ಸುದ್ದಿಒನ್, ಚಿತ್ರದುರ್ಗ, ಜನವರಿ. 28 : ಹಿಂಗಾರು ಹಂಗಾಮಿನಲ್ಲಿ ಬೆಳೆದ ಶೇಂಗಾಕ್ಕೆ ಉತ್ತಮ ಬೆಲೆ ಸಿಗುತ್ತಿದೆ. ಚಿತ್ರದುರ್ಗ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯಲ್ಲಿ (ಎಪಿಎಂಸಿ) ಜ. 28ರಂದು ದಾಖಲೆ ಬೆಲೆಗೆ ಶೇಂಗಾ ಮಾರಾಟವಾಗಿದೆ.
ಉತ್ಕೃಷ್ಟ ಗುಣಮಟ್ಟದ ಶೇಂಗಾ ಕ್ವಿಂಟಲ್ಗೆ ₹11090 ದರಕ್ಕೆ ಮಾರಾಟವಾಗಿದೆ. ಕಳೆದ ಜನವರಿ 23 ರಂದು ಗರಿಷ್ಠ ಬೆಲೆ ₹. 8525 ಗಳಿಗೆ ಮಾರಾಟವಾಗಿತ್ತು. ಆದರೆ ಇಂದಿನ ಗರಿಷ್ಠ ಬೆಲೆ 11090 ಗಳಿಗೆ ಮಾರಾಟವಾಗಿದೆ.
ಇಂದಿನ ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ ಕಡಲೆ, ಶೇಂಗಾ, ಸೂರ್ಯಕಾಂತಿ, ಮೆಕ್ಕೆಜೋಳ ಸೇರಿದಂತೆ ಇತರೆ ಉತ್ಪನ್ನಗಳ (ಸರಕು) ಇಂದಿನ (ಜನವರಿ.28 ರ, ಬುಧವಾರ) ಮಾರುಕಟ್ಟೆಯಲ್ಲಿ ಧಾರಣೆ ಯಾದ ಕನಿಷ್ಠ ಮತ್ತು ಗರಿಷ್ಠ ದರ ಈ ಕೆಳಕಂಡಂತೆ ಇದೆ.
ಉತ್ಪನ್ನ (ಸರಕು) ಕನಿಷ್ಠ ಗರಿಷ್ಠ
1. ಕಡಲೆ 5090 5690
2. ಅವರೆ 3060 5220
3. ಹೆಸರುಕಾಳು
4. ಶೇಂಗಾ 6450 11090
5. ಹುರುಳಿ 3025 3865
6. ಕುಸುಮೆ
7. ಹಲಸಂದೆ 4901 6901
8. ಮೆಕ್ಕೆಜೋಳ 1209 1935
9. ಮೆಕ್ಕೆಜೋಳ (ಕಾರ್ನ್) 2850 3180
10. ಸೂರ್ಯಕಾಂತಿ 5273 5273
11. ತೊಗರಿ 3170 8010
12. ತೊಗರಿ ಬೇಳೆ 3010 5210
ಸೂಚನೆ :
• ಎಲ್ಲಾ ದರಗಳು 100 ಕೆಜಿ ಮತ್ತು ಉತ್ತಮ ಗುಣಮಟ್ಟ.
• ದರಗಳು ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ನಿಯಮಗಳಿಗೆ ಒಳಪಟ್ಟಿರುತ್ತವೆ.
• ದರಗಳು ಇಂದಿನ ಮಾರುಕಟ್ಟೆ ದರವನ್ನು ಮಾತ್ರ ಸೂಚಿಸುತ್ತದೆ.


















