ಚಿತ್ರದುರ್ಗ, ಜನವರಿ. 20 : ಎಸ್ಎಸ್ಎಲ್ಸಿ ನಂತರ ಉನ್ನತ ಶಿಕ್ಷಣ ಪಡೆದು ಉಜ್ವಲ ಭವಿಷ್ಯ ರೂಪಿಸಿಕೊಳ್ಳಬೇಕು ಎಂದು ಹಂಬಲಿಸುತ್ತಿರುವ ವಿದ್ಯಾರ್ಥಿಗಳಿಗೆ ಸೂಕ್ತ ಮಾರ್ಗದರ್ಶನ ನೀಡುವ ಸಲುವಾಗಿ ‘ಪ್ರಜಾವಾಣಿ’ ಹಾಗೂ ‘ಡೆಕ್ಕನ್ ಹೆರಾಲ್ಡ್’ ಪತ್ರಿಕಾ ಸಮೂಹಸಂಸ್ಥೆಯು ನಗರದ ತುರುವನೂರು ರಸ್ತೆಯ ಕಮ್ಮರೆಡ್ಡಿ ಸಮುದಾಯ ಭವನದಲ್ಲಿ ಜನವರಿ 21ರಂದು ‘ಜ್ಞಾನ ದೇಗುಲ’ ಶೈಕ್ಷಣಿಕ ಮೇಳ ಹಮ್ಮಿಕೊಂಡಿದೆ.
ಜನವರಿ. 21 ರಂದು ಬೆಳಿಗ್ಗೆ 9 ಗಂಟೆಯಿಂದ ನೋಂದಣಿ ಪ್ರಕ್ರಿಯ ಆರಂಭಗೊಳ್ಳಲಿದ್ದು, ಶೈಕ್ಷಣಿಕ ಮೇಳಕ್ಕೆ ಉಚಿತ ಪ್ರವೇಶವಿದೆ. ಎಸ್ಎಸ್ಎಲ್ಸಿ ನಂತರ ಕಲಾ, ವಿಜ್ಞಾನ, ವಾಣಿಜ್ಯ ಸೇರಿ ಯಾವ ಕೋರ್ಸ್ಗಳನ್ನು ಆಯ್ಕೆ ಮಾಡಿಕೊಳ್ಳಬಹುದು? ಎಸ್ಎಸ್ಎಲ್ಸಿವಾರ್ಷಿಕ ಪರೀಕ್ಷೆಗೆ ಹೇಗೆ ತಯಾರಿ ಮಾಡಿಕೊಳ್ಳಬಹುದು ಎಂಬ ಬಗ್ಗೆ ತಜ್ಞ ಸಂಪನ್ಮೂಲ ವ್ಯಕ್ತಿಗಳು ಮಾರ್ಗದರ್ಶನ ನೀಡಲಿದ್ದಾರೆ.
ಉತ್ತಮ ಶಿಕ್ಷಣ ಪಡೆಯಬೇಕು ಎಂಬ ಉದ್ದೇಶ ಹೊಂದಿರುವ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡುವ ದೊಡ್ಡ ಶಿಕ್ಷಣ ಮೇಳ ಇದಾಗಿದೆ.ಎಸ್ಎಸ್ಎಲ್ಸಿ ನಂತರ ಯಾವ ಕಾಲೇಜಿನಲ್ಲಿ ಓದುವುದು ಸೂಕ್ತ? ಕಾಲೇಜುಗಳಲ್ಲಿರುವ ಯಾವಯಾವ ಸೌಲಭ್ಯಗಳನ್ನು ಪರಿಗಣನೆಗೆ ತೆಗೆದುಕೊಳ್ಳಬೇಕು ಎಂಬಂತಹ ಹಲವು ಪ್ರಶ್ನೆಗಳಿಗೆ ಇಲ್ಲಿ ಉತ್ತರ ಸಿಗಲಿದೆ.ಮುಖ್ಯ ಅತಿಥಿಗಳು ಪ್ರೇರಣಾದಾಯಕ ಮಾತುಗಳನ್ನು ಆಡಲಿದ್ದಾರೆ.
ಸಂಪನ್ಮೂಲವ್ಯಕ್ತಿಗಳು ಅಗತ್ಯ ಮಾರ್ಗದರ್ಶನ ಮಾಡಲಿದ್ದಾರೆ.
