Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ವೈಯಕ್ತಿಕ ಲೈಫ್ ನಲ್ಲಿ ಪ್ರಾಬ್ಲಮ್ ಆದ್ರೂ ವಿನ್ ಆಯ್ತು ಆರ್ಸಿಬಿ : ಸ್ಮೃತಿ ಬಗ್ಗೆ ಶ್ರೇಯಾಂಕ ಹೇಳಿದ್ದೇನು..?

---Advertisement---

ಇತ್ತೀಚೆಗೆ ಸ್ಮೃತಿ ಮಂದಾ‌ನ ಮದುವೆ ಫಿಕ್ಸ್ ಆಗಿತ್ತು. ಆದರೆ ಕಡೆ ಗಳಿಗೆಯಲ್ಲಿ ಮದುವೆ ಮುರಿದು ಬಿದ್ದಿತ್ತು. ಇದರಿಂದ ಸ್ಮೃತಿ ಮಂದಾನ ತಂದೆಗೂ ಅನಾರೋಗ್ಯ ಉಂಟಾಗಿತ್ತು. ಇದೆಲ್ಲದರ ನಡುವೆಯೇ ಆರ್ಸಿಬಿ ಮ್ಯಾಚ್ ಕೂಡ ಶುರುವಾಗಿತ್ತು. ಇದೀಗ ಏನೇ ಸಮಸ್ಯೆಗಳು ಇದ್ದರು ಆರ್ಸಿಬಿ ಮ್ಯಾಚ್ ವಿನ್ ಆಗುವಂತೆ ಮಾಡಿದ್ದಾರೆ. ಇದಕ್ಕೆ ಇಡೀ ಟೀಂ ಇಂಡಿಯಾ ಸ್ಮೃತಿ ಮಂದಾನ ಅವರನ್ನ ಹಾಡಿ‌ಕೊಂಡಾಡಿದೆ.

ಫೈನಲ್ ಪಂದ್ಯದಲ್ಲಿ ಆರ್ಸಿಬಿ ಆಟಗಾರ್ತಿಯರು ಅಬ್ಬರಿಸಿ ಬೊಬ್ಬಿರಿದಿದ್ದಾರೆ. ಆರ್ಸಿಬಿ ಪರ ನಾಯಕಿ ಸ್ಮೃತಿ ಮಂದಾನ 87 ರನ್ ಬಾರಿಸಿದರೆ, ಜಾರ್ಜಿಯಾ ವೋಲ್ 79 ರನ್ ಸಿಡಿಸಿ ತಂಡಕ್ಕೆ ಜಯ ತಂದಿತ್ತರು. ಆರ್ಸಿಬಿಯನ್ನು ಅತ್ಯಂತ ಸ್ಥಿರ ತಂಡವನ್ನಾಗಿ ರೂಪಿಸುವಲ್ಲಿ ಸ್ಮೃತಿ ಪಾತ್ರ ದೊಡ್ಡದು ಎಂಬುದು ಮತ್ತೊಮ್ಮೆ ಸಾಬೀತಾಗಿದೆ. ಮೈದಾನದಲ್ಲಿ ಕಪ್ ಎತ್ತಿ ಹಿಡಿದು ನಗುತ್ತಿರುವ ಸ್ಮೃತಿ ಮಂದಾನ, ಕಳೆದ‌ಕೆಲವು ತಿಂಗಳುಗಳಿಂದ ವೈಯಕ್ತಿಕವಾಗಿ ಸಾಕಷ್ಟು ನೋವು ಅನುಭವಿಸಿದ್ದರು. ಸಂಗೀತ ನಿರ್ದೇಶಕ ಪಲಾಶ್ ಮುಚ್ಚಲ್ ಜೊತೆಗಿನ ಅವರ ಮದುವೆ ರದ್ದಾಗಿದ್ದು ಅವರ ಜೀವನದಲ್ಲಿ ದೊಡ್ಡ ಬಿರುಗಾಳಿಯನ್ನೇ ಎಬ್ಬಿಸಿತ್ತು.

