ಬೆಂಗಳೂರು: ಶಿಡ್ಲಘಟ್ಟದ ರಾಜೀವ್ ಗೌಡ ಅರೆಸ್ಟ್ ಆದ ಬೆನ್ನಲ್ಲೇ ತಪ್ಪಿಸಿಕೊಳ್ಳಲು ಸಹಾಯ ಮಾಡಿದ್ದ ಮಂಗಳೂರಿನ ಉದ್ಯಮಿಯನ್ನು ಪೊಲೀಸರು ಬಂಧಿಸಿದ್ದಾರೆ. ಮಂಗಳೂರಿನ ಮೈಕಲ್ ಜೋಸೆಫ್ ರೇಗೋ ಬಂಧಿತರಾಗಿರುವ ಉದ್ಯಮಿ. ಪಚ್ಚನಾಡಿ ಬಳಿ ಈತನಿಗೆ ಸೇರಿದ್ದ ಜೆ.ಕೆ.ಫಾರ್ಮ್ ಹೌಸ್ ನಲ್ಲಿ ರಾಜೀವ್ ಗೌಡ ತಲೆ ಮರೆಸಿಕೊಂಡಿದ್ದರು. ಈ ವಿಚಾರ ಪೊಲೀಸರಿಗೆ ತಿಳಿದು, ಅಲ್ಲಿಯೇ ಹುಡುಕಿ ಹೊರಟಿದ್ದರು.
ಪೊಲೀಸರು ಹುಡುಕುತ್ತಿರೋದು, ಮಂಗಳೂರಿಗೂ ಬರ್ತಾ ಇರೋದು ರಾಜೀವ್ ಗೌಡ ಗಮನಕ್ಕೆ ಬಂದಿದೆ. ಅಲ್ಲಿಂದ ರಾಜೀವ್ ಗೌಡ ತನ್ನ ಕಾರನ್ನ ಮಂಗಳೂರು ಏರ್ಪೋರ್ಟ್ ನಲ್ಲಿಯೇ ನಿಲ್ಲಿಸಿ, ಉದ್ಯಮಿ ಜೋಸೇಫ್ ಕಾರಿನಲ್ಲಿ ಕೇರಳಕ್ಕೆ ಎಸ್ಕೇಪ್ ಆಗಿದ್ದಾರೆ. ಇಬ್ಬರನ್ನು ಪೊಲೀಸರು ಕೇರಳದಲ್ಲಿಯೇ ಬಂಧಿಸಿ ಕರೆ ತಂದಿದ್ದಾರೆ.
ಜಮೀರ್ ಅಹ್ಮದ್ ಪುತ್ರ ಝೈದ್ ಖಾನ್ ಸಿನಿಮಾದ ಬ್ಯಾನರ್ ಹಾಕಿ, ಅವರನ್ನ ಮೆಚ್ಚಿಸಲು ಹೋಗಿ ಇಂದು ಜೈಲು ಕಂಬಿಗಳ ಹಿಂದೆ ಕೂರುವಂತ ಪರಿಸ್ಥಿತಿ ಬಂದೊದಗಿದೆ. ಅದರಲ್ಲೂ ರೋಡಿಗೆ ಬ್ಯಾನರ್ ಹಾಕಲಾಗಿತ್ತು. ವಾಹನ ಸವಾರರು ಓಡಾಡುವಾಗ ಆಕ್ಸಿಡೆಂಟ್ ಗಳು ಆಗುವ ಸಾಧ್ಯತೆ ಇತ್ತು. ಸಿನಿಮಾದ ಬ್ಯಾನರ್ ತೆಗೆದಿದ್ದಕ್ಕೆ ಆಯುಕ್ತೆಗೆ ಬಾಯಿಗೆ ಬಂದ ಹಾಗೇ ಮಾತನ್ನಾಡಿದ್ದರು. ನನ್ನ ಕೆಟ್ಟತನವನ್ನು ತೋರಿಸಬೇಕಾಗುತ್ತೆ ಎಂದು ಧಮ್ಕಿ ಹಾಕಿದ್ದರು. ಅದರ ಪರಿಣಾಮ ಇಂದು ಜೈಲಿನ ಅತಿಥಿಯಾಗಿದ್ದಾರೆ ರಾಜೀವ್ ಗೌಡ. ರಾಜಕೀಯದಲ್ಲಿ ತಾನೂ ಕೂಡ ಒಂದೊಳ್ಳೆ ಸ್ಥಾನಕ್ಕೆ ಹೋಗಬೇಕು ಎಂದು ಒದ್ದಾಡುತ್ತಿರುವ ಮನುಷ್ಯ, ನಾಲಿಗೆಯನ್ನ ಹರಿ ಬಿಟ್ಟರೆ ಎಷ್ಟು ನಷ್ಟವಾಗಬಹುದು ಎಂಬುದು ಈಗ ಅರ್ಥವಾದಂತೆ ಇದೆ. ನಾಮಾಕವಸ್ಥೆಗೆ ನ್ಯೂಸ್ ಚಾನೆಲ್ ಗಳ ಮೂಲಕ ಕ್ಷಮೆಯನ್ನು ಕೇಳುದ್ದರು.











