Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ದಲಿತ ಸಿಎಂ ಕೂಗು : ಸಿದ್ದರಾಮಯ್ಯ ಪರವಾಗಿಯೇ ಬ್ಯಾಟ್ ಬೀಸಿದ ಜಿ ಪರಮೇಶ್ವರ್

---Advertisement---

ಬೆಂಗಳೂರು: ಕಾಂಗ್ರೆಸ್ ಸರ್ಕಾರದಲ್ಲಿ ಮುಖ್ಯಮಂತ್ರಿ ಬದಲಾವಣೆಯ ಕೂಗು ದೊಡ್ಡ ಮಟ್ಟದಲ್ಲಿಯೇ ಕೇಳಿ ಬರ್ತಿದೆ. ಡಿಕೆ ಶಿವಕುಮಾರ್ ಬಣದವರು ಡಿಕೆಶಿಗೆ ಜೈಕಾರ ಹಾಕಿ, ನ್ಯಾಯ ಸಿಗಬೇಕು ಅಂದ್ರೆ, ಸಿದ್ದರಾಮಯ್ಯ ಬಣದವರು ಸಿದ್ದರಾಮಯ್ಯ ಅವರೇ ಐದು ವರ್ಷ ಸಿಎಂ ಅಂತಾರೆ. ಈ ಗುದ್ದಾಟದ ನಡುವೆ ಆಗಾಗ ಚಾಲ್ತಿಗೆ ಬರೋದೆ ದಲಿತ ಸಿಎಂ ಕೂಗು. ಈ ಬಾರಿಯು ದಲಿತ ಸಿಎಂ ಕೂಗು ಕೇಳಿಸಿದೆ. ಆದರೆ ಇದಕ್ಕೆ ಗೃಹ ಜಿ ಪರಮೇಶ್ವರ್ ಸೊಪ್ಪು ಹಾಕಿಲ್ಲ. ತಮ್ಮ ನಾಯಕರ ಪರವಾಗಿಯೇ ಮಾತನ್ನಾಡಿದ್ದಾರೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಾಮಾಜಿಕ ನ್ಯಾಯದ ಮೇಲೆ ಬದ್ಧರಾಗಿದ್ದಾರೆ. ಹಿಂದಿನಿಂದಲೂ ಕೂಡ ಸಾಮಾಜಿಕ ನ್ಯಾಯದ ಪರವಾಗಿದ್ದಾರೆ. ಅವರ ರಾಜಕೀಯದ ಅಡಿಪಾಯವೇ ಸಾಮಾಜಿಕ ನ್ಯಾಯ. ಹೊಸದಾಗಿ ಇವತ್ತು ಮಾಡುತ್ತಿಲ್ಲ ಎಂದಿದ್ದಾರೆ. ಇದೇ ವೇಳೆ ದಲಿತ ಸಿಎಂ ಕೂಗಿನ ಬಗ್ಗೆ ಮಾತನ್ನಾಡಿ, ಇದೆಲ್ಲಾ ವಿರೋಧ ಪಕ್ಷದವರು ಮಾಡುತ್ತಿರುವ ಕೆಲಸ.

ವಿರೋಧ ಪಕ್ಷಗಳು ತಮ್ಮ ವಿಚಾರಗಳನ್ನ ಮುಚ್ಚಿಟ್ಟುಕೊಳ್ಳಲು ಸುಮ್ಮನೆ ಆರೋಪಗಳನ್ನು ಮಾಡುತ್ತಿದ್ದಾರೆ. ಮುಖ್ಯಮಂತ್ರಿಗಳು ಆಡಳಿತ ಮಾಡುತ್ತಿಲ್ವಾ..? ಕಳೆದ ಹನ್ನೆರಡು ದಿನದಿಂದ ಬಜೆಟ್ ಕುರಿತು ವಿವಿಧ ಇಲಾಖೆಯ ಸಚಿವರು ಮತ್ತು ಅಧಿಕಾರಿಗಳೊಂದಿಗೆ ಚರ್ಚೆ ಮಾಡುತ್ತಿದ್ದಾರೆ. ಮುಖ್ಯಮಂತ್ರಿ ಕೂಗು ವಿಚಾರವನ್ನು ವಿರೋಧ ಪಕ್ಷದವರು ಸುಮ್ಮನೆ ಹೊರಗೆ ತರುತ್ತಿದ್ದಾರೆ. ದಲಿತ ಸಿಎಂ ಕಾಂಗ್ರೆಸ್ ಪಕ್ಷದವರೆ ಮಾಡಬೇಕು ಅಲ್ವಾ. ಇನ್ನ್ಯಾರು ಮಾಡುತ್ತಾರೆ. ಅಂತಹ ಸಂದರ್ಭ ಬಂದಾಗ ಹೈಕಮಾಂಡ್ ನಾಯಕರೇ ತೀರ್ಮಾನ ತೆಗೆದುಕೊಳ್ಳುತ್ತಾರೆ ಎಂದು ದಲಿತ ಸಿಎಂ ವಿಚಾರಕ್ಕೆ ಸ್ಪಷ್ಟನೆಯನ್ನ ನೀಡಿದ್ದಾರೆ. ಸದ್ಯಕ್ಕೆ ಸಿಎಂ ಬದಲಾವಣೆಯ ವಿಷಯದ ಜೊತೆಗೆ ದಲಿತ ಸಿಎಂ ಚರ್ಚೆ ಕೂಡ ಜೋರಾಗಿದೆ.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now
🏫 ಅಡ್ಮಿಷನ್ ಓಪನ್
🔒

ಇಂಡಿಯನ್ ಇಂಟರ್ ನ್ಯಾಷನಲ್ ಸ್ಕೂಲ್

ಸ್ವಾಗತ...