಸೃಷ್ಟಿ ಮಾಡಿರೋದು ಅಂತ ವಕೀಲ ಸುದನ್ವ ತಿಳಿಸಿದ್ದಾರೆ.

ಸಾರ್ವಜನಿಕ ಕುಂದುಕೊರತೆ ವಿಭಾಗ : ನಿಮ್ಮ ಧ್ವನಿ - ನಮ್ಮ ವೇದಿಕೆ
ನಿಮ್ಮ ಊರಿನ ಸಮಸ್ಯೆಗಳು ಇನ್ನು ಮುಂದೆ ಕೇವಲ ಚರ್ಚೆಯಾಗಬಾರದು, ಅವುಗಳಿಗೆ ಪರಿಹಾರ ಸಿಗಬೇಕು.
ವರದಿ ಮಾಡುವುದು ಹೇಗೆ?
- ನಿಮ್ಮ ಸುತ್ತಮುತ್ತಲಿನ ರಸ್ತೆ, ನೀರು, ವಿದ್ಯುತ್ ಸಮಸ್ಯೆಗಳ ಫೋಟೋ, ವಿಡಿಯೋ ಅಥವಾ ಮಾಹಿತಿ ನಮಗೆ ಕಳುಹಿಸಿ.
ನಾವು ಏನು ಮಾಡುತ್ತೇವೆ?
- ನೀವು ಕಳುಹಿಸಿದ ವರದಿಗಳನ್ನು suddione.com ನಲ್ಲಿ ಪ್ರಕಟಿಸುತ್ತೇವೆ.
- ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದು ಪರಿಹಾರಕ್ಕಾಗಿ ಒತ್ತಾಯಿಸುತ್ತೇವೆ.
- ನಿಮ್ಮೂರಿನ ಅಭಿವೃದ್ಧಿಗೆ ನಿಮ್ಮೊಂದಿಗೆ ಧ್ವನಿಗೂಡಿಸುತ್ತೇವೆ.

















