ಬೆಂಗಳೂರು: ಮನ್ರೇಗಾ ಮರುಜಾರಿ ಮಾಡುವಂತೆ ಕೇಂದ್ರ ಸರ್ಕಾರವನ್ನು ಒತ್ತಾಯಿಸಿ, ಕಾಂಗ್ರೆಸ್ ಇಂದು ಫ್ರೀಡಂ ಪಾರ್ಕ್ ನಲ್ಲಿ ಬೃಹತ್ ಮಟ್ಟದಲ್ಲಿ ಹೋರಾಟವನ್ನು ಮಾಡಿದೆ. ರಾಜಭವನ್ ಚಲೋಗೂ ಚಾಲನೆ ನೀಡಿದ್ದಾರೆ. ಈ ಸಂಬಂಧ ಸಿಎಂ ಸಿದ್ದರಾಮಯ್ಯ ಅವರು ಪ್ರತಿಕ್ರಿಯೆ ನೀಡಿದ್ದಾರೆ.
ಕೆಪಿಸಿಸಿ ವತಿಯಿಂದ ರಾಜ್ಯಮಟ್ಟದಲ್ಲಿ ಪ್ರತಿಭಟನೆ ಹಮ್ಮಿಕೊಂಡಿದ್ದೆವು. ಸಾವಿರಾರು ಜನ ಭಾಗಿಯಾಗಿದ್ರು. ಹೈಕೋರ್ಟ್ ಆದೇಶ ಇದ್ದಿದ್ದರಿಂದ ಫ್ರೀಡಂ ಪಾರ್ಕ್ ನಲ್ಲಿ ಪ್ರತಿಭಟನೆ ಮಾಡಿದೆವು. ಆದರೆ ಎರಡು ಬಸ್ ನಲ್ಲಿ ಮಾತ್ರ ರಾಜಭವನಕ್ಕೆ ಬಂದಿದ್ದೆವು. ಇತ್ತೀಚೆಗೆ ಕೇಂದ್ರ ಸರ್ಕಾರ ಮನ್ರೇಗಾ ಕಾಯ್ದೆಯನ್ನ ರದ್ದು ಮಾಡಿ, ವಿಬಿಜಿ ರಾಮ್ ಜಿ ಅಂತ ಮಾಡಿದ್ದಾರೆ. ಮನ್ರೇಗಾದಲ್ಲಿ ಹಳ್ಳಿಗಾಡಿನ ಕೂಲಿಕಾರ್ಮಿಕರು, ದಲಿತರು, ಮಹಿಳೆಯರು, ಸಣ್ಣ ರೈತರು ಇವರೆಲ್ಲರೂ 100 ದಿನಗಳ ಕಾಲ ಯಾವಾಗ ಕೆಲಸ ಕೇಳ್ತಾರೆ ಆಗ ಕೂಲಿ ಕೊಡುವಂತ ನಿಯಮ ಇತ್ತು. ಸುಮಾರು 20 ವರ್ಷಗಳ ಹಿಂದೆ ಮನಮೋಹನ್ ಸಿಂಗ್ ಅವರು ಮಾಡಿದ್ದರು.
ಎಲ್ಲದಕ್ಕಿಂತ ಬಹಳ ಮುಖ್ಯವಾಗಿ ಹಳ್ಳಿ ಜನರ ಕೆಲಸವನ್ನ ಕಿತ್ತುಕೊಳ್ತಾ ಇದ್ದಾರೆ. ಇವರಿಗೆ ಮಾರ್ಗದರ್ಶನ ಮಾಡೋದು ಯಾರು ಅಂದ್ರೆ ಆರ್ ಎಸ್ ಎಸ್ ನವರು. ಯಾಕಂದ್ರೆ ಜನರ ಕೈಲಿ ದುಡ್ಡಿರಬಾರದು ಅಂತ. ಅವರ ಕೈಲಿ ದುಡ್ಡಿದ್ದರೆ ಸೇವಕರಾಗಿರುವುದಿಲ್ಲ ಅಂತ. ಸೇವಕರಾಗಿರಬೇಕು ಅನ್ನೋದೇ ಬಿಜೆಪಿ, ಆರ್ ಎಸ್ ಎಸ್ ಉದ್ದೇಶ. ನಮ್ಮ ಹೋರಾಟವನ್ನು ಇಡೀ ದೇಶದಲ್ಲಿ ಮಾಡ್ತೇವೆ. ಕಾಯ್ದೆ ಇದೆಯಲ್ಲ ವಿಬಿಜಿ ರಮಾ್ ಜಿ ಇದನ್ನ ರದ್ದು ಮಾಡಿ, ಮತ್ತೆ ಮನ್ರೇಗಾ ಕಾಯ್ದೆ ಜಾರಿಗೆ ತರಬೇಕು ಎಂದು ಒತ್ತಾಯ ಹಾಕುತ್ತಿದ್ದೇವೆ ಎಂದಿದ್ದಾರೆ.
ಸಾರ್ವಜನಿಕ ಕುಂದುಕೊರತೆ ವಿಭಾಗ : ನಿಮ್ಮ ಧ್ವನಿ - ನಮ್ಮ ವೇದಿಕೆ
ನಿಮ್ಮ ಊರಿನ ಸಮಸ್ಯೆಗಳು ಇನ್ನು ಮುಂದೆ ಕೇವಲ ಚರ್ಚೆಯಾಗಬಾರದು, ಅವುಗಳಿಗೆ ಪರಿಹಾರ ಸಿಗಬೇಕು.
ವರದಿ ಮಾಡುವುದು ಹೇಗೆ?
- ನಿಮ್ಮ ಸುತ್ತಮುತ್ತಲಿನ ರಸ್ತೆ, ನೀರು, ವಿದ್ಯುತ್ ಸಮಸ್ಯೆಗಳ ಫೋಟೋ, ವಿಡಿಯೋ ಅಥವಾ ಮಾಹಿತಿ ನಮಗೆ ಕಳುಹಿಸಿ.
ನಾವು ಏನು ಮಾಡುತ್ತೇವೆ?
- ನೀವು ಕಳುಹಿಸಿದ ವರದಿಗಳನ್ನು suddione.com ನಲ್ಲಿ ಪ್ರಕಟಿಸುತ್ತೇವೆ.
- ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದು ಪರಿಹಾರಕ್ಕಾಗಿ ಒತ್ತಾಯಿಸುತ್ತೇವೆ.
- ನಿಮ್ಮೂರಿನ ಅಭಿವೃದ್ಧಿಗೆ ನಿಮ್ಮೊಂದಿಗೆ ಧ್ವನಿಗೂಡಿಸುತ್ತೇವೆ.











