Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ಕನಕಪುರ ಶ್ರೀನಿವಾಸ್ ನಟರಾದ ದರ್ಶನ್,ಪುನೀತ್, ಪ್ರೇಮ್ ಬಗ್ಗೆ ಹೇಳಿದ್ದೇನು ?

---Advertisement---

ಕನಕಪುರ ಶ್ರೀನಿವಾಸ್ ಕಾಟನ್‌ಪೇಟೆಗೇಟ್ ಚಿತ್ರದ ಪ್ರೆಸ್ ಮೀಟ್ ಸಂದರ್ಭದಲ್ಲಿ ಡಿಕೆ ಶಿವಕುಮಾರ್, ಧ್ರುವ ಸರ್ಜಾ, ಎ.ಪಿ. ಅರ್ಜುನ್, ಜೋಗಿ ಪ್ರೇಮ್, ಪುನೀತ್ ರಾಜ್​ಕುಮಾರ್ ಸೇರಿದಂತೆ ಹಲವರ ವಿರುದ್ಧ ಅವರು ಅಶ್ಲೀಲವಾಗಿ ಮಾತನಾಡಿದ್ದರು.

ನನ್ನನ್ನು ಮೋಸ ಮಾಡಿದವರಲ್ಲಿ ಹಲವರು ಇಂದು ಜೈಲಿಗೆ ಹೋಗಿದ್ದಾರೆ. ಕೆಲವರು ಈಗ ಜೀವಂತವಾಗಿಲ್ಲ. ಸ್ಯಾಂಡಲ್‌ವುಡ್‌ಗೆ ಪುನೀತ್ ಎಂಬ ಹೀರೋ ಬರಲು ನಾನು ಕಾರಣ ಎಂದು ಎದೆತಟ್ಟಿಕೊಂಡು ಹೇಳುತ್ತೇನೆ. ರಾಜ್‌ಕುಮಾರ್ ಕುಟುಂಬದಿಂದ ಅಲ್ಲ, ಕನಕಪುರ ಶ್ರೀನಿವಾಸ್‌ನಿಂದ ಒಬ್ಬ ಹೀರೋ ಬಂದ. ಆದರೂ ನನಗೆ ಮೋಸ ಮಾಡಿದ್ರು. ಈಗ ಅವರು ಇದ್ದಾರಾ? ದೇವರು ಕರ್ಕೊಂಡ.! ನಾನು ಮೋಸಗಾರ ಎಂದು ಹೇಳಿದವರನ್ನು ದೇವರು ಮೇಲಕ್ಕೆ ಕರೆದುಕೊಂಡು ಹೋಗಿದ್ದಾನೆ. ಶ್ರೀನಿವಾಸ್‌ ಹೇಳಿದ್ದರು.

ಪ್ರೇಮ್‌ ಗಂಡಸಾದ್ರೆ, ಡೈರೆಕ್ಟರ್‌ ಆದ್ರೆ ನನ್ನ ಮುಂದೆ ಬಂದು ನಿಂತುಕೊಳ್ಳೋಕೆ ಹೇಳಿ.ಅವನಪ್ಪನಿಗೇ ಹುಟ್ಟಿದ್ರೆ ಬರೋಕೆ ಹೇಳಿ, ಇಲ್ಲ ಧಮ್‌ ಇದ್ರೆ ಅವನೇ ಎಲ್ಲಿದ್ದಾನೋ ನಾನೇ ಅಲ್ಲಿಗೆ ಹೋಗ್ತೀನಿ. ಪ್ರೇಮ್‌ನ ನಂಬಿ ಸಿನಿಮಾ ಮಾಡಿದವರೆಲ್ಲರೂ ಸರ್ವನಾಶವಾಗಿದ್ದಾರೆ. ನನ್ನ ಹತ್ತಿರವೇ 10 ಲಕ್ಷ ರೂಪಾಯಿ ಹಣ ಪಡೆದು 18 ವರ್ಷಗಳಾಗಿವೆ. ಇವತ್ತಿನವರೆಗೂ ಹಣ ಹಿಂದಿರುಗಿಸಿಲ್ಲ. ಫೋನ್ ಮಾಡಿದ್ರೆ ರಿಸೀವ್ ಮಾಡಲ್ಲ. ಗಂಡಸಾಗಿದ್ದರೆ ಎದುರಿಗೆ ಬಾ ಎಂದು ಕನಕಪುರ ಶ್ರೀನಿವಾಸ್‌ ನಿಂದಿಸಿದ್ದರು.

ಪತ್ರಿಕಾಗೋಷ್ಠಿಯಲ್ಲಿ ಕೇವಲವಾಗಿ ಮಾತನಾಡಿರುವ ಕನಕಪುರ ಶ್ರೀನಿವಾಸ್ ವಿರುದ್ಧ ಜೋಗಿ ಪ್ರೇಮ್‌ ಫಿಲ್ಮ್ ಚೇಂಬರ್‌ಗೆ ಕಂಪ್ಲೇಂಟ್ ಕೊಟ್ಟಿದ್ದಾರೆ. ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷೆ ಡಾ ಜಯಮಾಲಾ ಅವರಿಗೆ ಲಿಖಿತ ದೂರು ನೀಡಿದ್ದಾರೆ. ದೂರು ಸ್ವೀಕರಿಸಿರುವ ಡಾ ಜಯಮಾಲಾ. ಕನಕಪುರ ಶ್ರೀನಿವಾಸ್ ಅವರನ್ನ ಕರೆಯಿಸಿ ಮಾತನಾಡುವುದಾಗಿ ತಿಳಿಸಿದ್ದಾರೆ.

 

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now