ನಾಯಕಿ ಸ್ಮೃತಿ ಮಂದಾನ ಇತ್ತೀಚೆಗೆ ತಮ್ಮ ವೈಯಕ್ತಿಕ ಜೀವನದಲ್ಲಿ ಕಠಿಣ ಸಮಯವನ್ನು ಎದುರಿಸಿದ್ದರು. ಅದೆಲ್ಲವನ್ನೂ ಬದಿಗಿಟ್ಟು, ತಂಡವನ್ನು ಮುನ್ನಡೆಸಿದ ರೀತಿ ಮತ್ತು ಅವರು ತೋರಿದ ಸ್ಥೈರ್ಯ ಅದ್ಭುತ. ಈ ಗೆಲುವನ್ನು ನಾವು ಅವರಿಗೆ ಸಮರ್ಪಿಸುತ್ತೇವೆ ಎಂದು ಭಾವುಕವಾಗಿ ನುಡಿದಿದ್ದಾರೆ. ನವೆಂಬರ್ 23, 2025 ರಂದು ಸಾಂಗ್ಲಿಯಲ್ಲಿ ನಡೆಯಬೇಕಿದ್ದ ಮದುವೆ, ಅಂದೇ ಸ್ಮೃತಿ ಅವರ ತಂದೆಗೆ ಆದ ಹಠಾತ್ ಆರೋಗ್ಯ ಸಮಸ್ಯೆಯಿಂದ ಮುಂದೂಡಲ್ಪಟ್ಟಿತ್ತು.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now

ಮಿಸ್ ಮಾಡ್ದೆ ಓದಿ

ಸ್ವಾತಂತ್ರ್ಯ ದಿನಾಚರಣೆ: 1 ಕೋಟಿ ಯುವಕರಿಗೆ ಎಐ ತರಬೇತಿ, ಉಚಿತ ಆನ್‌ಲೈನ್ ಕೋಚಿಂಗ್ ಘೋಷಿಸಿದ ಪ್ರಧಾನಿ ಮೋದಿ

ಬರ ನಿರ್ವಹಣೆಗೆ ಸರ್ಕಾರದ ಆದ್ಯತೆ: ಬಿತ್ತನೆ ವೈಫಲ್ಯದಡಿ ರೂ. 167 ಕೋಟಿ ಬೆಳೆ ವಿಮೆ ಪರಿಹಾರಕ್ಕೆ ವರದಿ : ಸಚಿವ ಟಿ. ರಘುಮೂರ್ತಿ

ಸ್ವಾತಂತ್ರ್ಯೋತ್ಸವದಂದು ರೈತರಿಗೆ ಸಿಎಂ ಗಿಫ್ಟ್: ರೈತ ಮಿತ್ರ ಯೋಜನೆ ಘೋಷಣೆ

ಮಹಿಳಾ ಮೀಸಲಾತಿಗೆ ರಾಜಕೀಯ ಪಕ್ಷಗಳು ಬೆಂಬಲ ನೀಡಬೇಕು : ಪ್ರಧಾನಿ ಮೋದಿ ಮನವಿ

BREAKING NEWS : ಮಾಣಿಕ್ ಷಾ ಪರೇಡ್ ಮೈದಾನದಲ್ಲಿ ಧ್ವಜಾರೋಹಣ ನೆರವೇರಿಸಿದ ಸಿಎಂ ಡಿ.ಕೆ. ಶಿವಕುಮಾರ್

ಚಿತ್ರದುರ್ಗದಲ್ಲಿ ನ್ಯೂಬರ್ಗ್ ಸಹಯೋಗದೊಂದಿಗೆ ವಾಸವಿ ಡಯಾಗ್ನೊಸ್ಟಿಕ್ಸ್ ಸೇವೆ ವಿಸ್ತರಣೆ : ಸ್ವಾತಂತ್ರ್ಯೋತ್ಸವ ದಿನಾಚರಣೆಯ ಪ್ರಯುಕ್ತ ರಿಯಾಯಿತಿ ದರದಲ್ಲಿ ವಿವಿಧ ಆರೋಗ್ಯ ಪ್ಯಾಕೇಜ್ಗಳು ಲಭ್ಯ