ಸುದ್ದಿಒನ್, ಚಿತ್ರದುರ್ಗ, ಫೆಬ್ರವರಿ. 06 : ತಾಲ್ಲೂಕಿನ ಗ್ರಾಮಾಂತರ ಪ್ರದೇಶದ ಈ ಕೆಳಗಿನ ಊರುಗಳಲ್ಲಿ ಫೆಬ್ರವರಿ. 08 ರಂದು ಬೆಳಿಗ್ಗೆ 10.00 ರಿಂದ ಸಂಜೆ 5:00 ಗಂಟೆಯವರೆಗೆ ವಿದ್ಯುತ್ ವ್ಯತ್ಯಯವಾಗಲಿದೆ.
ವಿದ್ಯುತ್ ಅಡಚಣೆ ಯಾಗುವ ಪ್ರದೇಶಗಳು :
ಚಿತ್ರದುರ್ಗ, ಭರಮಸಾಗರ, ಸಿರಿಗೆರೆ, ವಿಜಾಪುರ, ಹಿರೆಗುಂಟನೂರು, ಪಂಡರಹಳ್ಳಿ, ಹೆಚ್.ಡಿ.ಪುರ, ಚಿತ್ರಹಳ್ಳಿ, ಮಾದನಾಯಕನಹಳ್ಳಿ, ತುರುವನೂರು, ಬಾಲೇನಹಳ್ಳಿ, ಹೊಳಲ್ಕೆರೆ, ಜೆ.ಎನ್.ಕೋಟೆ, ರಾಮಗಿರಿ, ಅರಸನಘಟ್ಟ , ಚಿಕ್ಕಜಾಜೂರು, ಗೋಡಬನಾಳು ಮತ್ತು ಸುತ್ತಮುತ್ತಲಿನ ಗ್ರಾಮಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ. ಗ್ರಾಹಕರು ಸಹಕರಿಸಬೇಕು ಎಂದು ಚಿತ್ರದುರ್ಗ ಬೆಸ್ಕಾಂ ಕಾರ್ಯನಿರ್ವಾಹಕ ಇಂಜಿನಿಯರ್ ತಿಳಿಸಿದ್ದಾರೆ.















