ಸುದ್ದಿಒನ್, ಚಿತ್ರದುರ್ಗ, ಜನವರಿ, 23 : ಚಿತ್ರದುರ್ಗ ಜಿಲ್ಲೆ ಬೃಹತ್ ವಿಜ್ಞಾನ ನಗರಿಯಾಗಲಿದೆ ಎಂದು ಭಾರತೀಯ ವಿಜ್ಞಾನ ಸಂಸ್ಥೆಯ ಡಾ. ರಾಘವೇಂದ್ರ ತಿಳಿಸಿದರು.
ನಗರದ ಹೊರವಲಯದಲ್ಲಿರುವ ಭೋವಿ ಗುರುಪೀಠದಲ್ಲಿ ಗುರುವಾರ ನಡೆದ ಜ್ಞಾನ ಸಂಭ್ರಮ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ನಗರಿಯಿಂದಾಗಿ ಸ್ಥಳೀಯವಾಗಿ ಸಾವಿರಾರು ಉದ್ಯೋಗಾವಕಾಶಗಳು ಸೃಷ್ಟಿಯಾಗಲಿದ್ದು, ಚಿತ್ರದುರ್ಗವು ಜಾಗತಿಕ ಭೂಪಟದಲ್ಲಿ ಗುರುತಿಸಿಕೊಳ್ಳುವಂತಾಗಿದೆ ಎಂದು ಹೇಳಿದರು.

ಚಿತ್ರದುರ್ಗ ಜಿಲ್ಲೆ ಚಳ್ಳಕೆರೆ ತಾಲೂಕು ಕುದಾಪುರದಲ್ಲಿ ಜಾಗತಿಕ ಮಟ್ಟದ ‘ಸೈನ್ಸ್ ಸಿಟಿ’: ಐಐಎಸ್‌ಸಿ (IISc) ಮತ್ತು ಜನಾರ್ದನ ಸ್ವಾಮಿ ಅವರ ದೂರದೃಷ್ಟಿಯಾಗಿದೆ.
ಬೆಂಗಳೂರಿನ ಹೆಮ್ಮೆಯ ಭಾರತೀಯ ವಿಜ್ಞಾನ ಸಂಸ್ಥೆ (IISc) ಈಗ ಚಿತ್ರದುರ್ಗದ ಚಳ್ಳಕೆರೆ ತಾಲ್ಲೂಕಿನ ಕುದಾಪುರದಲ್ಲಿ ತನ್ನ ಬೃಹತ್ ವಿಸ್ತರಣಾ ಕೇಂದ್ರದ ಮೂಲಕ ಶೈಕ್ಷಣಿಕ ಕ್ರಾಂತಿ ಮಾಡುತ್ತಿದೆ. ಈ ಯೋಜನೆಯು ಜಿಲ್ಲೆಯ ಚಿತ್ರಣವನ್ನೇ ಬದಲಿಸಲಿದ್ದು, ಭಾರತದ ಪ್ರಮುಖ ವಿಜ್ಞಾನ ಕೇಂದ್ರವಾಗಿ ಹೊರಹೊಮ್ಮುತ್ತಿದೆ.
ಐಐಎಸ್‌ಸಿ ಇತಿಹಾಸ ಮತ್ತು ಹಿನ್ನೆಲೆ,
ಜೆ.ಎನ್. ಟಾಟಾ ಅವರ ಕನಸಿನ ಫಲವಾಗಿ ಹಾಗೂ ಮೈಸೂರು ಮಹಾರಾಜರು ದಾನವಾಗಿ ನೀಡಿದ 380 ಎಕರೆ ಜಮೀನಿನಲ್ಲಿ ಸ್ಥಾಪಿತವಾದ ಈ ಸಂಸ್ಥೆಯು, ಇಂದು ವಿಶ್ವಮಟ್ಟದಲ್ಲಿ 38ನೇ ಸ್ಥಾನದಲ್ಲಿದೆ. ನೋಬೆಲ್ ಪುರಸ್ಕೃತ ಸಿ.ವಿ. ರಾಮನ್ ಅವರಂತಹ ಮಹನೀಯರು ಈ ಸಂಸ್ಥೆಯನ್ನು ಮುನ್ನಡೆಸಿದ್ದರು. ಬೆಂಗಳೂರಿನಲ್ಲಿ ಸ್ಥಳಾವಕಾಶದ ಕೊರತೆಯಾದ ಹಿನ್ನೆಲೆಯಲ್ಲಿ, ಚಿತ್ರದುರ್ಗದಲ್ಲಿ ಈ ನೂತನ ಕೇಂದ್ರವನ್ನು ಸ್ಥಾಪಿಸಲಾಗಿದೆ.