ಚಿತ್ರದುರ್ಗದ
1. ಎಸ್.ಆರ್.ಎಸ್.ರೆಸಿಡೆನ್ಸಿಯಲ್ ಪಿಯು ಕಾಲೇಜ್, 2. ದೇವರಾಜ ಅರಸು ಶಿಕ್ಷಣ ಸಂಸ್ಥೆಯ ವೀನಸ್ ಅಕಾಡೆಮಿ,
3. ವಿಶ್ವಮಾನವ ಪಿಯು ಕಾಲೇಜ್,
4. ನಮ್ಮ ಎಕ್ಸ್ಪರ್ಟ್ ಕಾಂಪೊಸಿಟ್ ಪಿಯು ಕಾಲೇಜು, 5. ಬಾಪೂಜಿಗ್ರೂಪ್ ಆಫ್ ಇನ್ಸ್ಟಿಟ್ಯೂಷನ್ಸ್,
6. ಶ್ರೀ ರಾಘವೇಂದ್ರ ಗ್ರೂಪ್ ಆಫ್ ಇನ್ಸ್ಟಿಟ್ಯೂಷನ್ಸ್, 7. ಜ್ಞಾನಪೂರ್ಣ ಪಿಯು ಕಾಲೇಜ್, ದೊಡ್ಡಸಿದ್ದವ್ವನಹಳ್ಳಿ,
8. ಹೊಸದುರ್ಗದ ಎಸ್.ನಿಜಲಿಂಗಪ್ಪ ‘ಪಿಯು ಕಾಲೇಜ್, 9. ಹೊಳಲ್ಕೆರೆಯ ವಾಗ್ಗೇವಿ ಪಿಯು ಕಾಲೇಜ್,
ದಾವಣಗೆರೆಯ
1. ರಾಘವೇಂದ್ರ ಹೈಟೆಕ್ ಪಿಯು ಕಾಲೇಜ್ ಹಾಗೂ
2. ಶ್ರೀ ಶಾರದಾ ಐಐಟಿ ಮತ್ತು ನೀಟ್ ಅಕಾಡೆಮಿ,
3. ಸಿದ್ದಗಂಗಾ ಪಿಯು ಕಾಲೇಜ್,
4. ಎಸ್ಆರ್ಕೆ ಅಕಾಡೆಮಿ,
5. ಅಶ್ವಿನಿ ಮಡಿಕಲ್ ಮತ್ತು ಐಐಟಿ ಅಕಾಡೆಮಿ,
6. ಶ್ರೀ ಚೈತನ್ಯಎಜುಕೇಷನಲ್ ಇನ್ಸ್ಟಿಟ್ಯೂಷನ್ಸ್ ಹಾಗೂ 7. ಹುಬ್ಬಳ್ಳಿಯ ವಿದ್ಯಾನಿಕೇತನ ಸೈನ್ಸ್ ಪಿಯು ಕಾಲೇಜ್ ಪ್ರಾಯೋಜಕತ್ವ ವಹಿಸಿಕೊಂಡಿವೆ.

ಜಿಲ್ಲಾ ಪಂಚಾಯಿತಿ ಸಿಇಒ ಡಾ.ಎಸ್.ಆಕಾಶ್ ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ ಉದ್ಘಾಟನೆ ನಂತರ ಅವರು ವಿದ್ಯಾರ್ಥಿಗಳನ್ನುದ್ದೇಶಿಸಿ ಸ್ಫೂರ್ತಿದಾಯಕ ಮಾತುಗಳನ್ನಾಡಲಿದ್ದಾರೆ. ವಿದ್ಯಾರ್ಥಿ ಬದುಕಿನಲ್ಲಿ ಎಸ್ಎಸ್ಎಲ್ಸಿ ಎಷ್ಟು ಮುಖ್ಯ ಎಂಬ ವಿಷಯದ ಬಗ್ಗೆ ಅವರು ಮಾತನಾಡಲಿದ್ದಾರೆ.
