ಇಂಡಿಯನ್ ಇಂಟರ್ ನ್ಯಾಷನಲ್ ಸ್ಕೂಲ್, ಚಿತ್ರದುರ್ಗ
2026-27ನೇ ಸಾಲಿನ ದಾಖಲಾತಿಗಳು ಪ್ರಾರಂಭ! (ಪ್ಲೇ ಗ್ರೂಪ್‌ನಿಂದ 12ನೇ ತರಗತಿವರೆಗೆ)
2026-27ನೇ ಸಾಲಿನ ದಾಖಲಾತಿಗಳು ಪ್ರಾರಂಭ! (ಪ್ಲೇ ಗ್ರೂಪ್‌ನಿಂದ 12ನೇ ತರಗತಿವರೆಗೆ)
ಶಿವಮೊಗ್ಗ: ಸುಚಿತ್ರಾ ಮತ್ತು ಕಮಲಾಕರ್ ಭಟ್ ಅಕ್ರಮ ಸಂಬಂಧದಿಂದ ಒಂದು ಜೀವ ಹೋಗಿದೆ. ಈ ಸಂಬಂಧ ತನಿಖೆಯೂ ಚುರುಕುಗೊಂಡಿದೆ. ಮಹೇಶ್ ಪುತ್ರಿ ಜ್ಯೋತಿಷಿ ಬಗ್ಗೆ ಮಾತನ್ನಾಡಿದ್ದಾರೆ. ತನ್ನ ತಾಯಿಯನ್ನ ಆ ಜ್ಯೋತಿಷಿ ಏನಂತ ಕರಿತಿದ್ರು ಎಂಬುದನ್ನ ಹೇಳಿದ್ದಾರೆ. ಅಷ್ಟೇ ಅಲ್ಲ ಅಮ್ಮನೇ ವಿಷ ಹಾಕಿ ಮುಗಿಸುತ್ತೀನಿ ಎಂಬ ಮಾತನ್ನ ಹೇಳಿದ್ದಳು ಎಂಬ ಭಯಾನಕ ಸತ್ಯವನ್ನ ಬಾಯ್ಬಿಟ್ಟಿದ್ದಾಳೆ.
ನಾವೂ ಮೊದಲಿನಿಂದಲೂ ಸಿದ್ದಾಪುರದಲ್ಲಿಯೇ ಇದ್ದೆವು. 9 ತಿಂಗಳ ಹಿಂದೆ ಶಿವಮೊಗ್ಗಕ್ಕೆ ಬಂದೆವು. ಇಲ್ಲಿ ನನ್ನ ತಾಯಿಗೆ ಕಮಲಾಕರ್ ಭಟ್ ಗುರೂಜಿಯ ಪರಿಚಯವಾಯ್ತು. ಆತ ಶಿವಮೊಗ್ಗದಲ್ಲಿ ನನಗೆ ಕಾಲ್ ಸೆಂಟರ್ ಕೆಲಸ ಕೊಡಿಸಿದ್ದ. ಆದರೆ ಅಮ್ಮ ಇಲ್ಲದ ಸಮಯದಲ್ಲಿ ಆತ ನನಗೆ ತುಂಬಾ ಹಿಂಸೆ ನೀಡುತ್ತಿದ್ದ. ಈ ಬಗ್ಗೆ ಅಮ್ಮನಿಗೆ ಹೇಳಿದರೂ ಆಕೆ ಗುರೂಜಿಯ ಪರವಾಗಿಯೇ ಇದ್ದಳು.
ಮೊನ್ನೆ ಒಂದು ದಿನ ನೀನು ನಿನ್ನ ಅಪ್ಪನ ಜೊತೆಗೆ ಹೋಗು. ಇಲ್ಲದಿದ್ದರೆ ವಿಷ ಹಾಕಿ ಮುಗಿಸುತ್ತೇನೆ ಎಂದು ಅಮ್ಮನೆ ಬೆದರಿಕೆ ಹಾಕಿದ್ದಳು. ಅಮ್ಮ ಮತ್ತು ಗುರೂಜಿ ಒಂದೇ ರೂಮಿನಲ್ಲಿ ಇರುತ್ತಿದ್ದರು. ಗುರೂಜಿ ನನ್ನ ತಾಯಿಯನ್ನು ಚಿನ್ನ, ಬಂಗಾರ, ಮುದ್ದು ಅಂತೆಲ್ಲಾ ಕರೆಯುತ್ತಿದ್ದ. ನಮ್ಮಿಬ್ಬರ ನಡುವೆ ಜಗಳ ತಂದಿಡುತ್ತಿದ್ದ. ಇದರಿಂದ ಒಮ್ಮೆ ಆತ್ಮಹತ್ಯೆಗೂ ಯತ್ನಿಸಿದ್ದೆ ನಾನು. ನನ್ನ ತಂದೆಯನ್ನೂ ಮುಗಿಸಲು ಇವರಿಬ್ಬರು ಸೇರಿ ಸ್ಕೆಚ್ ಹಾಕಿದ್ದರು. ಇದಕ್ಕಾಗಿ ಹಿಂದಿ ಮಾತನ್ನಾಡುವ ಐವರಿಗೆ ಸುಪಾರಿ ಕೊಟ್ಟಿದ್ದರು ಎಂದು ಹೇಳಿಕೆ ನೀಡಿದ್ದಾರೆ.

ನಿಮ್ಮ ಊರಿನ ಅದ್ಧೂರಿ ಜಾತ್ರೆ, ವಿಶೇಷ ಆಚರಣೆಗಳು, ಅಥವಾ ನಿಮ್ಮ ಗಮನಕ್ಕೆ ಬಂದ ಸ್ಥಳೀಯ ಸಮಸ್ಯೆಗಳೇ? ಚಿತ್ರದುರ್ಗ ಹಾಗೂ ಸುತ್ತಮುತ್ತಲಿನ ಯಾವುದೇ ಸುದ್ದಿಯಾದರೂ ನಮಗೆ ತಿಳಿಸಿ. ನಿಮ್ಮ ಧ್ವನಿಯಾಗಿ ನಾವು ನಾಡಿಗೆ ತಲುಪಿಸುತ್ತೇವೆ. ಛಾಯಾಚಿತ್ರ ಮತ್ತು ವಿವರಗಳೊಂದಿಗೆ ನಮಗೆ ಇಮೇಲ್ ಮಾಡಿ.
✉️ suddionenews@gmail.com🛡️ ನಿಮ್ಮ ಮಾಹಿತಿಯನ್ನು ಗೌಪ್ಯವಾಗಿಡಲಾಗುವುದು.






ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್