Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ಮದುವೆ ತಯಾರಿಯಲ್ಲಿ ಬ್ಯುಸಿಯಾದ ವಿಜಯ್ – ರಶ್ಮಿಕಾ : ಉದಯಪುರದಲ್ಲಿ ಓಡಾಟ

---Advertisement---

ರಶ್ಮಿಕಾ ಮಂದಣ್ಣ ಹಾಗೂ ವಿಜಯ್ ದೇವರಕೊಂಡ ಮದುವೆ ಫೆಬ್ರವರಿ 26 ಕ್ಕೆ ಶಾಸ್ತ್ರೋಕ್ತವಾಗಿ ಮದುವೆ ಆಗ್ತಾ ಇದ್ದಾರೆ. ಮದುವೆ ಕಾರ್ಡ್ ವೈರಲ್ ಆದ್ರೂ ಕೂಡ ಇಷ್ಟು ದಿನ ಬಾಯ್ಬಿಟ್ಟಿರಲಿಲ್ಲ. ಒಟ್ಟಿಗೆ ಪ್ರವಾಸಕ್ಕೆ ಹೋದಾಗಲೂ ಸತ್ಯ ಒಪ್ಪಿಕೊಂಡಿರಲಿಲ್ಲ. ಫೈನಲಿ ಎಲ್ಲರ ಪ್ರಶ್ನೆಗೆ ವಿಜಯ್ ಹಾಗೂ ರಶ್ಮಿಕಾ ಉತ್ತರ ನೀಡಿದ್ದಾರೆ. ಇಬ್ಬರು ಮದುವೆಯಾಗ್ತಿರುವ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿಯೇ ಹಾಕಿಕೊಂಡಿದ್ದಾರೆ. ಅವರಿಬ್ಬರ ಅಭಿಮಾನಿಗಳಂತು ತುಂಬಾನೇ ಖುಷಿ ಪಟ್ಟಿದ್ದಾರೆ. ಇಬ್ಬರ ವಿವಾಹವೂ ರಾಜಸ್ಥಾನದ ಉದಯಪುರದಲ್ಲಿ ಅದ್ದೂರಿಯಾಗಿ ನಡೆಯಲಿದೆ. ಈಗಾಗಲೇ ಅದಕ್ಕೆ ಬೇಕಾದ ತಯಾರಿಗಳು ನಡೆದಿವೆ.

ಇನ್ನು ವಿವಾಹ ಕಾರ್ಯಕ್ರಮಗಳು ಫೆಬ್ರವರಿ 24ರಿಂದಾನೇ ಆರಂಭವಾಗುತ್ತವೆ. ಹೀಗಾಗಿ ರಶ್ಮಿಕಾ ಹಾಗೂ ವಿಜಯ್ ದೇವರಕೊಂಡ, ಅವರ ಪೋಷಕರು, ಸಂಬಂಧಿಕರು, ಆಪ್ತರೆಲ್ಲರು ಇಂದೇ ರಾಜಸ್ತಾನಕ್ಕೆ ಆಗಮಿಸಿದ್ದಾರೆ. ವಿಜಯ್ ದೇವರಕೊಂಡ ಹಾಗೂ ರಶ್ಮಿಕಾ ಮಂದಣ್ಣ ಕಳೆದ ಕೆಲವು ದಿನಗಳಿಂದಾನೂ ಉದಯಪುರಕ್ಕೆ ಹೋಗಿ ಬಂದು ಮಾಡ್ತಿದ್ದಾರೆ. ಏರ್ಪೋರ್ಟ್ ನಲ್ಲಿ ಕ್ಯಾಮೆರಾ ಕಣ್ಣಿಗೆ ಇಬ್ಬರು ಬಿದ್ದಿದ್ದು, ಒಂದೇ ರೀತಿಯ ಉಡುಪುಗಳನ್ನ ಧರಿಸುವ ಮೂಲಕ ಗಮನ ಸೆಳೆದಿದ್ದಾರೆ. ಇವತ್ತು ಬಹಳ ಮುಖ್ಯವಾಗಿ ಇಬ್ಬರು ಸೂಟ್ ಥರದ ಡ್ರೆಸ್ ನಲ್ಲಿ ಗಮನ ಸೆಳೆದಿದ್ದಾರೆ.

ಇನ್ನು ಇವತ್ತೇ ಏರ್ಪೋರ್ಟ್ ನಲ್ಲಿ ಎರಡು ಕುಟುಂಬಸ್ಥರು ಕ್ಯಾಮೆರಾ ಕಣ್ಣಿಗೆ ಬಿದ್ದಿದ್ದಾರೆ. ವಿಜಯ್ ದೇವರಕೊಂಡ ಫ್ಯಾಮಿಲಿಯಲ್ಲಿ ಅವರ ತಂದೆ, ತಮ್ಮ ಆನಂದ್ ದೇವರಕೊಂಡ, ಹಾಗೇ ರಶ್ಮಿಕಾ ಮಂದಣ್ಣ ಅವರ ಕುಟುಂಬಸ್ಥರಾದ ತಾಯಿ ಸುಮನ್ ಮಂದಣ್ಣ, ತಂಗಿ ಸೈಮನ್ ಮಂದಣ್ಣ ಕೂಡ ಏರ್ಪೋರ್ಟ್ ನಲ್ಲಿ ಕಾಣಿಸಿಕೊಂಡಿದ್ದಾರೆ. ಭಾರೀ ಬಿಗಿ ಭದ್ರತೆಯಲ್ಲಿ ಇಬ್ಬರ ಮದುವೆ ನಡೆಯುತ್ತಿದೆ.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now