ವಿಶೇಷ ಅತಿಥಿಗಳಾಗಿ ಶಾಲಾ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಎಂ.ಆರ್.ಮಂಜುನಾಥ್ ಪಾಲ್ಗೊಳ್ಳುವರು. ಜಿಲ್ಲೆಯಲ್ಲಿ ಎಸ್ಎಸ್ಎಲ್ಸಿ ಫಲಿತಾಂಶ ಸುಧಾರಣೆಗೆ ಶಿಕ್ಷಣ ಇಲಾಖೆ ಕೈಗೊಂಡಿರುವ ಕ್ರಮಗಳು ಹಾಗೂ ಜಿಲ್ಲೆಯಲ್ಲಿ ನಡೆಯುತ್ತಿರುವ ವಿಶೇಷ ತರಗತಿಗಳ ಬಗ್ಗೆ ಮಂಜುನಾಥ್ ಅವರು ಮಾತನಾಡಲಿದ್ದಾರೆ.
ವಿದ್ಯಾರ್ಥಿಗಳಿಗೆ ಮನಸೂರೆಗೊಳ್ಳುವ ರೀತಿಯಲ್ಲಿ ಅಜಯ್ ಕುಮಾರ್ ಅಂಗಡಿಯವರು ಪ್ರೇರಕ ಉಪನ್ಯಾಸ ನೀಡಲಿದ್ದಾರೆ. ಪರೀಕ್ಷಾ ಸಂದರ್ಭದಲ್ಲಿ ವಿದ್ಯಾರ್ಥಿಗಳು ಯಾವರೀತಿ ಅಧ್ಯಯನ ಮಾಡಬೇಕು? ಸಮಯ ಪರಿಪಾಲನೆ ಹೇಗೆ ಮಾಡಬೇಕು? ಒಂದು ವಿಷಯಕ್ಕೆ ಎಷ್ಟು ಸಮಯ ಮೀಸಲಿಡಬೇಕು?ಯಾವ ವಿಷಯಕ್ಕೆ ಹೆಚ್ಚು ಸಮಯ ನೀಡಬೇಕು?ಯಾವ ವಿಷಯಕ್ಕೆ ಕಡಿಮೆ ಸಮಯ ನೀಡಬೇಕು ಎಂಬ ಬಗ್ಗೆ ಅಂಗಡಿಯವರು ಮಾರ್ಗದರ್ಶನ ನೀಡಲಿದ್ದಾರೆ.
ನಂತರ ಎಸ್ಎಸ್ಎಲ್ಸಿ ಮುಗಿಸಿದ ಬಳಿಕ ಯಾವ ಯಾವ ಕೋರ್ಸ್ಗಳನ್ನು ಮಾಡಬಹುದು?ಮುಂದಿನ ಶೈಕ್ಷಣಿಕ ಜೀವನ ಯಾವ ರೀತಿ ಇರಬೇಕು? ಎಂಬ ಬಗ್ಗೆ ಡಾ.ವಿ.ವಿಕ್ರಮ್ ಅವರು ಮಾಹಿತಿ ನೀಡಲಿದ್ದಾರೆ. ತಮ್ಮ ಆಸಕ್ತಿಗೆ ಅನುಗುಣವಾಗಿಯಾವ ಕೋರ್ಸ್ಗಳನ್ನು ಆಯ್ಕೆ ಮಾಡಿಕೊಳ್ಳಬೇಕು. ಮುಂದಿನ ದಿನಮಾನಗಳಲ್ಲಿ ಕೌಶಲ್ಯ ಶಿಕ್ಷಣಕ್ಕೆ ಇರುವ ಬೇಡಿಕೆಗಳೇನು? ಎಂಬ ಪ್ರಶ್ನೆಗಳಿಗೆ ಅವರು ಉತ್ತರ ನೀಡಲಿದ್ದಾರೆ.
ವಿದ್ಯಾರ್ಥಿಗಳಿಗಾಗಿ ಹಲವು ಪ್ರಶ್ನೆಗಳನ್ನು ಕೇಳಲಾಗುವುದು. ಅದಕ್ಕೆ ಸರಿಯಾದ ಉತ್ತರ ನೀಡಿದವರಿಗೆ ಆಕರ್ಷಕ ಬಹುಮಾನಗಳನ್ನೂ ನೀಡಲಾಗುವುದು. ಅದೃಷ್ಟಶಾಲಿ ವಿದ್ಯಾರ್ಥಿಗಳಿಗೆ ವಿಶೇಷ ಬಹುಮಾನಗಳೂ ಇರಲಿವೆ.
ಹೆಚ್ಚಿನ ಮಾಹಿತಿಗಾಗಿ, ಸಂಪರ್ಕಿಸಿ:
Prahlad T N-8971712347, Pramodh Bhagwath – 9606912251