’ಸೈನ್ಸ್ ಸಿಟಿ’ ನಿರ್ಮಾಣದಲ್ಲಿ
ಚಿತ್ರದುರ್ಗದ ಮಾಜಿ ಸಂಸದರಾದ ಜನಾರ್ದನ ಸ್ವಾಮಿ ಅವರ ಪಾತ್ರ ಮತ್ತು ಶ್ರಮದಿಂದಾಗಿ ಈ ಬೃಹತ್ ಯೋಜನೆ ಸಾಕಾರಗೊಂಡಿದೆ. ಐಐಎಸ್‌ಸಿಯ ಹಳೆಯ ವಿದ್ಯಾರ್ಥಿಯೂ ಆಗಿರುವ ಇವರು, ಕುದಾಪುರದಲ್ಲಿ ಸುಮಾರು 10,000 ಎಕರೆ ಜಮೀನನ್ನು ವಿವಿಧ ರಾಷ್ಟ್ರೀಯ ಸಂಸ್ಥೆಗಳಿಗೆ ಮಂಜೂರು ಮಾಡಿಸುವಲ್ಲಿ ಪ್ರಮುಖ ಪಾತ್ರ ವಹಿಸಿದರು. ಈ ಜಮೀನಿನ ಹಂಚಿಕೆ ಈ ಕೆಳಗಿನಂತಿದೆ:
DRDO: 4,000 ಎಕರೆ.
BARC: 3,000 ಎಕರೆ.
IISc: 1,500 ಎಕರೆ.
ISRO: 1,500 ಎಕರೆ.
ಶಿಕ್ಷಕರ ತರಬೇತಿ ಕೇಂದ್ರ (TTC)
ಶಿಕ್ಷಕರು ದೇಶದ ಅಭಿವೃದ್ಧಿಯ ಭದ್ರ ಬುನಾದಿ ಎಂಬ ಉದ್ದೇಶದೊಂದಿಗೆ, ಚಿತ್ರದುರ್ಗದ ಕೇಂದ್ರದಲ್ಲಿ ವಿಶೇಷ ಶಿಕ್ಷಕರ ತರಬೇತಿ ಕೇಂದ್ರವನ್ನು (Teachers Training Centre) ಆರಂಭಿಸಲಾಗಿದೆ. ಇಲ್ಲಿ ಪ್ರೌಢಶಾಲೆ ಮತ್ತು ವಿಶ್ವವಿದ್ಯಾಲಯ ಮಟ್ಟದ ಶಿಕ್ಷಕರಿಗೆ ಜಾಗತಿಕ ಗುಣಮಟ್ಟದ ತರಬೇತಿ ನೀಡಲಾಗುತ್ತಿದೆ.

ಇತ್ತೀಚೆಗೆ ನಡೆದ ಸಭೆಯೊಂದರಲ್ಲಿ ಮಾತನಾಡಿದ ಗಣ್ಯರು, ಈ ಯೋಜನೆಯ ಬೆಳವಣಿಗೆಯ ಬಗ್ಗೆ ಹರ್ಷ ವ್ಯಕ್ತಪಡಿಸಿದರು. ಪ್ರೊಫೆಸರ್ ಸುಬ್ಬಾರೆಡ್ಡಿ ಅವರು ಮುನ್ನಡೆಸುತ್ತಿದ್ದಾರೆ,ಈ ಸಂಸ್ಥೆ ನೀಡುತ್ತಿರುವ ಕೊಡುಗೆಯನ್ನು ಸ್ಮರಿಸಲಾಯಿತು.
ವೇದಿಕೆಯಲ್ಲಿ ಗೌನಹಳ್ಳಿ ಗೋವಿಂದಪ್ಪ, ಶಿವಪ್ರಕಾಶ್ ಉಪಸ್ಥಿತರಿದ್ದರು












